ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೈಋತ್ಯ ರೈಲ್ವೆ #SWR ಬೆಂಗಳೂರು ವಿಭಾಗದ ಸುರಕ್ಷತಾ ಶಾಖೆಯ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಸುರಕ್ಷತಾ ಸೆಮಿನಾರ್ #SafetySeminar ಯಶಸ್ವಿಯಾಗಿ ನಡೆಯಿತು.
ಸೆಮಿನಾರನ್ನು ಬೆಂಗಳೂರು #Bengaluru ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಶುತೋಷ್ ಕುಮಾರ್ ಸಿಂಗ್ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಬೆಂಗಳೂರು ವಿಭಾಗದಲ್ಲಿ ಜೋಡಿ ಮಾರ್ಗ, ಚತುಷ್ಪಥ ಮಾರ್ಗ, ಮೊದಲಾದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಾರ್ಯಸ್ಥಳದ ಸುರಕ್ಷತೆ, ವೈಯಕ್ತಿಕ ಸುರಕ್ಷತೆ, ತಾಂತ್ರಿಕ ಸಮಸ್ಯೆಗಳಿಂದ ಉಂಟಾಗುವ ಅಡಚಣೆಗಳ ಬಗ್ಗೆ ಜಾಗೃತಿ ಹೊಂದಿರುವುದು ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ರೈಲ್ವೆಯ ವಿವಿಧ ಶಾಖೆಗಳ ಸಿಬ್ಬಂದಿಗಳನ್ನು ಒಟ್ಟುಗೂಡಿಸಿ ಅವರಿಗಾಗಿ ವಿವಿಧ ಸುರಕ್ಷತಾ ವಿಷಯಗಳ ಬಗ್ಗೆ ಸೆಮಿನಾರ್ ಅನ್ನು ಆಯೋಜಿಸಿದ್ದಕ್ಕಾಗಿ ವಿಭಾಗದ ಸುರಕ್ಷತಾ ಶಾಖೆಗೆ ಅವರು ಅಭಿನಂದಿಸಿದರು.
ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ಪರೀಕ್ಷಿತ್ ಮೋಹನ್ಪೂರಿಯಾ ಮತ್ತು ಪ್ರವೀಣ್ ಕಾತರಕಿ, ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ಸುದರ್ಶನ್ ಭಟ್, ಹಿರಿಯ ವಿಭಾಗೀಯ ಇಂಜಿನಿಯರ್ (ಸಮನ್ವಯ) ರಾಜೀವ್ ಶರ್ಮಾ, ಹಿರಿಯ ವಿಭಾಗೀಯ ಪರಿಚಾಲನಾ ವ್ಯವಸ್ಥಾಪಕಿ ಪ್ರಿಯಾ, ಹಿರಿಯ ವಿಭಾಗೀಯ ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರ್ ಸಿ. ಸತೀಶ್, ಹಿರಿಯ ವಿಭಾಗೀಯ ವಿದ್ಯುತ್ ಇಂಜಿನಿಯರ್(ಟಿಆರ್’ಡಿ) ಸುರೇಂದ್ರನಾಥ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















Discussion about this post