ಕಲ್ಪ ಮೀಡಿಯಾ ಹೌಸ್
ಸಾಮಾನ್ಯವಾಗಿ ಕಳೆದೊಂದು ದಶಕದಿಂದ ಕೇಂದ್ರ ಹಾಗೂ ರಾಜ್ಯದ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವ ಯುವ ಸಮೂಹ ಹೆಚ್ಚಾಗುತ್ತಿದೆ. ಆದರೆ, ಪ್ರಮುಖವಾಗಿ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕ ಅಭ್ಯರ್ಥಿಗಳಿಗೆ ಅದರಲ್ಲೂ ಕನ್ನಡ ಮಾಧ್ಯಮ ಹಿನ್ನೆಲೆಯ ಅಭ್ಯರ್ಥಿಗಳಿಗೆ ಇದು ಕಬ್ಬಿಣದ ಕಡಲೆಯಾಗಿದೆ. ಹೀಗಾಗಿ, ಇಂತಹ ಸಮಸ್ಯೆಯನ್ನು ಪರಿಹರಿಸಿ, ಅಭ್ಯರ್ಥಿಗಳಿಗೆ ಕನ್ನಡದಲ್ಲಿಯೇ ತರಬೇತಿ ನೀಡುವ ಮೂಲಕ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಐಎಎಸ್ ಭವನ.
ಹೌದು…ಐಎಎಸ್ ಭವನ ಕೋಚಿಂಗ್ ಸೆಂಟರ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಮುಖವಾಗಿ ಐಎಎಸ್ ಹಾಗೂ ಕೆಎಎಸ್ ಪರೀಕ್ಷೆಗಳಿಗೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಸತಿ ಸಹಿತ ಅತ್ಯುತ್ತಮ ಗುಣಮಟ್ಟದ ತರಬೇತಿ ನೀಡುತ್ತಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಏನೆಲ್ಲಾ ವಿಶೇಷತೆಗಳಿವೆ?
ಅತ್ಯಂತ ವಿಶೇಷವಾಗಿ ಕೇಂದ್ರ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಲೋಕ ಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆ ಐಎಎಸ್-ಕೆಎಎಸ್ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ತರಬೇತಿ ಲಭ್ಯವಿದ್ದು, ಪೂರ್ವಭಾವಿ-ಮುಖ್ಯಪರೀಕ್ಷೆಯ ಪರೀಕ್ಷಾ ಸರಣಿ(Test Series)ಯನ್ನು ಸಂಸ್ಥೆ ನಡೆಸುತ್ತದೆ.
ಪ್ರತಿನಿತ್ಯ ಪ್ರಚಲಿತ ವಿದ್ಯಮಾನಗಳು, ಪ್ರತಿದಿನ ಕಿರು ಪರೀಕ್ಷೆಗಳು ಹಾಗೂ ಪ್ರತಿ ವಾರವೂ ಸಹ ಮಾದರಿ ಪರೀಕ್ಷೆಗಳನ್ನು ಇಲ್ಲಿ ನಡೆಸಲಾಗುತ್ತದೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.
ಬೆಂಗಳೂರು, ಧಾರವಾಡಗಳಲ್ಲಿ ಕೋಚಿಂಗ್ ಸೆಂಟರ್ ಹೊಂದಿರುವ ಐಎಎಸ್ ಭವನ ಈಗ ಶಿವಮೊಗ್ಗದಲ್ಲೂ ಸಹ ತರಬೇತಿ ಕೇಂದ್ರವನ್ನು ಆರಂಭಿಸಿರುವುದು ಮಲೆನಾಡಿನ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶವಾಗಿದೆ.
ಸಂಸ್ಥೆಯ ವಿಶೇಷತೆಗಳೇನು?
- ಬೆಂಗಳೂರು ಮತ್ತು ಧಾರವಾಡದ ತರಬೇತಿದಾರರಿಂದ ವಿಶೇಷ ತರಬೇತಿ
- ಬೆಂಗಳೂರು ಮತ್ತು ಧಾರವಾಡದ ಮಾದರಿಯ ತರಬೇತಿ
- ಆಫ್’ಲೈನ್ ಮತ್ತು ಆನ್’ಲೈನ್ ಟೆಸ್ಟ್ ಸೀರೀಸ್
- ಪುರುಷ-ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಹಾಸ್ಟಲ್ ವ್ಯವಸ್ಥೆ
- ಪ್ರತಿ ಭಾನುವಾರ ಅಧಿಕಾರಿಗಳಿಂದ ಮಾರ್ಗದರ್ಶನ
ಐಎಎಸ್ ಹಾಗೂ ಕೆಎಎಸ್ ಪರೀಕ್ಷೆಗೆ ಸೆಪ್ಟೆಂಬರ್ 20ರಿಂದ ನೂತನ ಬ್ಯಾಚ್ ಆರಂಭವಾಗಲಿದೆ. ಮಾಹಿತಿ ಹಾಗೂ ದಾಖಲಾತಿಗಾಗಿ ಮೊ.9606065473 ಹಾಗೂ 9663722495ಗೆ ಸಂಪರ್ಕಿಸಬಹುದು. ಈ https://iasbhavan.com/ ವೆಬ್’ಸೈಟ್’ಗೆ ವಿಸಿಟ್ ಮಾಡಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post