Read - 3 minutes
ಕಲ್ಪ ಮೀಡಿಯಾ ಹೌಸ್
ಹೊಸತು ಎಂದರೆ ಸಂಭ್ರಮ, ಹೊಸತು ಎಂದರೆ ಉಲ್ಲಾಸ, ಹೊಸತು ಎಂದರೆ ಉತ್ಸಾಹ ಯುಗಾದಿ ಎಲ್ಲಾ ಹೊಸತನಕ್ಕೆ ಮುನ್ನುಡಿಯಾಗಲಿದೆ. ಹೊಸವರ್ಷವಾಗಿ ಆಚರಿಸಲ್ಪಡುವ ಯುಗಾದಿ ಹಬ್ಬ ಸಕಲ ಜೀವರಾಶಿಗಳ ಪಾಲಿಗೂ ಹೊಸತನವನ್ನು ನೀಡುವುದು.

ಇಂದಿನ ಯುಗಾದಿಯಿಂದ ಮುಂದಿನ ಯುಗಾದಿಯವರೆಗಿನ ಒಂದು ವರ್ಷದಲ್ಲಿ ಪ್ರತಿಯೊಬ್ಬನ ಜೀವನದಲ್ಲೂ ಸಿಹಿ- ಕಹಿಗಳು ತುಂಬಿರುತ್ತವೆ. ಯುಗಾದಿ ಹಬ್ಬವು ಜನರಲ್ಲಿ ಸಂಭ್ರಮ – ಸಡಗರ ನೀಡುವುದರ ಜೊತೆಗೆ ಅವರ ಮನದಲ್ಲಿ ಹೊಸ ಭರವಸೆ, ಆಶಯ, ಗುರಿ, ಉದ್ದೇಶ, ಬಯಕೆ, ಕನಸುಗಳನ್ನು ಚಿಗುರಿಸುತ್ತಾ ನವವರುಷಕ್ಕೆ ಆಶಾಕಿರಣವಾಗಿ ಬರುತ್ತದೆ.
ಯುಗಾದಿಯ ಅರ್ಥ ‘ಯುಗಾದಿ ಆದಿ’ ಯುಗಾದಿ ಎಂಬ ಶಬ್ದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗವೆಂದರೆ ಸೃಷ್ಟಿಯ ಕಾಲಮಾನ, ಅರ್ಥಾತ್ ಹೊಸ ವರ್ಷ, ಆದಿ ಎಂದರೆ ಆರಂಭ ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನವೆಂದು ಹೇಳಲಾಗುವುದು. ಚೈತ್ರಶುದ್ಧ ಪಾಂಡ್ಯ ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ ಹೇಳಲಾಗುತ್ತದೆ. ಅಂದಿನಿಂದ ಕಾಲಗಣನೆಗಾಗಿ ಗ್ರಹ, ನಕ್ಷತ್ರ, ಮಾಸ, ಋತು, ವರುಷ ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಾಗಿದೆ ಎಂದು ತಿಳಿಯಬಹುದಾಗಿದೆ.
ಹೊಸವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ ಬಲ್ಲವರೆಂದು ತಾರತಮ್ಯವಿಲ್ಲದೆ. ಎಲ್ಲಾ ಹಿಂದೂಗಳು ಆಚರಿಸುತ್ತಾರೆ. ಕರ್ನಾಟಕ,ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯವಿಯನ್ನು ಯುಗಾದಿ ಎಂದು ಆಚರಿಸುತ್ತಾರೆ. ಕರ್ನಾಟಕದಲ್ಲಿ ‘ ಯುಗಾದಿ’, ಮಹಾರಾಷ್ಟ್ರದಲ್ಲಿ ಗೂಢಿಪಾಡವಾ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹೊಸ ವರ್ಷವೆಂದು ಮತ್ತು ಉತ್ತರಭಾರತದಲ್ಲಿ ಬೈಸಾಲಿ ಎಂದು ಹೀಗೆ ಭಾರತದಲ್ಲಿ ಬೇರೆ ಬೇರೆ ಹೆಸರುಗಳಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.
ಯುಗಾದಿ ಬಂತೆಂದರೆ ಎಲ್ಲೆಡೆಯಲ್ಲಿ ಸಂತೋಷ, ಸಂಭ್ರಮ. ನಿಸರ್ಗವು ಮೈತುಂಬಿ ತುಳುಕುತ್ತಿರುತ್ತದೆ. ವನಗಳೆಲ್ಲವೂ ಚಿಗುರಿ ಹೂವು ಬಿಟ್ಟು ಯುಗಾದಿಯ ವರುಷವನ್ನು ಆಚರಿಸುತ್ತದೆ. ಎಲ್ಲೆಡೆ ನೋಡಿದರೂ ಮರ – ಗಿಡಗಳು , ಬಳ್ಳಿಗಳು ಹಸಿರು ಹಸಿರಾಗಿ ಮೈದುಂಬಿ ನಳನಳಿಸುತ್ತಿರುತ್ತದೆ ಅಷ್ಟೇ ಅಲ್ಲದೆ ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಎಲ್ಲಾ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠವಾದ ಹಬ್ಬವೆಂದು ಹೇಳಬಹುದಾಗಿದೆ.
ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ. ಹೊಸ ಬಟ್ಟೆ ಧರಿಸಿ. ದೇವರನ್ನು ಪೂಜಿಸಿ. ಬೇವು-ಬೆಲ್ಲವನ್ನು ಸವಿಯುತ್ತಾರೆ. ಯಾಕೆಂದರೆ ಮಾನವನ ಬದುಕಿನಲ್ಲಿ ಸುಖ-ದುಃಖಗಳು ಒಟ್ಟಿಗೆ ಇರುವವು ಎರಡನ್ನು ಸಮದೃಷ್ಟಿಯಿಂದ ಸವಿಯುವುದನ್ನುಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನುವವರು.

ವರ್ಷವಿಡಿ ಸುಖ ನೀಡುವಂತೆ, ಕಷ್ಟ ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ದಿನ ಯಾರು ಏನನ್ನು ಪಡೆಯುವರೋ ಅಂದು ಇಡೀ ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ ಅಂದು ಚಂದಮಾಮನ ದರ್ಶನ ಮಾಡುವವರು ಯುಗಾದಿಯ ಮೂರನೆಯ ದಿನವೂ ಹಬ್ಬದ ವಾತಾವರಣವಿರುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕರಿಸುವರು.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸವರ್ಷಕ್ಕೆ ಹೊಸ ಹರುಷದ ಹೊಸತು ಹೊಸತು ತರುತಿದೆ. ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು
ಇಂದಿನ ಯುಗಾದಿಯಿಂದ ಮುಂದಿನ ಯುಗಾದಿಯವರೆಗಿನ ಒಂದು ವರ್ಷದಲ್ಲಿ ಪ್ರತಿಯೊಬ್ಬನ ಜೀವನದಲ್ಲೂ ಸಿಹಿ- ಕಹಿಗಳು ತುಂಬಿರುತ್ತವೆ. ಯುಗಾದಿ ಹಬ್ಬವು ಜನರಲ್ಲಿ ಸಂಭ್ರಮ – ಸಡಗರ ನೀಡುವುದರ ಜೊತೆಗೆ ಅವರ ಮನದಲ್ಲಿ ಹೊಸ ಭರವಸೆ, ಆಶಯ, ಗುರಿ, ಉದ್ದೇಶ, ಬಯಕೆ, ಕನಸುಗಳನ್ನು ಚಿಗುರಿಸುತ್ತಾ ನವವರುಷಕ್ಕೆ ಆಶಾಕಿರಣವಾಗಿ ಬರುತ್ತದೆ.
ವರ್ಷವಿಡಿ ಸುಖ ನೀಡುವಂತೆ, ಕಷ್ಟ ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ದಿನ ಯಾರು ಏನನ್ನು ಪಡೆಯುವರೋ ಅಂದು ಇಡೀ ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ ಅಂದು ಚಂದಮಾಮನ ದರ್ಶನ ಮಾಡುವವರು ಯುಗಾದಿಯ ಮೂರನೆಯ ದಿನವೂ ಹಬ್ಬದ ವಾತಾವರಣವಿರುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕರಿಸುವರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post