ಕಲ್ಪ ಮೀಡಿಯಾ ಹೌಸ್ | ಸೊರಬ |
ಬೆಳೆಯುವ ಮಕ್ಕಳ ಮಾನಸಿಕ ಮತ್ತು ಭೌತಿಕ ಬೆಳವಣಿಗೆಗೆ ಕೇವಲ ಓದು ಬರಹವಷ್ಟೆ ಅಲ್ಲ, ಈ ನೆಲಗಟ್ಟಿನ ಸಾಂಸ್ಕೃತಿಕ ಮೌಲ್ಯಗಳನ್ನು ಸಹಾ ಪರಿಚಯಿಸುತ್ತ ಬಂದರೆ ಮುಂದೆ ಅವರು ರಾಷ್ಟ್ರ ಪ್ರಜ್ಞೆಯುಳ್ಳ ದೇಶದ ಸತ್ಪ್ರಜೆಗಳಾಗುತ್ತಾರೆ ಎಂಬ ಆಶಯವನ್ನು ಸಮರ್ಪಣ ಸಂಸ್ಥೆಯ ಸಂಚಾಲಕಿ ಮಮತಾ ರಾಜೇಶ್ ಹೇಳಿದರು.
ಪಟ್ಟಣದ ಸ್ಮಾರ್‍ಟ್‌ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಮಣ್ಣಿನ ಮುದ್ದೆಗಳಿದ್ದಂತೆ, ಈಗ ನಾವು ನೀಡುವ ಆಕಾರದಂತೆಯೇ ಅವರು ರೂಪುಗೊಳ್ಳುತ್ತಾರೆ. ಸುಪ್ತ ಪ್ರತಿಭೆಗಳನ್ನು ಅರಳಿಸಿ, ಬೆಳೆಸುವ ಇಂತಹ ಕಾರ್ಯ ಶ್ರೇಷ್ಠ. ಈ ಹಿನ್ನೆಲೆಯಲ್ಲಿ ಅವರನ್ನು ಸಕಾರಾತ್ಮಕವಾಗಿ ಅರಳಿಸುವ ಕಾರ್ಯ ಸಂಸ್ಥೆಯದ್ದಾಗಿದ್ದು, ನಾಡುನುಡಿಯ ಸಂಸ್ಕೃತಿಗನುಗುಣವಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದ ಅವರು ಮಕ್ಕಳ ದಿನಾಚರಣೆಯ ಔಚಿತ್ಯತೆ, ಹಿನ್ನೆಲೆ ಕುರಿತು ಮಾಹಿತಿ ನೀಡಿದರು.
ಮಕ್ಕಳು ವಿವಿಧ ಛದ್ಮವೇಷ, ಗೀತಗಾಯನ, ಹಾಡು, ನೃತ್ಯ, ಮಿಮಿಕ್ರಿ ಮೂಲಕ ರಂಜಿಸಿದರು. ಸಂಸ್ಥೆಯ ಕೆ.ಪಿ. ರಾಜೇಶ್, ಶಿಕ್ಷಕ ಹೀನಾ, ಆಯಾ ಆಶಾ ಮತ್ತಿತರರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post