ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ರಾಜ್ಯದ ಜನತೆಗೆ ಐದು ಮಹತ್ವಪೂರ್ಣ ಗ್ಯಾರೆಂಟಿಗಳನ್ನು ನೀಡುವ ಮೂಲಕ ಈ ಭಾರಿ ಅಧಿಕಾರಕ್ಕೇರಿರುವ ನೂತನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನೂತನ ಸಚಿವರುಗಳಿಗೆ ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಕಾಂಗ್ರೆಸ್ ನೀಡಿರುವ ಆಶ್ವಾಸನೆಗಳನ್ನು ಪರಿಗಣಿಸಿ ರಾಜ್ಯದ ಜನರು ನಿಮಗೆ ಅಧಿಕಾರ ನೀಡಿದ್ದಾರೆ. ಈ ಹಂತದಲ್ಲಿ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಆಶ್ವಾಸನೆ ನೀಡುವಾಗ ಆಲೋಚನೆ ಮಾಡಬೇಕು. ರಾಜ್ಯದ ಜನತೆಗೆ ಅನುಕೂಲವಾಗುವ ಮತ್ತು ಮುಂದಾಲೋಚನೆ ಇಟ್ಟುಕೊಂಡು ಜನರಿಗೆ ಆಶ್ವಾಸನೆ ನೀಡಿದರೆ ಮುಂದಿನ ರಾಜಕೀಯ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನೀವು ಆತ್ಮ ಅವಲೋಕನ ಮಾಡಿಕೊಂಡು ಈ ಕೆಳಗೆ ಅಂಶಗಳನ್ನು ಓದಿ.
- ಕಾಂಗ್ರೆಸ್ ಸರ್ಕಾರ ಕೊಡಲು ಮುಂದಾಗಿರುವ 5 ಗ್ಯಾರಂಟಿ ಆಶ್ವಾಸನೆ ಈಗ ಬೇಕಾಗಿತ್ತಾ?
- ಇದರಿಂದ ಅನುಕೂಲ ಜನತೆಗೆ ಆದರೂ ಸರ್ಕಾರಕ್ಕೆ ಹೊರೆ ಅಲ್ಲವೆ?
- ನೀವು ನಿಜವಾದ ರಾಜಕೀಯ ಸಚಿವ ಸಂಪುಟದ ಸದಸ್ಯರಾಗಿದ್ದರೆ ಮುಂದಿನ ನಿಮ್ಮ ಎಲ್ಲಾ ಗ್ಯಾರಂಟಿ ಗಳನ್ನು ಯಾವುದೇ ಸಾಲ ಮಾಡದೆ ಸರ್ಕಾರಕ್ಕೆ ಹೊರೆಯಾಗದೆ ಮಾಡುತ್ತಿರಾ?
- ನೀವು ನಿಮ್ಮ ಆಶ್ವಾಸನೆ ತಿರಿಸಲು ಹೋಗಿ ಬೇರೆಯವರಿಗೆ ತೂಂದರೆ ಮಾಡುತ್ತಿರಾ ?
- ಟ್ಯಾಕ್ಸ್ ಹೆಚ್ಚಳ, ಟೂಲ್ ಹೆಚ್ಚಳ, ದಿನಚರಿ ಸಾಮಾಗ್ರಿಗಳನ್ನು ಹೆಚ್ಚಿಸಲು ಮುಂದಾಗುತ್ತಿರಾ?
ಇನ್ನು ಒಮ್ಮೆ ಯೋಚಿಸಿ, ನಿಮ್ಮ ಮುಂದೆ ಇರುವ ಅನೇಕ ಅಭಿವೃದ್ಧಿ ಕಾರ್ಯಗಳು ತುಂಬಾ ಇದೆ ಅವರೆಲ್ಲರೂ ನಿಮ್ಮ ಮುಂದೆ ಬರುತ್ತಾರೆ. ಅವುಗಳಲ್ಲಿ
- ಮಳೆಯಾಗಿಲ್ಲ ರೈತರು ನಿಮ್ಮ ಮುಂದೆ ಬರುತ್ತಾರೆ
- ಮಳೆ ಹಾನಿ ಜನರಿಗೆ ವ್ಯವಸ್ಥೆ
- ಉದ್ಯೋಗ ಇಲ್ಲದೆ ನಿರುದ್ಯೋಗಿಗಳು ಮುಂದೆ ಬರುತ್ತಾರೆ
- ಸರ್ಕಾರಿ, ಬ್ಯಾಂಕ್, ಸರ್ಕಾರಿ ಸಂಸ್ಥೆಯ ನೌಕರರು ತಮ್ಮ ಸಂಬಳ ಹೆಚ್ಚಳಕ್ಕೆ ಬರುತ್ತಾರೆ
- ರೈತರು ಮಳೆಗಾಗಿ ಮೂಡಬಿತ್ತನೆ ಮಾಡಲು ಒತ್ತಾಯಿಸುತ್ತಾರೆ
- ಜಾತಿವಾರು ಜನ ತಮ್ಮ ತಮ್ಮ ಅಭಿವೃದ್ಧಿ ಗಾಗಿ ಬೇಡಿಕೆ ನೀಡುತ್ತಾರೆ
- ನಿಗಮ ಮಂಡಳಿ, ಸಂಘ ಸಂಸ್ಥೆಗಳು ಅನುದಾನಕ್ಕೆ ಮುಂದಾಗುತ್ತಾರೆ
- ಇದರ ನಡುವೆ ಹಿಂದಿನ ಸರ್ಕಾರದ ಯೋಜನೆಗಳನ್ನು ಪೂರ್ಣವಾಗಿ ಮುಗಿಸಬೇಕು
- ಅಡಿಗೆ ಅನಿಲಕ್ಕೆ ಸಬ್ಸಿಡಿ ಇರಿಸಬೇಕು
ಮುಂದಿನ ನಿಮ್ಮ ಸರ್ಕಾರದ ದಾರಿ ಯಾವ ಕಡೆ ಜನತೆಗೆ ತಿಳಿಸಬೇಕು! ನೀವು ನಿಜವಾಗಿಯೂ ಜನರಿಗೆ ಒಳ್ಳೆಯ ಕೆಲಸ ಮಾಡುವುದಾದರೆ ನಿಮ್ಮ 5 ಗ್ಯಾರಂಟಿ ಕೊಡುವುದನ್ನು ಯೋಜಿಸಿ ನಂತರ ಈ ಕೆಳಗಿನ ಯೋಜನೆ ಕೈಗೆತ್ತಿಕೊಂಡು ಕೆಲಸ ಮಾಡಿದರೆ ಎಲ್ಲಾ ಹಂತದಲ್ಲಿ ಸಹಾಯವಾಗುತ್ತದೆ.
- ಶಿಕ್ಷಣ ಭಾಗ್ಯ – ಇಂದಿನ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಿ ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ
- ಆರೋಗ್ಯ ಭಾಗ್ಯ – ಇಂದು 50-60 ವರ್ಷಕ್ಕೆ ಜನರು ಹೃದಯ ಸಂಬಂಧಿ, ಕಿಡ್ನಿ, ಕ್ಯಾನ್ಸರ್ ಹಾಗೂ ಇನ್ನಿತರ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಗದೆ ಅತಿ ಬೇಗನೆ ಸಾವು ನೋವುಗಳನ್ನು ಅನುಭವಿಸುತ್ತಿದ್ದಾರೆ ಹಾಗಾಗಿ ಉಚಿತ ಆರೋಗ್ಯ ಯೋಜನೆ ಜಾರಿಗೆ ತನ್ನಿ
- ವಸತಿ ಯೋಜನೆ: ವಸತಿ ಯೋಜನೆ ಸರಳಿಕರಣ ಮಾಡಿ ಎಲ್ಲರೂ ತಮ್ಮ ತಮ್ಮ ಸ್ವಂತ ಸೂರಿನಲ್ಲಿ ನೆಲೆಯಾಗುವಂತೆ ಮಾಡಿ
- ಜಾತಿಯತೆ, ಮೀಸಲಾತಿ ಇವುಗಳನ್ನು ಸರಿಪಡಿಸಿ ಮುಂದುವರೆದರೆ ಸರ್ಕಾರ ಸುಭದ್ರವಾಗಿರುತ್ತದೆ
ನೋಡೋಣ ಸ್ವಲ್ಪ ದಿನದಲ್ಲಿ ಸರ್ಕಾರದ ಹಣೆಬರಹ ಗೊತ್ತಾಗುತ್ತದೆ. ಜನರ ಜೀವನ ಯಾವರೀತಿ ಈ ಗ್ಯಾರಂಟಿ ಭಾಗ್ಯ ಪಡೆದು ಸುಖ ಜೀವನ ಸಾಗಿಸುತ್ತಾರೆ, ನೋಡೋಣ ಬನ್ನಿ…
ವಿಶೇಷ ಲೇಖನ: ಮುರಳೀಧರ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post