ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಸರಕು ಸಾಗಾಣೆ ಮತ್ತು ಆದಾಯದಲ್ಲಿ ನೈಋತ್ಯ ರೈಲ್ವೆ #SWR ವಿಭಾಗ ಒಂದೇ ತಿಂಗಳಿನಲ್ಲಿ ಅದ್ಬುತ ಬೆಳವಣಿಗೆ ದಾಖಲಿಸಿದ್ದು, 2025 ಸೆಪ್ಟೆಂಬರ್ ತಿಂಗಳಿನಿಂದ ಇದುವರೆಗಿನ ಅತ್ಯುತ್ತಮ 4.17 ಮಿಲಿಯನ್ ಟನ್’ಗಳ ಸರಕು ಸಾಗಣೆಯನ್ನು ದಾಖಲಿಸಿದೆ.
ಸರಕು ಸಾಗಣೆ ಆದಾಯವು 427 ಕೋಟಿ ರೂ.ಗೆ ಏರಿಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 36 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 14.34 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುವ ಮೂಲಕ ಪ್ರಯಾಣಿಕರ ಗಳಿಕೆ 282 ಕೋಟಿಯನ್ನು ತಲುಪಿದೆ.
ಸೆಪ್ಟೆಂಬರ್’ನಲ್ಲಿ ನೈಋತ್ಯ ರೈಲ್ವೆಯು ಸರಕು ಸಾಗಣೆ ಮತ್ತು ಆದಾಯದಲ್ಲಿ ಅತ್ಯುತ್ತಮ ಸಾಧನೆಯನ್ನು ದಾಖಲಿಸಿದೆ.
ಈ ಅವಧಿಯಲ್ಲಿ ನೈಋತ್ಯ ರೈಲ್ವೆ ಒಟ್ಟು 4.17 ಮಿಲಿಯನ್ ಟನ್ ಮೂಲ ಸರಕುಗಳನ್ನು ಲೋಡ್ ಮಾಡಿದ್ದು, ರೈಲ್ವೆ ಮಂಡಳಿಯ 4.15 ಎಂಟಿ ಗುರಿಯನ್ನು ಮೀರಿಸಿದೆ. ಇದು ಕಳೆದ ವರ್ಷ ಇದೇ ತಿಂಗಳಲ್ಲಿ ದಾಖಲಾದ 3.3 ಎಂಟಿಗೆ ಹೋಲಿಸಿದರೆ ಶೇ 25% ರಷ್ಟು ಗಮನಾರ್ಹ ಏರಿಕೆಯಾಗಿದ್ದು, 2023-24 ರಲ್ಲಿ ದಾಖಲಾದ ಹಿಂದಿನ ಅತ್ಯುತ್ತಮ 4.1 ಎಂಟಿ ದಾಖಲೆಯನ್ನು ಮೀರಿಸಿದೆ ಎಂದು ಇಲಾಖೆ ತಿಳಿಸಿದೆ.
ಈ ಸಾಧನೆ ಮುಖ್ಯ ಸರಕುಗಳಲ್ಲಿ ಕಂಡುಬಂದ ಸುಧಾರಿತ ಕಾರ್ಯಕ್ಷಮತೆಯಿಂದ ಸಾಧ್ಯವಾಗಿದೆ. ಕಬ್ಬಿಣದ ಅದಿರು ಲೋಡಿಂಗ್ ಶೇ 2.8% ಏರಿಕೆಯಾಗಿ 1.583 ಎಂಟಿನಿಂದ 1.628 ಎಂಟಿಗೆ ತಲುಪಿದೆ. ಉಕ್ಕಿನ ಲೋಡಿಂಗ್ ಶೇ 53.3% ರಷ್ಟು ಏರಿಕೆಯಾಗಿ 0.591 ಎಂಟಿನಿಂದ 0.906 ಎಂಟಿಗೆ ತಲುಪಿದೆ.
ಕಲ್ಲಿದ್ದಲು ಲೋಡಿಂಗ್ ಶೇ 45.8% ಹೆಚ್ಚಾಗಿ 0.511 ಎಂಟಿನಿಂದ 0.745 ಎಂಟಿ ಆಗಿದೆ. ಉಕ್ಕಿನ ಸ್ಥಾವರಗಳಿಗೆ ಕಚ್ಚಾ ವಸ್ತು ಲೋಡಿಂಗ್ ಶೇ 306% ರಷ್ಟು ಅಸಾಧಾರಣ ಏರಿಕೆಯನ್ನು ಕಂಡು 0.083 ಎಂಟಿನಿಂದ 0.337 ಎಂಟಿ ಆಗಿದೆ. ರಸಗೊಬ್ಬರ ಲೋಡಿಂಗ್ ಶೇ 29.8% ಏರಿಕೆಯಾಗಿ 0.109 ಎಂಟಿ ತಲುಪಿದ್ದು, ಕಂಟೇನರ್ ಸಂಚಾರವೂ ಶೇ 37.9% ಏರಿಕೆಯಾಗಿ 0.058 ಎಂಟಿನಿಂದ 0.080 ಎಂಟಿ ಆಗಿದೆ.
ಪ್ರಯಾಣಿಕರ ಸೇವೆಯಲ್ಲೂ ಸಾಧನೆ
ಇನ್ನು, ನೈಋತ್ಯ ರೈಲ್ವೆ ಪ್ರಯಾಣಿಕರ ಸೇವೆಗಳ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡಿದೆ.
2025ರ ಸೆಪ್ಟೆಂಬರ್’ನಲ್ಲಿ ನೈಋತ್ಯ ರೈಲ್ವೆ 282 ಕೋಟಿ ಪ್ರಯಾಣಿಕರ ಆದಾಯವನ್ನು ಗಳಿಸಿದ್ದು, ಇದು 2024ರ ಸೆಪ್ಟೆಂಬರ್’ನ 264.83 ಕೋಟಿಗಿಂತ ಶೇ 6.38% ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆಯು ಕೂಡ 14.34 ಮಿಲಿಯನ್’ಗೆ ಏರಿದ್ದು, ಇದು ಕಳೆದ ವರ್ಷದ 13.37 ಮಿಲಿಯನ್ ಪ್ರಯಾಣಿಕರಿಗಿಂತ ಶೇ. 7.26% ಹೆಚ್ಚಳವಾಗಿದೆ.
ಸರಕು ಸಾಗಣೆ ವಿಭಾಗವು ವಲಯದ ಒಟ್ಟು ಆದಾಯದ ಪ್ರಮುಖ ಚಾಲಕವಾಗಿದ್ದು, ಸರಕು ಸಾಗಣೆ ಆದಾಯವು 427.50 ಕೋಟಿಗೆ ತಲುಪಿದೆ. ಇದು ಕಳೆದ ವರ್ಷ ಇದೇ ತಿಂಗಳಲ್ಲಿ ದಾಖಲಾದ 314.85 ಕೋಟಿಗಿಂತ ಶೇ 35.78% ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ವಲಯದ ಅತ್ಯುತ್ತಮ ಮಾಸಿಕ ಸರಕು ಸಾಗಣೆ ಪ್ರದರ್ಶನಗಳಲ್ಲಿ ಒಂದಾಗಿದೆ.
ಒಟ್ಟಾರೆಯಾಗಿ, ಸೆಪ್ಟೆಂಬರ್’ರವರೆಗೆ ನೈಋತ್ಯ ರೈಲ್ವೆ ಸರಕು ಸಾಗಣೆಯಿಂದ 2,578 ಕೋಟಿ ಆದಾಯ ಗಳಿಸಿದ್ದು, ಇದು ಹಿಂದಿನ ವರ್ಷದ 2,025.33 ಕೋಟಿಗಿಂತ ಶೇ 27.29% ಹೆಚ್ಚಾಗಿದೆ. ಅದೇ ಅವಧಿಯಲ್ಲಿ ಪ್ರಯಾಣಿಕರ ಆದಾಯ 1,650 ಕೋಟಿಗೆ ಏರಿದ್ದು, ಕಳೆದ ವರ್ಷದ 1,606.56 ಕೋಟಿಗಿಂತ ಶೇ 2.68% ಹೆಚ್ಚಾಗಿದೆ.
ಸೆಪ್ಟೆಂಬರ್’ರವರೆಗೆ ಒಟ್ಟು 87.99 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದ್ದು, ಇದು 2024 ರ ಇದೇ ಅವಧಿಯ 82.38 ಮಿಲಿಯನ್ ಪ್ರಯಾಣಿಕರಿಗಿಂತ ಶೇ 6.81% ಹೆಚ್ಚಳವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















