ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: 2021ನೇ ಸಾಲಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಜಿಲ್ಲೆಯ 21 ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುವುದು. ಈ ಸಂಬಂಧ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ವಿಭಾಗದಿಂದ – 7, ಹಿರಿಯ ಪ್ರಾಥಮಿಕ ವಿಭಾಗದಿಂದ – 7, ಪ್ರೌಢಶಾಲಾ ವಿಭಾಗದಿಂದ – 7 ಜನ ಶಿಕ್ಷಕರುಗಳನ್ನು ಆಯ್ಕೆ ಮಾಡಲಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಆಯ್ಕೆಯಾದ ಶಿಕ್ಷಕರಿಗೆ ತಲಾ 5000ರೂ. ನಗದು ಪುರಸ್ಕಾರ ನೀಡಲಾಗುವುದು. ಹಾಗೂ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಆಯ್ಕೆ ಸಮಿತಿಯ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಇತರೆ 10 ಜನ ಶಿಕ್ಷಕರಿಗೆ ವಿಶೇಷ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ:
ಶಿವಮೊಗ್ಗ ಅನುಪಿನಕಟ್ಟೆ ಕಿ.ಪ್ರಾ ಮಾಲತಿ ಹೆಚ್.ಇ., ಭದ್ರಾವತಿ ಕಲ್ಲಿಹಾಳ್ ಕಿ.ಪ್ರಾ. ಮಾರ್ಗರೇಟ್ ಸುಶೀಲ, ಶಿಕಾರಿಪುರದ ಚಿಕ್ಕಮಾಗಡಿತಾಂಡ ಕಿ.ಪ್ರಾ. ಕುಮಾರನಾಯ್ಕ, ಸೊರಬದ ತುಡಿನೀರು ಕಿ.ಪ್ರಾ. ಶಂಕರಪ್ಪ, ತೀರ್ಥಹಳ್ಳಿಯ ಕಲ್ಗುಡ್ಡ ಕಿ.ಪ್ರಾ. ಪೌಜಿಯಾ ಸರಾವತ್, ಹೊಸನಗರದ ಬಿಲ್ಪತ್ರೆ ಪುರಪ್ಪೆಮನೆ ಕಿ.ಪ್ರಾ. ಪ್ರಸನ್ನಕುಮಾರ್ ಹಾಗೂ ಸಾಗರದ ಹಕ್ರೆ ಕಿ.ಪ್ರಾ. ಕೃಷ್ಣಮೂರ್ತಿ ಎಂ.ಪಿ ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ :
ತೀರ್ಥಹಳ್ಳಿ ತಾಲೂಕಿನ ವಟಗಾರು ಶಾಲೆಯ ಯಶೋದ ವಿ, ಸಾಗರ ತಾಲೂಕಿನ ಈಳಿ ಶಾಲೆಯ ಸೀತಾಬಾಯಿ ಭಟ್, ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಶಾಲೆಯ ಅನಿತಾಮೇರಿ, ಹೊಸನಗರ ತಾಲೂಕಿನ ಆನೇಗದ್ದೆರಸ್ತೆ ಹುಂಚ ಶಾಲೆಯ ಅವಿನಾಶ್ ಕೆ.ಜಿ., ಶಿವಮೊಗ್ಗ ತಾಲೂಕಿನ ಆಲದಹಳ್ಳಿ ಶಾಲೆಯ ಮಲ್ಲಪ್ಪ ಹೆಚ್.ಬಿ., ಸೊರಬ ತಾಲೂಕಿನ ಗುಡವಿ ಶಾಲೆಯ ರೆಜಿನಾಡಯಾಸ್ ಮತ್ತು ಶಿಕಾರಿಪುರ ತಾಲೂಕಿನ ಮುಡಬಸಿದ್ದಾಪುರ ಶಾಲೆಯ ಬಸವಣ್ಯಪ್ಪ ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲಾ ವಿಭಾಗ :
ಶಿಕಾರಿಪುರ ತಾಲೂಕು ಕಲ್ಮನೆ ಶಾಲೆಯ ಕರಿಬಸಪ್ಪ, ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ವಿಶ್ವತೀರ್ಥ ಶಾಲೆಯ ಸುರೇಶ ಎನ್.ಟಿ., ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಶಾಲೆಯ ಬಸವರಾಜ್ ಆರ್., ಹೊಸನಗರ ತಾಲೂಕಿನ ಮಸಗಲ್ಲಿ ಬೀಮನಕೆರೆ ಶಾಲೆಯ ಮಂಜಪ್ಪ ಲಮಾಣಿ, ಶಿವಮೊಗ್ಗ ಪಿಳ್ಳಂಗೇರಿ ಪ್ರೌಢಶಾಲೆಯ ಸರೋಜಮ್ಮ, ಸೊರಬ ಪ್ರೌಢಶಾಲೆಯ ವಿರುಪಾಕ್ಷಪ್ಪ ಎಂ., ಸಾಗರ ಪ್ರೌ.ಶಾಯ ದತ್ತಾತ್ರೇಯ ರಾಮ ಹೆಗಡೆ ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು:
ಕಿರಿಯ ಪ್ರಾಥಮಿಕ:
ಶಿವಮೊಗ್ಗದ ಹಾಡೋನಹಳ್ಳಿ ಕಿ.ಪ್ರಾ. ರಂಗಮ್ಮ, ಕೇಂದ್ರ ಕಾರಾಗೃಹದ ಗೋಪಾಲಕೃಷ್ಣ.
ಹಿರಿಯ ಪ್ರಾಥಮಿಕ:
ಭದ್ರಾವತಿ ತಾ. ಕಲ್ಲಹಳ್ಳಿಯ ಹಿ.ಪ್ರಾ. ವಿರುಪಾಕ್ಷಯ್ಯ ಹಿರೇಮಠ, ಶಿಕಾರಿಪುರ ತಿಮಲಾಪುರ ಹಿ.ಪ್ರಾ. ನಾಗರಾಜಚಾರ್, ಶಿವಮೊಗ್ಗದ ಲಷ್ಕರ್‌ಮೊಹಲ್ಲ ಹಿ.ಪ್ರಾ. ಸಫೂರ್ ಉನ್ನಿಸಾ.ಎಂ., ಮತ್ತು ಹೊಸಮನೆ ಹಿ.ಪ್ರಾ. ರವಿಕುಮಾರ್ ಎನ್.ಟಿ., ಸೊರಬದ ಚಿಕ್ಕಮಾಕೊಪ್ಪ ಹಿ.ಪ್ರಾ. ದಿವಾಕರ್ ಎನ್. ನಾಯಕ್ ಹಾಗೂ ಶಿಕಾರಿಪುರ ಬೇಗೂರು ಹಿ.ಪ್ರಾ. ಗೀತಾ ಜೆ.ಬಿ.
ಪ್ರೌಢ ಶಾಲಾ ವಿಭಾಗ :
ಸಾಗರ ತಾ. ಆನಂದಪುರ ಪ್ರೌ.ಶಾ. ಶಾಂತಕುಮಾರಿ ಹಾಗೂ ಶಿವಮೊಗ್ಗದ ತಾ. ಸೂಗೂರು ತುಂಗಾಭದ್ರಾ ಪ್ರೌ.ಶಾ. ಅಶೋಕ್ ವಾಲಿಕಾರ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post