ಕಲ್ಪ ಮೀಡಿಯಾ ಹೌಸ್ | ಸೊರಬ |
ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಬದ್ಧತೆ, ಆಸಕ್ತಿ, ಸಮಯದ ಸದುಪಯೋಗ ಮತ್ತು ಮಾಡುವ ಕೆಲಸದಲ್ಲಿನ ನಿಷ್ಠೆಯೆ ಇಡೀ ಕುಟುಂಬವನ್ನು ಗೌರವಯುತ ಸ್ಥಾನದಲ್ಲಿ ಇರಿಸುತ್ತದೆ ಎಂದು ಹೊಳಲೂರಿನ ಕೆನರಾ ಗ್ರಾಮೀಣ ಸ್ವಉದ್ಯೋಗ ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕರಾದ ಸುರೇಶ್ ಹೇಳಿದರು.
ಪಟ್ಟಣದ ಸ್ನೇಹ ಜ್ಯೋತಿ ಸಮಾಜ ಸೇವ ಕೇಂದ್ರದ ಕೌಶಲ್ಯ ತರಬೇತಿ ಮತ್ತು ಮಹಿಳಾ ಸಬಲೀಕರಣ ಯೋಜನೆಯ ಬ್ಯಾಗ್ ತಯಾರಿಕಾ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಗೌರವಯುತ ಸಂಸ್ಕಾರಯುತ ಜೀವನ ನಡೆಸಲು ಮಹಿಳೆಯರು ಸ್ವತಂತ್ರರಾಗಿ ಯೋಚನಾ ಶಕ್ತಿಯನ್ನು ಬಳಸಿಕೊಳ್ಳಬೇಕೆಂದರು.
ಫಾದರ್ ಡಿ ಮೆಲ್ಲೋ ಮಾತನಾಡಿ, ಮಹಿಳೆಯರು ಅವಿಶ್ರಾಂತ ದುಡಿಮೆಯಲ್ಲಿ ತೊಡಗಿಸಿಕೊಂಡು ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣ ನೀಡುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಪ್ರಮುಖವಾಗಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದಿದರೆ ಇನ್ನಷ್ಟು ಸಮಾಜಮುಖಿ ಚಿಂತನೆಗೆ ಅವಕಾಶ ನೀಡುತ್ತದೆ ಎಂದರು.
ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಜೋಯಲ್, ಸಂಸ್ಥೆ ವತಿಯಿಂದ ಮಹಿಳೆಯರಿಗೆ ಆಯೋಜಿಸಿದ ಚಟುವಟಿಕೆಗಳು ಮತ್ತು ಸ್ವಉದ್ಯೋಗ ಮತ್ತು ಸ್ವಾವಲಂಬನೆಗೆ ಪೂರಕ ಮಾಹಿತಿಗಳ ಬಗ್ಗೆ ವಿವರಣೆ ನೀಡಿದರು.
ಅಮರ ಜ್ಯೋತಿ ಕಾಲೇಜಿನ ಸಂಚಾಲಕಿ ಸಿಸ್ಟರ್ ಲೆನೀಟರವರು ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಿ ಮಹಿಳೆಯರ ಕಲಿಕೆ ಮತ್ತು ಸ್ವಾವಲಂಬನೆ ಬದುಕಿನ ಅಗತ್ಯತೆ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರಾದ ಅನುರಾಧ ಅಶ್ವಿನಿ ತರಬೇತಿಯ ಅವಶ್ಯಕತೆಯ ಅನಿಸಿಕೆಗಳನ್ನು ಹಂಚಿಕೊಂಡು ಈ ತರಬೇತಿಯು ತಮಗೆ ದೊರಕಿದ ಅತ್ಯುತ್ತಮ ಅವಕಾಶ. ತಾವು ಚೆನ್ನಾಗಿ ಕಲಿತು ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿದ್ದೇವೆ. ಸಂಸ್ಥೆ ಮತ್ತು ಶಿಕ್ಷಕಿ ನೀಡುವ ಶಿಸ್ತು ಬದ್ಧ ಶಿಕ್ಷಣವನ್ನು ಮತ್ತು ನಿಯಮಾವಳಿಗಳನ್ನು ಪಾಲಿಸುತ್ತೇವೆ ಎಂದರು.
ಯೋಜನಾ ಸಂಯೋಜಕ ಮಂಜಪ್ಪ ಸಂಸ್ಥೆ ನಡೆದ ಬಂದ ದಾರಿ ಮತ್ತು ಮುಂದಿನ ದಿನಗಳಲ್ಲಿ ಯುವಜನ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸಂಸ್ಥೆ ಹಮ್ಮಿಕೊಳ್ಳುವ ಶಿಕ್ಷಣ ಜಾಗೃತಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಒಟ್ಟು ಸೊರಬ ತಾಲೂಕಿನ ೧೬ ಗ್ರಾಮೀಣ ಮಹಿಳೆಯರು ಭಾಗವಹಿಸಿದ್ದು ಆರು ತಿಂಗಳ ತರಬೇತಿಯಲ್ಲಿ ಪ್ರಾಥಮಿಕ ಹೊಲಿಗೆ ಮತ್ತು ರೆಗ್ಜಿನ್ ಬ್ಯಾಗ್ ತಯಾರಿಕೆ ಮತ್ತು ಮಾರುಕಟ್ಟೆ ಕೌಶಲ್ಯವನ್ನು ಪಡೆಯಲಿದ್ದಾರೆ.
ಮಂಜುನಾಥ ಕಾರ್ಯಕ್ರಮ ಅಧಿಕಾರಿಗಳು ಕೆನರಾ ಗ್ರಾಮೀಣ ಸಹ ಉದ್ಯೋಗ ತರಬೇತಿ ಕೇಂದ್ರ ಹೊಳಲೂರು, ಸುಮನ, ಅನ್ನಪೂರ್ಣ, ಹರ್ಷಿತ, ಅರ್ಪಿತ, ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















