ಕಲ್ಪ ಮೀಡಿಯಾ ಹೌಸ್ | ಮೈಸೂರು |
ಅಶೋಕಪುರಂ ರೈಲ್ವೆ ಕಾರ್ಯಾಗಾರಕ್ಕೆ #Railwayworkshop ಭೇಟಿ ನೀಡಿದ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರು ಕೂಲಂಕಶವಾಗಿ ಪರಿಶೀಲನೆ ನಡೆಸಿದರು.
ಕಾರ್ಯಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮುಂಬರುವ ಕಾಮಗಾರಿಗಳ ಪ್ರಗತಿ ಕುರಿತಾಗಿ ಪರಿಶೀಲಿಸಿದರು. ಭವಿಷ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಕಾರ್ಯಾಗಾರದ ನೌಕರರೊಂದಿಗೆ ಸಂವಾದ ನಡೆಸಿದ ಅವರು, ಕಾರ್ಯಕ್ಷಮತೆ, ಆದಾಯ ಮತ್ತು ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದರು.ಹೊಸದಾಗಿ ಪರಿಚಯಿಸಲಾದ ಟ್ರೈನ್ ಬಸ್’ಗೆ ಹಸಿರು ನಿಶಾನೆ ತೋರಿಸಿದರು.
ಸಿಬ್ಬಂದಿಯ ಬದ್ಧತೆ ಹಾಗೂ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ತಾಂತ್ರಿಕ ಅಭಿವೃದ್ಧಿ, ನೈಪುಣ್ಯವರ್ಧನೆ ಹಾಗೂ ತಂಡದ ಮನೋಭಾವದ ಮಹತ್ವವನ್ನು ಒತ್ತಿ ಹೇಳಿದರು.ಈ ಭೇಟಿಯಲ್ಲಿ ನೈಋತ್ಯ ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿ, ನೌಕರರ ಸಂಪರ್ಕ ಹಾಗೂ ಕಾರ್ಯಕ್ಷಮತೆಯ ಬಗ್ಗೆ ತಿಳಿಸಿದರು.
ಈ ವೇಳೆ ಅವರು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್, ಕಾರ್ಯಾಗಾರದ ಮುಖ್ಯ ವ್ಯವಸ್ಥಾಪಕರಾದ ವಿ.ಕೆ. ಚಾಡ, ಮುಖ್ಯ ಯಾಂತ್ರಿಕ ಇಂಜಿನಿಯರ್ ಉಮೇಶ್ ಕುಮಾರ್, ಇತರ ಹಿರಿಯ ಅಧಿಕಾರಿಗಳು, ಅಧಿಕಾರಿ ವರ್ಗ ಹಾಗೂ ನೌಕರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post