ಕಲ್ಪ ಮೀಡಿಯಾ ಹೌಸ್
ನಿಸ್ವಾರ್ಥ ಶಿಕ್ಷಕರನ್ನು ಗೌರವಿಸುವುದಕ್ಕಾಗಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5ರಂದು ಡಾ. ಎಸ್. ರಾಧಾಕೃಷ್ಣರವರ ಜನ್ಮದಿನದ ನೆನಪಿಗಾಗಿ ಶಿಕ್ಷಕರ ದಿನಾರಚಣೆಯನ್ನು ಆಚರಿಸಲಾಗುವುದು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಗುರು ಎಂಬ ಪದದಲ್ಲಿ ಗು – ಎಂದರೆ ಅಜ್ಞಾನ , ರು – ಎಂದರೆ ಹೋಗಲಾಡಿಸುವುದು ಎಂದರ್ಥ. ಗುರುವಿಲ್ಲದ ಇಹವಿಲ್ಲ, ಗುರುವಿಲ್ಲದ ಪರವಿಲ್ಲ, ಗುರುವಿನ ಹಿರಿಮೆಯ ಅರಿವಿಲ್ಲದ ದೈವ ಸಾಕ್ಷಾತ್ಕಾರ ಸಾಧ್ಯವಿಲ್ಲ ಎನ್ನುವಂತೆ. ಪ್ರತಿ ವ್ಯಕ್ತಿಯ ಸಾಧನೆಯಲ್ಲಿ ಗುರುವಿನ ಮಾರ್ಗದರ್ಶನ ಮುಖ್ಯವಾಗಿರುತ್ತದೆ.
ನನ್ನ ಜೀವನದಲ್ಲಿ ಮೊದಲಿನಿಂದಲೂ ಕೈ ಹಿಡಿದು ನಡೆಸಿದ ಎಲ್ಲಾ ಗುರುಗಳು ನನಗೆ ಇಷ್ಟ. ಗುರುವಿನ ವಿಚಾರದಲ್ಲಿ ಇವರು ಇಷ್ಟ – ಇಷ್ಟವಿಲ್ಲ ಎಂದು ಹೇಳಲಿಕ್ಕೆ ಆಗದು ಕೇವಲ ಅಕ್ಷರ ಜ್ಞಾನ ನೀಡುವವರಷ್ಟೇ ಗುರು ಅಲ್ಲ, ಮಾನವನ ಬದುಕಿಗೆ ಮಾರ್ಗದರ್ಶನ ನೀಡುವ ಹಾಗೂ ಸಮಾಜಕ್ಕೆ ಬೆಳಕು ತೋರಿದವರೆಲ್ಲರನ್ನೂ ಗುರುಗಳೆಂದು ಗೌರವಿಸಲಾಗುತ್ತದೆ.
ನನಗೆ ತಿಳಿಯದ್ದನ್ನು ಕಲಿಸಿದವರೆಲ್ಲರನ್ನೂ ನಾನು ಗುರು ಅಂದುಕೊಳ್ಳುತ್ತೇನೆ. ನಿತ್ಯದ ವ್ಯವಹಾರದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯೂ ಸಹ ನನಗೆ ಗುರುಗಳಾಗಿರುತ್ತಾರೆ. ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪಾಠ ಕಲಿಯುತ್ತೇವೆ.
ಗುರು ಶಿಷ್ಯರ ಸಂಬಂಧ ಆತ್ಮೀಯವಾಗಿರಬೇಕು, ಗುರುವಿನೊಳಗೆ ಶಿಷ್ಯ, ಶಿಷ್ಯನೊಳಗೆ ಗುರುವಿನ ಭಾವನೆಗಳು ಐಕ್ಯವಾದಾಗ ಸಮಾಜದ ಪ್ರಗತಿಯಾಗುತ್ತದೆ ಎಂಬುವುದು ಜಾನ್ ರಸ್ಕಿನ್ ಅಭಿಮತವಾಗಿದೆ.
ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಕರ ಪಾತ್ರ ಅಪಾರ. ಮನುಷ್ಯರ ವ್ಯಕ್ತಿತ್ವ ನಿಮಾರ್ಣದ ನಿಜವಾದ ಶಿಲ್ಪಿಗಳು ಎಂದರೆ ಶಿಕ್ಷಕರು. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಎಲ್ಲರಿಗೂ ಶಿಕ್ಷಣ ದೊರೆತರೆ ಜಗತ್ತನ್ನೇ ಬದಲಿಸಬಹುದು. ಶಿಕ್ಷಣವೆಂದರೆ ಮನುಷ್ಯನಲ್ಲಿ ಮೊದಲೇ ಇರುವ ಪರಿಪೂರ್ಣತೆಯನ್ನು ಬೆಳಕಿಗೆ ತರುವುದು ಆಗಿರುತ್ತದೆ.
ಪ್ರತಿಯೊಬ್ಬ ಮಾನವನು ಆದರ್ಶವಂತನಾಗಲು ವಿದ್ಯೆ ಅವಶ್ಯಕ ವಿದ್ಯೆಯೊಂದು ನಾಶವಾಗದ ಸಂಪತ್ತು. ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ, ಯೋಗ್ಯತೆ ಯಿಂದ ಹಣ, ಹಣ್ಣದಿಂದ ಧರ್ಮ, ಧರ್ಮದಿಂದ ಸುಖ ದೊರೆಯುತ್ತದೆ.
ಹಾಗಾಗಿ ಇಂದಿನ ಯುವಪೀಳಿಗೆಗೆ ಮೌಲ್ಯಯುತ ಶಿಕ್ಷಣ ಸಿಗಬೇಕಾಗಿದೆ. ಯಾರು ತಮ್ಮ ಬಾಳನ್ನು ಮೇಣದಂತೆ ಕರಗಿಸಿಕೊಂಡು ಮತ್ತೊಬ್ಬರಿಗೆ ಬೆಳಕನ್ನು ನೀಡುತ್ತಾರೋ ಅವರು ನಿಸ್ಸಂಶಯವಾಗಿ ಅತ್ಯುತ್ತಮ ಶಿಕ್ಷಕ – ಶಿಕ್ಷಕಿ ಎನಿಸಿಕೊಳ್ಳತ್ತಾರೆ.
ಶಿಕ್ಷಕರು ತಮ್ಮನೇ ಸಮರ್ಪಿಸಿಕೊಂಡು ಅದೆಷ್ಟೋ ವಿದ್ಯಾರ್ಥಿಗಳ ಬಾಳನ್ನು ಬೆಳಗುತ್ತಾರೆ. ಬದುಕಿನ ದಾರಿ ತೋರಿದ ನನ್ನೆಲ್ಲಾ ಗುರುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post