ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯ Madhya Pradesh-Chhattisgarh-Rajasthan assembly election ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ, ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ Minister Amith Shah ಅವರು, “ಪ್ರಧಾನಿ ನರೇಂದ್ರ ಮೋದಿ PMNarendraModi ಅವರ ನಾಯಕತ್ವದಲ್ಲಿ, ಭಾರತೀಯ ಜನತಾ ಪಕ್ಷವು ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ನ್ನು ನಿರ್ಣಾಯಕವಾಗಿ ಸೋಲಿಸಿದೆ” ಎಂದು ಹೇಳಿದರು.
“ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆಗಳ ಮೂಲಕ ಮೋದಿಯವರು ಮಾತ್ರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಇಂದಿನ ಚುನಾವಣಾ ಫಲಿತಾಂಶಗಳು ತುಷ್ಟೀಕರಣ ಮತ್ತು ಜಾತಿ ಆಧಾರಿತ ರಾಜಕಾರಣದ ಯುಗ ಅಂತ್ಯಗೊಂಡಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಹೊಸ ಭಾರತವು ಕಾರ್ಯಕ್ಷಮತೆಯ ರಾಜಕೀಯವನ್ನು ಆಧರಿಸಿ ಮತ ಚಲಾಯಿಸುತ್ತದೆ.

Also read: 8 ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಕಾಡಾನೆ ದಾಳಿಗೆ ಬಲಿ
ನರೇಂದ್ರ ಮೋದಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದ ಕಲ್ಯಾಣ ನೀತಿಗಳು ಮತ್ತು ಉಪಕ್ರಮಗಳು ಮಧ್ಯಪ್ರದೇಶದ ಗಣನೀಯ ವಿಜಯಕ್ಕೆ ಕಾರಣವಾಗಿವೆ ಎಂದು ಶ್ರೀಯುತ ಅಮಿತ್ ಶಾ ಹೇಳಿದರು. “ಈ ವಿಜಯವು ಪ್ರಾಥಮಿಕವಾಗಿ ಉತ್ತಮ ಆಡಳಿತಕ್ಕೆ ಸಾರ್ವಜನಿಕರ ಅನುಮೋದನೆಯ ಫಲಿತಾಂಶವಾಗಿದೆ” ಎಂದರು.

ತೆಲಂಗಾಣ ಜನತೆಯ ಉತ್ಸಾಹದ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವರು, “ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ತೆಲಂಗಾಣದ ಅಭಿವೃದ್ಧಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ಜನರ ಸಹಕಾರದೊಂದಿಗೆ ನಾವು ನಿಸ್ಸಂದೇಹವಾಗಿ ತೆಲಂಗಾಣವನ್ನು ಸಮೃದ್ಧ ರಾಜ್ಯವನ್ನಾಗಿ ಮಾಡುತ್ತೇವೆ ಎಂದರು.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಗಣನೀಯ ಬಹುಮತದ ಬಗ್ಗೆ, ಶ್ರೀಯುತ ಶಾ ಅವರು ಪಕ್ಷದ ಕಾರ್ಯಕರ್ತರು ಮತ್ತು ಮೂರು ರಾಜ್ಯಗಳ ಜನರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.









Discussion about this post