ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಅಂತಾರಾಜ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ #Hubli – ಯೋಗ ನಗರಿ ಹೃಷಿಕೇಶ #Hrishekesh ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲನ್ನು ಆರಂಭಿಸಲಾಗುತ್ತಿದೆ.
ಎಂದಿನಿಂದ ಆರಂಭ?
07363 ಸಂಖ್ಯೆಯ ರೈಲು ಹುಬ್ಬಳ್ಳಿ-ಯೋಗ ನಗರಿ ಹೃಷಿಕೇಶ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ಜನವರಿ 6 ರಿಂದ ಮುಂದಿನ ಆದೇಶದವರೆಗೆ ಪ್ರತಿ ಸೋಮವಾರ 20:30 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಜನವರಿ 13,27, ಮತ್ತು ಫೆಬ್ರವರಿ 3,10, 24, 2025 ರಂದು ಹೊರತುಪಡಿಸಿ ಬುಧವಾರ 23:30 ಗಂಟೆಗೆ ಯೋಗ ನಗರಿ ಹೃಷಿಕೇಶ ತಲುಪಲಿದೆ.
Also Read>> ಚೀನಾದಲ್ಲಿ ಕೊರೋನಾ ಮಾದರಿ ವೈರಸ್ ಸ್ಪೋಟ | ಭಾರತ ಸರ್ಕಾರದ ಮಹತ್ವದ ಮಾಹಿತಿಯೇನು?
ರೈಲು ಸಂಖ್ಯೆ 07364 ಯೋಗ ನಗರಿ ಹೃಷಿಕೇಶ-ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ #WeeklySpecialTrain ಜನವರಿ 09 ರಿಂದ ಮುಂದಿನ ಆದೇಶದ ವರೆಗೆ ಪ್ರತಿ ಗುರುವಾರ 06:15 ಗಂಟೆಗೆ ಯೋಗ ನಗರಿ ಹೃಷಿಕೇಶದಿಂದ ಹೊರಟು ಜನವರಿ 16 30 ಮತ್ತು ಫೆಬ್ರವರಿ 6, 13 27, 2025 ಹೊರತುಪಡಿಸಿ ಶನಿವಾರ 06:30 ಗಂಟೆಗೆ ಹುಬ್ಬಳ್ಳಿಯನ್ನು ತಲುಪಲಿದೆ.

ಈ ರೈಲು ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್ ನಗರ, ಕೋಪರ್ಗಾಂವ್, ಮನ್ಮಾಡ್ ಜಂಕ್ಷನ್, ಭೂಸಾವಲ್ ಜಂಕ್ಷನ್, ಹರ್ದಾ, ಇಟಾಸಿರ್ ಜಂಕ್ಷನ್, ರಾಣಿ ಕಮಲಪತಿ, ಬೀನಾ ಜಂಕ್ಷನ್, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ರೈಲ್ವೆ ನಿಲ್ದಾಣ, ಗ್ವಾಲಿಯರ್ ಜಂಕ್ಷನ್, ಆಗ್ರಾ ಕಂಟೋನ್ಮೆೆಂಟ್, ಮಥುರಾ ಜಂಕ್ಷನ್, ಹಜರತ್ ನಿಜಾಮುದ್ದೀನ್ ಜಂಕ್ಷನ್, ಗಾಜಿಯಾಬಾದ್ ಜಂಕ್ಷನ್, ಮೀರತ್ ಸಿಟಿ ಜಂಕ್ಷನ್, ಮುಜಾಫರ್ ನಗರ, ದಿಯೋಬಂದ್, ತಾಪ್ರಿ ಜಂಕ್ಷನ್, ರೂರ್ಕಿ ಮತ್ತು ಹರಿದ್ವಾರ ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ.
Also Read>> ಗಮನಿಸಿ! ನೈಋತ್ಯ ರೈಲ್ವೆಯ ಕೆಲವು ರೈಲು ಮಾರ್ಗ ಬದಲು, ಈ ರೈಲು ಒಂದು ದಿನ ರದ್ದು
ಈ ವಿಶೇಷ ರೈಲು ನಾಲ್ಕು ಎಸಿ-3 ಟೈ ಸ್ಲೀಪರ್ ಮತ್ತು ಎರಡು ಗಾರ್ಡ್ಸ್ ಬ್ರೇಕ್ ವ್ಯಾನ್ ಮತ್ತು ಎಂಟು ಎಸಿ -3 ಟೈರ್ ಸೇರಿದಂತೆ 14 ಬೋಗಿಗಳನ್ನು ಒಳಗೊಂಡಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post