ಕಲ್ಪ ಮೀಡಿಯಾ ಹೌಸ್
ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮ ಪುರಾತನ ಕಾಲದ 300 ವರ್ಷದ ಇತಿಹಾಸ ಇರುವ ಗ್ರಾಮ, ಈ ಗ್ರಾಮದಲ್ಲಿ ದಿನಂಪ್ರತಿ ಧಾರ್ಮಿಕ ಕೆಲಸಕಾರ್ಯಗಳ ಜೊತೆಗೆ ಪ್ರತಿ ದಿನ ಪೂಜೆ ಸಲ್ಲಿಸುವ ದೇವಾಲಯಗಳು ಎಂದರೆ ಶಕ್ತಿ ದೇವತೆ, ಗ್ರಾಮದೇವತೆ ದುರ್ಗಾಮಾತೆ, ಆಂಜನೇಯ, ಕನ್ನಿಕಾ ಪರಮೇಶ್ವರಿ, ನೀಲಕಂಠೇಶ್ವರ, ಬುಡರನಾಳು ಹನುಮ, ದತ್ತಾತ್ರೇಯ ಮತ್ತು ರಾಘವೇಂದ್ರ ಸ್ವಾಮಿಗಳ ಬೃಂದಾವನ ಹೀಗೆ ಇನ್ನೂ ಹತ್ತು ಹಲವು ದೇವಸ್ಥಾನಗಳು ಊರಿನ ಸಮಸ್ತ ಜನರ ಅಭಿವೃದ್ದಿ ,ಮತ್ತು ಆರೋಗ್ಯಕ್ಕಾಗಿ ಧಾರ್ಮಿಕ ಕಾರ್ಯಕಲಾಪಗಳನ್ನು ಮಾಡಿಕೊಂಡು ಬರಲಾಗಿದೆ.
ಗ್ರಾಮದಲ್ಲಿ ನವರಾತ್ರಿಯ 10 ದಿನ ಬನ್ನಿ ಮರಕ್ಕೆ ಪೂಜೆ :
ಗ್ರಾಮದ ದೊಡ್ಡಕೆರೆ ಮೂಲೆಯ ಏರಿಯ ಹತ್ತಿರ ಬಳಿ ಇರುವ ಪುರಾತನ ಸುಮಾರು 200ಕ್ಕೂ ಹೆಚ್ಚು ವರ್ಷದಿಂದ ಪೂಜಿತಗೊಳ್ಳುತ್ತಿದೆ. ಪ್ರತೀ ವರ್ಷದ ನವರಾತ್ರಿಯ ವೇಳೆ ಬನ್ನಿ ವೃಕ್ಷಕ್ಕೆ ಗ್ರಾಮದ ಮಹಿಳೆಯರು ಮುಂಜಾನೆ 3 ಗಂಟೆಯಿಂದಲೇ ಆಗಮಿಸಿ, ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸುವ ಪರಿಪಾಟ ಇದೆ. ಅದಕ್ಕಾಗಿ ಈ ವೃಕ್ಷದ ಬಳಿ ಹೆಚ್ಚಿನದಾಗಿ ಮಹಿಳೆಯರು ಆಗಮಿಸಿ ಪೂಜಿಸುತ್ತಾರೆ.
ಪ್ರತಿ ದಿನ 200-300 ಮಹಿಳೆಯರು ಪೂಜೆಯನ್ನು ಸಲ್ಲಿಸಿ, ನವರಾತ್ರಿಯ ಕೊನೆಯ ಹಾಗೂ ಹತ್ತನೇಯ ದಿನ ಗ್ರಾಮದ ಎಲ್ಲಾ ಸಮುದಾಯದ ಜನರು ಪೂಜೆ ಸಲ್ಲಿಸುತ್ತಾರೆ. ವಿಷೇಷತೆ ಎಂದರೆ ಕೊನೆಯದಿನ ಗ್ರಾಮದ ಬ್ರಾಹ್ಮಣ ಸಮೂಹ ಮತ್ತು ವೈಶ್ಯ ಸಮಾಜದವರು ತಮ್ಮ ಆರಾಧ್ಯ ದೈವ ಶ್ರೀ ಆಂಜನೇಯ ಮತ್ತು ಶ್ರೀ ಕನ್ನಿಕಾ ಪರಮೇಶ್ವರಿ ಉತ್ಸವ ಮೂರ್ತಿಗಳೂಂದಿಗೆ ಬಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಬನ್ನಿಯನ್ನು ಮುಡಿಯುವ ಸಂಪ್ರದಾಯ ಇದೆ. ಮಾರನೇ ದಿನ ಬೆಳ್ಳಿಗ್ಗೆ ಊರಿನ ಎಲ್ಲಾರೂ ನೈವೇದ್ಯ ಅರ್ಪಿಸಿ ಪ್ರಸಾದವನ್ನು ಹಂಚಿ ಸ್ವೀಕರಿಸುತ್ತಾರೆ. ಇದು ಸುಮಾರು ವರ್ಷಗಳಿಂದ ನಡೆದು ಬಂದಿದೆ. ವಿಶೇಷತೆ ಎಂದರೆ ಈ ಬಾರಿ ಕೆರೆಗೆ ತುಂಗಭದ್ರೆಯ ಆಗಮನದಿಂದ ಸಂತೋಷದಿಂದ ಇರುವ ಗ್ರಾಮದ ಜನತೆ ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯ ಮಾಡುವ ಉತ್ಸಾಹದಲ್ಲಿ ಇರುತ್ತಾರೆ.
ಬನ್ನಿ ಮರಕ್ಕೆ ಪೂಜೆ – ಪುರಾತನ ಕಥೆ:
ನವರಾತ್ರಿ ವೇಳೆ ಅನೇಕ ರೂಪದಲ್ಲಿ ದೇವಿಗೆ ಪೂಜೆ ಅರ್ಚನೆ ಸಲ್ಲಿಸಲಾಗುತ್ತದೆ. ಇದರ ಜೊತೆಯಲ್ಲೇ ಮಹಾನವಮಿ ದಿನದಂದು ಬನ್ನಿವೃಕ್ಷದ ಪೊಜೆ ಸಲ್ಲಿಸಲಾಗುತ್ತದೆ. ಸಾಧಾರಣವಾಗಿ ಹಿಂದೂ ಧರ್ಮದಲ್ಲಿ ಅರಳಿ ಮರಕ್ಕೆ ವಿಶೇಷ ಗೌರವ ಸಲ್ಲಿಸಿ, ದಿನಂಪ್ರತಿ ಪೂಜೆ ಸಲ್ಲಿಸುತ್ತಾರೆ. ಆದರೆ ವಿಶೇಷವಾಗಿ ನವರಾತ್ರಿಯ 10 ದಿನಗಳು ಶಮಿವೃಕ್ಷಕ್ಕೆ ವಿಶೇಷ ಪೊಜೆ ಸಲ್ಲಿಸಲಾಗುತ್ತದೆ. ಇದಕ್ಕೆ ಪುರಾಣದಲ್ಲಿ ಅನೇಕ ಮಹಾತಪಸ್ವಿಗಳು ಅನೇಕ ರೀತಿಯಲ್ಲಿ ತಿಳಿಸುತ್ತಾರೆ.
ಮಹಾತಪಸ್ವಿಯಾದ ಜಾರ್ವ ಹಾಗೂ ಆತನ ಪತ್ನಿ ಸುಮೇಧರಿಗೆ ಶಮೀಕಾ ಹೆಸರಿನ ಪುತ್ರಿ ಇರುತ್ತಾಳೆ. ಆಕೆಯನ್ನು ದೌಮ್ಯ ಶುಷಿಯ ಪುತ್ರ ಮತ್ತು ಕೌಶಿಕೆ ಮಹರ್ಷಿಯ ಶಿಷ್ಯನಾಗಿದ್ದ ಮಂದಾರನಿಗೆ ಕೊಟ್ಟು ವಿವಾಹ ಮಾಡುತ್ತಾರೆ. ಕೆಲ ದಿನಗಳ ನಂತರ ದಂಪತಿ ವಾಯುವಿಹಾರಕ್ಕೆ ಹೋದಾಗ ವನದಲ್ಲಿ ಸೊಂಡಿಲು ಹೊಂದಿದ್ದ ಬೃಶುಂಡಿ ಮುನಿಯನ್ನು ನೋಡುತ್ತಾರೆ. ಮುನಿಯ ವಿಚಿತ್ರ ರೂಪವನ್ನು ಕಂಡು ಅವರಿಗೆ ಎಲ್ಲಿಲ್ಲದ ನಗು ಬರುತ್ತದೆ. ಇದನ್ನು ನೋಡಿದ ಬೃಂಶುಂಡಿಮುನಿ ನನ್ನನ್ನು ನೋಡಿ ನಕ್ಕಿದ್ದು ಏಕೆ ಎಂದು ಪ್ರಶ್ನಿಸುತ್ತಾನೆ. ಆದರೂ ದಂಪತಿಗಳು ನಗುವನ್ನು ನಿಲ್ಲಿಸದೆ ನಗುತ್ತಲೇ ಇರುತ್ತಾರೆ. ತನ್ನನ್ನು ಅಪಹಾಸ್ಯ ಮಾಡಿದ್ದಕ್ಕೆ ಕೋಪಗೊಂಡ ಬೃಶುಂಡಿ ಮುನಿ, ನೀವು ಯಾವುದೇ ಪ್ರಾಣಿಗೂ ಉಪಯೋಗಕ್ಕೆ ಬಾರದ ಮರಗಳಾಗಿ ಎಂದು ಶಾಪಕೊಡುತ್ತಾನೆ. ಕೊಡಲೇ ದಂಪತಿಗೆ ತಮ್ಮ ತಪ್ಪಿನ ಅರಿವಾಗಿ ಮುನಿಯ ಪಾದಕ್ಕೆ ಬಿದ್ದು ಕ್ಷಮೆಕೇಳಿ ತಮ್ಮ ಶಾಪ ವಿಮೋಚನೆ ಆಗುವುದು ಹೇಗೆ ಎಂದು ಅಂಗಲಾಚುತ್ತಾರೆ. ಇದಕ್ಕೆ ಬೇಶುಂಡಿ ನಿಮಗೆ ಗಣಪತಿ ಅನುಗ್ರಹವಾದ ಮೇಲೆಯೇ ಶಾಪ ವಿಮೋಚನೆ ಆಗುತ್ತದೆ ಎಂದು ಉತ್ತರಿಸುತ್ತಾನೆ.
ಮುನಿಯ ಶಾಪದಂತೆ ಶಮೀಕಳು ಶಮೀವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗಿ ಪರಿವರ್ತನೆ ಆಗುತ್ತಾರೆ. ಬಹಳ ಸಮಯವಾದರೂ ದಂಪತಿ ಮನೆಗೆ ಬಾರದಿದ್ದಾಗ ಶಮೀಕಳ ತಂದೆ ತಾಳೀ ಕಾಡಿನೊಳಗೆ ಬರುತ್ತಾರೆ. ಅಲ್ಲಿ ಅವರು ಎರಡು ವಿಚಿತ್ರವಾದ ಮರಗಳನ್ನು ಕಂಡು ಬೃಶುಂಡಿ ಮುನಿಯನ್ನು ವಿಚಾರಿಸಿದಾಗ ನಡೆದ ಸಂಗತಿ ತಿಳಿಯುತ್ತದೆ.
ಬನ್ನಿಯನ್ನು ಬಂಗಾರಕ್ಕೆ ಹೊಲಿಸುತ್ತಾರೆ-ಶಮೀ ಮರದ ಒಂದೂಂದು ಎಲೆಯೂ ಚಿನ್ನದ ನಾಣ್ಯವಾಗಿದ್ದು, ತ್ರೇತಾಯುಗದ ಕಥೆಯೊಂದಿದೆ, ಕೌಸ್ತ ಹೆಸರಿನ ವಿದ್ಯಾರ್ಥಿಯ ವಿಧ್ಯಾಭ್ಯಾಸದ ನಂತರ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಚಿಸುತ್ತಾನೆ. ಇದನ್ನು ಗುರುಗಳ ಜೊತೆಗೆ ಹಂಚಿಕೊಳ್ಳುತ್ತಾನೆ. ಆಗ ಗುರು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳುತ್ತಾರೆ. ಗುರುಗಳ ಕೇಳಿದಷ್ಟು ಚಿನ್ನದ ನಾಣ್ಯಗಳನ್ನು ಎಲ್ಲಿಂದ ತರುವುದು ಎಂದು ಯೋಚಿಸುತ್ತಾನೆ. ನಂತರ ರಘುರಾಜನ ಬಳಿಗೆ ಹೋಗಿ, ಗುರುಗಳ ಬಳಿಗೆ ಹೋಗಿ, ಗುರುಗಳಿಗೆ ನೀಡಲು ಸಹಸ್ರ ಕೋಟಿ ಚಿನ್ನದ ನಾಣ್ಯಗಳು ಬೇಕು ದಯವಿಟ್ಟು ಕೊಡಿ ಎಂದು ಕೌಸ್ತ ಮನವಿ ಮಾಡಿಕೊಳ್ಳುತ್ತಾನೆ. ರಾಜರು ಕುಬೇರನನ್ನು ಪ್ರಾರ್ಥಿಸಿದಾಗ ಅಲ್ಲಿಯೇ ಇದ್ದ ಶಮೀ ಮರದ ಒಂದೂಂದು ಎಲೆಯೂ ಚಿನ್ನದ ನಾಣ್ಯವಾಗುವಂತೆ ಮಾಡುತ್ತಾನೆ. ಇದರಿಂದ ಸಂತಸಗೊಂಢ ಕೌಸ್ತನು ನಾಣ್ಯಗಳನ್ನು ಗುರುಗಳಿಗೆ ಅರ್ಪಿಸುತ್ತಾನೆ ಗುರುದಕ್ಷಿಣೆ ನೀಡಿ, ಉಳಿದ ನಾಣ್ಯಗಳನ್ನು ದಾನ ಮಾಡುತ್ತಾನೆ ಆದರಿಂದ ಶಮೀ (ಬನ್ನಿ) ಮರವೆಂದರೇ ಚಿನ್ನ, ಬಮಗಾರ ಎನ್ನುವ ನಂಬಿಕೆ ಮೂಡಿಬಂದಿದೆ.
ಧನ್ವಂತರಿ ನಿಘಂಟಿನ ಪ್ರಕಾರ ಮನುಷ್ಯನ ಆರೋಗ್ಯಕ್ಕೂ ಒಳ್ಳೆಯದು :
ಪಂಚ ಬೃಂಗ ಎಂಬ 5 ಮರಗಳಲ್ಲಿ ಶಂಮೀವೃಕ್ಷವೂ ಸಹ ಒಂದು ಯಾವುದೇ ವ್ಯಕ್ತಯ ರೋಗ ಗುಣಪಡಿಸಿದ ನಂತರ ಸ್ನಾನ ಮಾಡಲು ಈ ಐದು ಮೂಲಿಕೆಗಳನ್ನು ಬಳಸಲಾಗುತ್ತದೆ. ಇದು ರೋಗದ ಸೋಂಕನ್ನು ನಿವಾರಿಸುವುದಲ್ಲದೇ ಶಕ್ತಿಯನ್ನು ಉತ್ತೇಜಿಸುತ್ತದೆ. ಈ ಮರದ ತೊಗಟೆಯನ್ನು ಸಂಧಿವಾತದ ಚಿಕಿತ್ಸೆಯಲ್ಲಿ ಮುಖ್ಯವಾಗಿ ಬಳಸುವುದು ವಿಶೇಷ ಶುಂಠಿಯೊಂದಿಗೆ ಬೆರಸಿ ತಯಾರಿಸಿದ ಇದರ ತೊಗಟೆಯ ಕಷಾಯವನ್ನು ಹಲ್ಲುಗಳ ಸಂಕುಚತತೆಯನ್ನು ಹೋಗಲಾಡಿಸಲು ಸೇವಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ರೈತರು ತಮ್ಮ ಕೃಷಿಯಲ್ಲಿ ಬೆಳೆ ಸುಗಮವಾಗಲೆಂದು ತಮ್ಮ ಜಮೀನಿನಲ್ಲಿ ಬೆಳೆಗಳ ಮಧ್ಯೆ ಈ ಮರವನ್ನು ಬೆಳೆಸುತ್ತಾರೆ.
ಗ್ರಾಮದ ಶಕ್ತಿ ದೇವತೆ ಬನ್ನಿ ಮರ ಹಾಳಾಗದಂತೆ ತಡೆದು ಮರದ ಸುತ್ತಮುತ್ತಲು ಸ್ವಚ್ಚತೆಗೆ ಮನವಿ:
ಈ ಜಾಗದಲ್ಲಿ ಮತ್ತು ರಸ್ತೆಯ ಬದಿಯಲ್ಲಿ ಕಸ, ತ್ಯಾಜ್ಯವನ್ನು ಹಾಕಿರುತ್ತಾರೆ ಹಾಗೂ ಶೌಚ ಸ್ಥಳವನ್ನಾಗಿಸಿದ್ದಾರೆ. ಈ ದೈವೀ ವೃಕ್ಷದ ಬಳಿಯೇ ಪರಿಸರ ಹಾಳಾಗಿದೆ ಮತ್ತು ಗಬ್ಬು ವಾಸನೆಯಿದೆ, ಈ ವೃಕ್ಷದ ಬಳಿ ಈ ಹಿಂದೆ ಇದ್ದ ಬೀದಿ ದೀಪವನ್ನು ತೆಗೆಯಲಾಗಿದೆ. ಇದರಿಂದ ಮಹಿಳೆಯರು ಪೂಜೆಗೆ ಬರುವುದಕ್ಕೆ ಭಯದ ವಾತಾವರಣ ಇದೆ. ಕಾರಣ ಈ ನವರಾತ್ರಿಯಲ್ಲಿ ಮಹಿಳೆಯರು ಸುಗಮವಾಗಿ ಬಂದು ದೇವರ ಪೂಜೆ ನೆರವೇರಿಸಲು ನಿರ್ಭೀತಿಯಿಂದ ಪೂಜೆ ಮುಗಿಸಿ ಮನೆಗೆ ತೆರಳಲು ಅನುಕೂಲವಾಗುವಂತೆ ಇಲ್ಲಿ ತುರ್ತಾಗಿ ಒಂದು ಬೀದಿದೀಪವನ್ನು ಅಳವಡಿಸಬೇಕು ಹಾಗೂ ಈ ಜಾಗದಲ್ಲಿ ಕಸ, ತ್ಯಾಜ್ಯ ಎಸೆಯುವುದನ್ನು ತಪ್ಪಿಸಬೇಕು. ಸುತ್ತಮುತ್ತಲಿನ ಜಾಗದಲ್ಲಿ ಸ್ವಚ್ಚತೆಗೊಳಿಸಬೇಕು ಮತ್ತು ವಿದ್ಯುತ್ ದೀಪ ವ್ಯವಸ್ಥೆಗೊಳಿಸಬೇಕು ಎಂದು ಸುಮಾ ಚನ್ನೇಶ್, ಲೋಲಾಕ್ಷಮ್ಮ, ನಾಗರತ್ನಮ್ಮ, ಕರಿಯಮ್ಮ, ಶುಭ, ಪಾರ್ವತಮ್ಮ, ಜಯ್ಯಮ್ಮ, ಮುಂತಾದ ಮಹಿಳೆಯರು ಸಂಬಂದಿಸಿದವರಲ್ಲಿ ಮನವಿ ಮಾಡಿ ಗ್ರಾಮ ಪಂಚಾಯ್ತಿ ವತಿಯಿಂದ ಸ್ವಚ್ಚತೆ ಕಾರ್ಯ ಮಾಡಿಸಲು ಮುಂದಾಗಿದ್ದಾರೆ.
ಗ್ರಾಮ ಪಂಚಾಯ್ತಿಯ ಈ ಭಾಗದ ಚುನಾಯಿತ ಪ್ರತಿನಿಧಿಗಳು ಮುಂದಾಗಿ ಈ ಕೆಲಸವನ್ನು ತಕ್ಷಣ ಮಾಡಿಕೊಡಬೇಕು ಮತ್ತು ಸ್ವಚ್ಚತೆ, ಸುರಕ್ಷತೆ ಸಂರಕ್ಷಣೆಗೆ ಮುಂದಾಗಬೇಕೆಂದು ಕಲ್ಪ ಮೀಡಿಯಾ ಹೌಸ್ ವಿಶೇಷ ವರದಿಗಾರರಾದ ಮುರಳೀಧರ್ ನಾಡಿಗೇರ್ ಮನವಿ ಮಾಡಿರುತ್ತಾರೆ.
ವರದಿ : ಮುರಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post