ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚೆನ್ನೈ: ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಸಂಸ್ಕಾರ ನಾಳೆ ಮುಂಜಾನೆ 11 ಗಂಟೆಗೆ ಸಕಲ ಸರ್ಕಾರಿ, ಪೊಲೀಸ್ ಗೌರವಗಳೊಂದಿಗೆ ನಡೆಯಲಿದೆ.
ಈ ಕುರಿತಂತೆ ಖುದ್ದು ಆದೇಶ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಎಸ್’ಪಿಬಿ ಅವರಿಗೆ ಪೊಲೀಸ್ ಗೌರವದ ಮೂಲಕ ಅಂತಿಮ ನಮನ ಸಲ್ಲಿಸಲು ಸೂಚಿಸಿದ್ದಾರೆ.
ಇಂದು ಸಂಜೆ ವೇಳೆಗೆ ಅವರ ನಿವಾಸಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಬಂದು ಆನಂತರ ರಾತ್ರಿ ವೇಳೆಗೆ ರೆಡ್ ಹಿಲ್ಸ್ ಫಾರಂ ಹೌಸ್’ಗೆ ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಹತ್ತಾರು ಕಿಲೋ ಮೀಟರ್ ದೂರದ ಅಂತಿಮ ಮೆರವಣಿಗೆಯ ವೇಳೆ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. ತಮ್ಮ ಅಭಿಮಾನದ ಗಾಯಕನ ಅಂತಿಮ ದರ್ಶನ ಪಡೆಯಲು ದಾರಿಯುದ್ದಕ್ಕೂ ನೆರೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news






Discussion about this post