ಕಲ್ಪ ಮೀಡಿಯಾ ಹೌಸ್ | ಸೊರಬ |
ಭಾರತದ ಉತ್ತರ ಭಾಗದಲ್ಲಿ ಇಂದಿಗೂ ಮಾನವೀಯ ಗುಣಗಳು ಜಾಗೃತವಾಗಿದೆ ಎಂದು ಕೋಣನಕಟ್ಟೆ ಶಂಕರ್ ಶೆಟ್ಟಿ ಹೇಳಿದರು.
ಹೊಸಪೇಟೆ ಬಡಾವಣೆ ರಾಜೀವನಗರದ ಎಲಿಗೆನ್ಸ್ ಪ್ಲೆ & ಇಂಟೀರಿಯೋದಲ್ಲಿ ವಿವಿಧ ಸೇವಾ, ಸಂಸ್ಕೃತಿ ಜಾಗೃತ ಬಳಗ ಏರ್ಪಡಿಸಿದ್ದ ಭಾರತೀಯ ಪಾರಂಪರಿಕ ಮೌಲ್ಯ ಸಂವಾದ ಕಾರ್ಯಕ್ರಮದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಉತ್ತರ ಭಾಗದಲ್ಲಿ ಸೇವಾ ಮನೋಭಾವ, ಧಾರ್ಮಿಕ ಸಹಿಷ್ಣುತೆ, ಪ್ರಾಚೀನ ಪರಂಪರೆ ಗಟ್ಟಿಯಾಗಿದ್ದು, ಕಷ್ಟಜೀವಿಗಳು ಅವರು. ಬಹುತೇಕ ಶ್ರಮಿಸಿ ಸಂತಸ ಪಡುವುದರ ಜೊತೆಗೆ ಹಂಚಿ ಬದುಕುವ ಉದಾತ್ತತೆ ಗಮನಾರ್ಹ ಎಂದರು.
12 ಜ್ಯೋತಿರ್ಲಿಂಗಗಳ ದರ್ಶನವನ್ನು ಸೈಕಲ್ ಸವಾರಿಯಲ್ಲಿ ಮುಗಿಸಿ ಬಂದಿರುವ ಶಂಕರ್ ತಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.
ಗೋಸಂತತಿ, ಹಿಂದೂ ಧರ್ಮದ ಮೌಲ್ಯಯುತ ಪರಂಪರೆ ಉಳಿಯಲಿ ಎಂಬ ಸಂದೇಶದೊಂದಿಗೆ ಸೈಕಲ್ ಮೂಲಕ 13 ರಾಜ್ಯ ಪರ್ಯಟನೆ ಮಾಡಿದ್ದು, ಹಲವು ವರ್ಷಗಳಿಂದ ಪಾದಯಾತ್ರೆ ಮೂಲಕ ಶಬರಿಮಲೈಗೆ ಹೋಗುತ್ತಿದ್ದು ಕಟ್ಟುನಿಟ್ಟಿನ ಆಚರಣೆಯುಳ್ಳ ಅಯ್ಯಪ್ಪ ಸ್ವಾಮಿ ಆಚರಣೆ ಕೂಡ ಮನುಷ್ಯತ್ವದ ಉಜ್ವಲತೆಗೆ ಪೂರಕವಾಗಿದೆ ಎಂದರು.
ಈ ವೇಳೆ ಅವರಿಗೆ ವಿವಿಧ ಸಂಘಟನೆಗಳವರು ಶಾಲು ಹೊದಿಸಿ ಅಭಿನಂದಿಸಿದರು.
ಹಿರಿಯರಾದ ನಡಹಳ್ಳಿ ಶ್ರೀಧರಮೂರ್ತಿ, ಲಕ್ಷ್ಮೀಬಾಪಟ್,ಶ್ರೀಪಾದ ಬಿಚ್ಚುಗತ್ತಿ, ಗೌರಿ, ವಿವಿಧ ಸಂಘಟನೆಯ ಪ್ರಮುಖರಾದ ಕಾಳಿಂಗರಾಜ್, ಶಂಕರಶೇಟ್, ಮಹೇಶ್ ಗೋಖಲೆ, ಮಹೇಶ್ ಖಾರ್ವಿ, ಶಾಂತಿ ಖಾರ್ವಿ, ಯುವರಾಜ ಜೈನ್, ಸುಧಾಕರಭಾವೆ, ವಿಜಯಗೌಳಿ, ವಿಶಾಲ್ ಆಚಾರ್, ಮಧುಕೇಶ್ವರ,ಈಶ್ವರ್, ಪ್ರಭಾಕರ ಮೊದಲಾದವರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















