No Result
View All Result
Yogada Satsang Society brings out Kannada version on Kriya Yoga today
English Articles

Yogada Satsang Society brings out Kannada version on Kriya Yoga today

by ಕಲ್ಪ ನ್ಯೂಸ್
March 25, 2026
0

Kalpa Media House  |  Dharwad  | Yogada Satsang Society of India has brought out the Kannada version of Kriya Yoga...

Read moreDetails
Sagara Engulfed In The Ocean of Music

Sagara Engulfed In The Ocean of Music

March 23, 2026
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
  • Advertise With Us
  • Grievances
  • About Us
  • Contact Us
Thursday, March 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕೊರೋನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 7, 2021
in Special Articles
0
ಕೊರೋನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಈಗ ಜಗತ್ತಿನಾದ್ಯಂತ ಕೊರೋನಾ ಮಹಾಮಾರಿಯಿಂದಾಗಿ ಎಲ್ಲೆಡೆ ಜನರ ಸಂಚಾರಕ್ಕೆ ಅನೇಕ ನಿರ್ಬಂಧಗಳಿವೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರಸಾರಿಗೆಯ ನಿಷೇಧವಿದೆ. ಕೆಲವು ಸ್ಥಳಗಳಲ್ಲಿ ಕೊರೊನಾದ ಸೋಂಕು ಕಡಿಮೆಯಿದ್ದರೂ, ಅಲ್ಲಿನ ಜನರು ಮನೆಯಿಂದ ಹೊರಗೆ ಬರಲು ಅನೇಕ ನಿಷೇಧಗಳಿವೆ. ಇದರಿಂದ ಹಿಂದೂಗಳ ವಿವಿಧ ಹಬ್ಬ, ಉತ್ಸವ ಮತ್ತು ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ನಿಷೇಧಗಳು ಬಂದಿವೆ. ಕೊರೊನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಇದನ್ನೇ ‘ಆಪದ್ಧರ್ಮ’ ಎಂದು ಹೇಳುತ್ತಾರೆ.

ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ

1. ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಿರುವ ಪರ್ಯಾಯವೆಂದರೆ ‘ಆಪದ್ಧಧರ್ಮ’ !
‘ಆಪದ್ಧರ್ಮ’ ಅಂದರೆ ‘ಆಪದಿ ಕರ್ತವ್ಯೋ ಧರ್ಮಃ|’ ಅಂದರೆ ‘ಆಪತ್ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಮಾನ್ಯತೆಯಿರುವ ಕೃತಿಗಳು’. ಇಂತಹ ಕಾಲದಲ್ಲಿಯೇ ಶ್ರೀ ಗಣೇಶಚತುರ್ಥಿಯ ವ್ರತ ಮತ್ತು ಗಣೇಶೋತ್ಸವ ಬರುತ್ತಿರುವುದರಿಂದ ಸಂಪತ್ಕಾಲದಲ್ಲಿ ಹೇಳಿದಂತೆ, ಈ ಬಾರಿ ಉತ್ಸವದ ಸ್ವರೂಪದಲ್ಲಿ ಅಂದರೆ ಸಾಮೂಹಿಕ ಸ್ವರೂಪದಲ್ಲಿ ಈ ಉತ್ಸವವನ್ನು ಆಚರಿಸಲು ಮಿತಿಯಿದೆ. ಈ ದೃಷ್ಟಿಯಿಂದ ಪ್ರಸ್ತುತ ಲೇಖನದಲ್ಲಿ ‘ಸದ್ಯದ ದೃಷ್ಟಿಯಿಂದ ಧರ್ಮಾಚರಣೆ ಎಂದು ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?’, ಎಂಬ ವಿಚಾರವನ್ನು ಮಾಡಲಾಗಿದೆ. ಇಲ್ಲಿ ಮಹತ್ವದ ವಿಷಯವೆಂದರೆ, ‘ಹಿಂದೂ ಧರ್ಮವು ಎಷ್ಟು ವ್ಯಾಪಕವಾಗಿ ಮಾನವನ ವಿಚಾರವನ್ನು ಮಾಡಿದೆ?’, ಎಂಬುದನ್ನು ನಾವು ಕಲಿಯಬಹುದು. ಇದರಿಂದ ಹಿಂದೂ ಧರ್ಮದ ಏಕಮೇವಾದ್ವಿತೀಯತೆ ಗಮನಕ್ಕೆ ಬರುತ್ತದೆ.


2. ಗಣೇಶ ಚತುರ್ಥಿಯ ವ್ರತವನ್ನು ಹೇಗೆ ಆಚರಿಸಬೇಕು ?
ಗಣೇಶೋತ್ಸವವು ಹಿಂದೂಗಳ ಒಂದು ದೊಡ್ಡ ಹಬ್ಬವಾಗಿದೆ. ಶ್ರೀ ಗಣೇಶಚತುರ್ಥಿಗೆ, ಹಾಗೆಯೇ ಶ್ರೀ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ 1 ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಸದ್ಯ ಕೊರೊನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆಗೂಡಿಸಿ ದೃಶ್ಯಾವಳಿ, ದುಬಾರಿ ಅಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮುಂದಿನ ಪದ್ಧತಿಯಿಂದ ಮಾಡಬಹುದು.


ಪ್ರತಿ ವರ್ಷ ಅನೇಕರ ಮನೆಗಳಲ್ಲಿ ಜೇಡಿಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್ ಇತ್ಯಾದಿಗಳಿಂದ ತಯಾರಿಸಿದ ಮೂರ್ತಿಯನ್ನು ಪೂಜಿಸಲಾಗುತ್ತದೆ. ಈ ವರ್ಷ ಯಾವ ಪ್ರದೇಶದಲ್ಲಿ ಕೊರೋನಾ ವೈರಾಣುವಿನ ಸೋಂಕು ಅಲ್ಪ ಪ್ರಮಾಣದಲ್ಲಿದೆಯೋ, ಅಂದರೆ ಯಾವ ಭಾಗದಲ್ಲಿ ಸಂಚಾರಸಾರಿಗೆ ನಿಷೇಧವಿಲ್ಲವೋ, ಅಂತಹ ಸ್ಥಳಗಳಲ್ಲಿ ಎಂದಿನಂತೆ ಗಣೇಶಮೂರ್ತಿಯನ್ನು ತಂದು ಅದನ್ನು ಪೂಜಿಸಬೇಕು.

ಯಾರಿಗೆ ಕಾರಣಾಂತರಗಳಿಂದ ಮನೆಯಿಂದ ಹೊರಗೆ ಬರುವುದು ಸಾಧ್ಯವಿಲ್ಲವೋ, ಉದಾ. ಕೊರೋನಾದ ಸಾಂಕ್ರಾಮಿಕತೆಯಿಂದ ಅಕ್ಕಪಕ್ಕದ ಪರಿಸರ ಅಥವಾ ಕಟ್ಟಡವನ್ನು ‘ನಿಷೇಧಿತ ವಲಯ’ ಎಂದು ಘೋಷಿಸಿದ್ದರೆ, ಅಲ್ಲಿಯ ಜನರು ತಮಗೆ ಗಣೇಶತತ್ತ್ವದ ಲಾಭವಾಗಬೇಕೆಂದು ತಮ್ಮ ಮನೆಯಲ್ಲಿರುವ ಗಣೇಶನ ಮೂರ್ತಿ ಅಥವಾ ಗಣೇಶನ ಚಿತ್ರಕ್ಕೆ ಷೋಡಷೋಪಚಾರ ಪೂಜೆಯನ್ನು ಸಲ್ಲಿಸಬೇಕು. ಈ ಪೂಜೆಯನ್ನು ಮಾಡುವಾಗ ಪೂಜೆಯ ಅಂಗವಾದ ‘ಪ್ರಾಣಪ್ರತಿಷ್ಠಾಪನೆ’ ಈ ವಿಧಿಯನ್ನು ಮಾತ್ರ ಮಾಡಬಾರದು, ಎಂದು ಗಮನದಲ್ಲಿಡಬೇಕು.

3. ಜ್ಯೇಷ್ಠ ಗೌರಿ ವ್ರತವನ್ನು ಯಾವ ರೀತಿ ಮಾಡಬೇಕು ?
ಕೆಲವು ಮನೆಗಳಲ್ಲಿ ಭಾದ್ರಪದ ಶುಕ್ಲ ಪಕ್ಷ ಅಷ್ಟಮಿಯಂದು ಜ್ಯೇಷ್ಠ ಗೌರಿಯ ಪೂಜೆಯನ್ನು ಮಾಡಲಾಗುತ್ತದೆ. ಕೆಲವು ಮನೆಗಳಲ್ಲಿ ಕಲ್ಲುಗಳ ರೂಪದಲ್ಲಿ ಮತ್ತು ಇನ್ನು ಕೆಲವು ಮನೆಗಳಲ್ಲಿ ಮುಖವಾಡಗಳನ್ನು ಮಾಡಿ ಅವುಗಳನ್ನು ಪೂಜಿಸಲಾಗುತ್ತದೆ. ಕೊರೊನಾದ ಸಂಕಟದಿಂದ ಯಾರಿಗೆ ಪ್ರತಿವರ್ಷದಂತೆ ಕಲ್ಲುಗಳ ಸ್ವರೂಪದಲ್ಲಿ ಅಥವಾ ಮುಖವಾಡಗಳ ಸ್ವರೂಪದಲ್ಲಿ ಗೌರಿಯ ಪೂಜೆಯನ್ನು ಮಾಡಲು ಸಾಧ್ಯವಿಲ್ಲವೋ, ಅವರು ತಮ್ಮ ಮನೆಯಲ್ಲಿನ ಯಾವುದಾದರೂಂದು ದೇವಿಯ ಮೂರ್ತಿ ಅಥವಾ ದೇವಿಯ ಚಿತ್ರದ ಪೂಜೆಯನ್ನು ಮಾಡಬೇಕು.

ವಿಶೇಷ ಸೂಚನೆ :
ಗಣೇಶಮೂರ್ತಿಯನ್ನು ತರುವಾಗ, ಹಾಗೆಯೇ ಮೂರ್ತಿಯ ವಿಸರ್ಜನೆಯನ್ನು ಮಾಡುವಾಗ ಮನೆಯ ಕೆಲವೇ ವ್ಯಕ್ತಿಗಳು ಹೋಗಬೇಕು. ಮೂರ್ತಿಯ ವಿಸರ್ಜನೆ ಮಾಡುವಾಗ ತಮ್ಮ ಮನೆಯ ಹತ್ತಿರದ ಕೆರೆ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡಬೇಕು. ಈ ಸಮಯದಲ್ಲಿ ಜನಜಂಗುಳಿಯಾಗುವ ಅಪಾಯ ಹೆಚ್ಚಿರುವುದರಿಂದ ಕೊರೋನಾ ಸಂದರ್ಭದಲ್ಲಿ ಸರಕಾರವು ಹೇಳಿರುವ ಮಾರ್ಗದರ್ಶಕ ಅಂಶಗಳನ್ನು ತಪ್ಪದೇ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವೇ ಆಗಿದೆ.

4. ‘ಗಣೇಶಮೂರ್ತಿಯು ಏಕೆ ಜೇಡಿಮಣ್ಣಿನದ್ದಾಗಿರಬೇಕು?’, ಈ ವಿಷಯದಲ್ಲಿ ಧರ್ಮಶಾಸ್ತ್ರದ ಆಧಾರ !
ಧರ್ಮಶಾಸ್ತ್ರಾನುಸಾರ ಜೇಡಿಮಣ್ಣಿನ ಮೂರ್ತಿಯನ್ನು ಪೂಜಿಸಿದರೆ, ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಅತ್ಯಧಿಕ ಲಾಭವಾಗುತ್ತದೆ, ಎಂದು ಹಿಂದೂಗಳ ಧರ್ಮಶಾಸ್ತ್ರದ ಗ್ರಂಥಗಳಲ್ಲಿ ಹೇಳಲಾಗಿದೆ. ಧರ್ಮಸಿಂಧುವಿನಲ್ಲಿ ಗಣೇಶಚತುರ್ಥಿಯಂದು ಪೂಜಿಸಲ್ಪಡುವ ಗಣಪತಿಯ ಮೂರ್ತಿ ಹೇಗಿರಬೇಕು ?, ಎಂಬ ವಿಷಯದಲ್ಲಿ ಮುಂದಿನ ನಿಯಮಗಳನ್ನು ನೀಡಲಾಗಿದೆ.

ತತ್ರ ಮೃನ್ಮಯಾದಿಮೂರ್ತೌ ಪ್ರಾಣಪ್ರತಿಷ್ಠಾಪೂರ್ವಕಂ ವಿನಾಯಕಂ ಷೋಡಷೋಪಚಾರೈಃ ಸಂಪೂಜ್ಯ|
ಧರ್ಮಸಿಂಧು, ಪರಿಚ್ಛೇದ ||

ಅರ್ಥ:
ಈ ದಿನ (ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ) ಶ್ರೀ ಗಣೇಶನ ಮಣ್ಣು ಇತ್ಯಾದಿಗಳಿಂದ ತಯಾರಿಸಿದ ಮೂರ್ತಿಯ ಪ್ರಾಣಪ್ರತಿಷ್ಠೆಯೊಂದಿಗೆ ಸ್ಥಾಪನೆಯನ್ನು ಮಾಡಿ ಷೋಡಷೋಪಚಾರ ಪೂಜೆಯನ್ನು ಮಾಡಿ.

ಇನ್ನೊಂದು ಸಂದರ್ಭಕ್ಕನುಸಾರ ‘ಸ್ಮೃತಿಕೌಸ್ತುಭ’ ಹೆಸರಿನ ಧರ್ಮಗ್ರಂಥದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ಸಿದ್ಧಿವಿನಾಯಕನ ವ್ರತವನ್ನು ಮಾಡುವುದರ ಬಗೆಗಿನ ಉಲ್ಲೇಖವಿದೆ. ಇದರಲ್ಲಿ ‘ಮೂರ್ತಿ ಹೇಗಿರಬೇಕು ’, ಎಂಬುದರ ಸವಿಸ್ತಾರ ವರ್ಣನೆ ಬಂದಿದೆ.

ಸ್ವಶಕ್ತಾಯ ಗಣನಾಥಸ್ಯ ಸ್ವರ್ಣರೌಪ್ಯಮಯಾಕೃತಿಮ್ |
ಅಥವಾ ಮೃನ್ಮಯಿ ಕಾರ್ಯಾ ವಿತ್ತಶಾಠ್ಯಂ ನ ಕಾರಯೇತ್ || -ಸ್ಮೃತಿಕೌಸ್ತುಭ

ಅರ್ಥ:
ಈ (ಸಿದ್ಧಿವಿನಾಯಕನ) ಪೂಜೆಗಾಗಿ ತಮ್ಮ ಕ್ಷಮತೆಗನುಸಾರ ಬಂಗಾರ, ಬೆಳ್ಳಿ ಅಥವಾ ಮಣ್ಣಿನ ಮೂರ್ತಿಯನ್ನು ತಯಾರಿಸಬೇಕು. ಇದರಲ್ಲಿ ಜಿಪುಣತನ ಮಾಡಬಾರದು.

ಇದರಲ್ಲಿ ಯಥಾಶಕ್ತಿ ಬಂಗಾರ, ಬೆಳ್ಳಿ ಅಥವಾ ಮಣ್ಣಿನಿಂದಲೇ ಮೂರ್ತಿಯನ್ನು ತಯಾರಿಸಬೇಕು’, ಎನ್ನುವ ಸ್ಪಷ್ಟ ಉಲ್ಲೇಖವಿರುವುದರಿಂದ, ಇದನ್ನು ಹೊರತುಪಡಿಸಿ ಇತರ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಶಾಸ್ತ್ರಾನುಸಾರ ಅಯೋಗ್ಯವಾಗಿದೆ.

-ವಿನೋದ ಕಾಮತ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: CoronaGanesha FestivalKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial Articleಕೊರೋನಾ
Share202Tweet123Send
Previous Post

ಎನ್‌ಇಎಸ್: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಣೆ

Next Post

ಮುಖ್ಯಮಂತ್ರಿ ಬೊಮ್ಮಾಯಿ ಇಂದು ದೆಹಲಿಗೆ : ಕೇಂದ್ರ ಸಚಿವರ ಭೇಟಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪತ್ರಕರ್ತನ ಚಿಕಿತ್ಸೆಗೆ ಆರ್ಥಿಕ ನೆರವು: ಸಿಎಂ ಬೊಮ್ಮಾಯಿಗೆ ಅಭಿನಂದನೆ

ಮುಖ್ಯಮಂತ್ರಿ ಬೊಮ್ಮಾಯಿ ಇಂದು ದೆಹಲಿಗೆ : ಕೇಂದ್ರ ಸಚಿವರ ಭೇಟಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಶಿವಮೊಗ್ಗ | ನಾರಾಯಣ ಹೆಲ್ತ್’ನಿಂದ `ಹೆಲ್ದಿ ಕಿಡ್ಸ್ ಗೇಟ್ವೇ’ ಕಾರ್ಯಾಗಾರ ಆಯೋಜನೆ

ಶಿವಮೊಗ್ಗ | ನಾರಾಯಣ ಹೆಲ್ತ್’ನಿಂದ `ಹೆಲ್ದಿ ಕಿಡ್ಸ್ ಗೇಟ್ವೇ’ ಕಾರ್ಯಾಗಾರ ಆಯೋಜನೆ

March 26, 2026
ಯುವಜನರಿಗೆ ವಿಪತ್ತು ನಿರ್ವಹಣೆ ತರಬೇತಿ ಅವಶ್ಯ: ಅಪರ ಜಿಲ್ಲಾಧಿಕಾರಿ ಅಭಿಷೇಕ್

ಯುವಜನರಿಗೆ ವಿಪತ್ತು ನಿರ್ವಹಣೆ ತರಬೇತಿ ಅವಶ್ಯ: ಅಪರ ಜಿಲ್ಲಾಧಿಕಾರಿ ಅಭಿಷೇಕ್

March 26, 2026
ಅವಳ ನಿಸ್ವಾರ್ಥ ಸೇವೆಗೆ ಒಂದು ದಿನವಾದರೂ ಶುಭ ಹಾರೈಸೋಣ | ಕವಿತಾ ಸುಧೀಂದ್ರ ಅಭಿಮತ

ಅವಳ ನಿಸ್ವಾರ್ಥ ಸೇವೆಗೆ ಒಂದು ದಿನವಾದರೂ ಶುಭ ಹಾರೈಸೋಣ | ಕವಿತಾ ಸುಧೀಂದ್ರ ಅಭಿಮತ

March 26, 2026
ಪ್ರಬುದ್ಧ ಶಿಷ್ಯ ಪರಂಪರೆಯನ್ನು ರೂಪಿಸುವುದು ಮಹತ್ವದ ಕಾರ್ಯ | ಮೃದಂಗ ವಿದ್ವಾಂಸ ವಾಸುದೇವರಾವ್ ಅಭಿಮತ

ಪ್ರಬುದ್ಧ ಶಿಷ್ಯ ಪರಂಪರೆಯನ್ನು ರೂಪಿಸುವುದು ಮಹತ್ವದ ಕಾರ್ಯ | ಮೃದಂಗ ವಿದ್ವಾಂಸ ವಾಸುದೇವರಾವ್ ಅಭಿಮತ

March 25, 2026
ಮೂಡುಬಿದಿರೆಯ ನ್ಯೂ ವೈಬ್ರೆಂಟ್ – ಅರಬಿಂದೋ ಪಿಯು ಕಾಲೇಜು ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ

ಮೂಡುಬಿದಿರೆಯ ನ್ಯೂ ವೈಬ್ರೆಂಟ್ – ಅರಬಿಂದೋ ಪಿಯು ಕಾಲೇಜು ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ

March 25, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL