ಕಲ್ಪ ಮೀಡಿಯಾ ಹೌಸ್
ಭಾದ್ರಪದ ಕೃಷ್ಣ ಪಾಡ್ಯದಿಂದ ಅಮಾವಾಸ್ಯೆವರೆಗೂ ಮಾಡಲಾಗುವ ಶ್ರಾದ್ಧಕ್ಕೆ ಪಾರ್ವಣ ಮಹಾಲಯ ಶ್ರಾದ್ಧ ಎನ್ನುತ್ತಾರೆ. ಮಹಾಲಯ ಶ್ರಾದ್ಧದಲ್ಲಿ ಶ್ರಾದ್ಧ ಮಾಡುವವರು ತಮ್ಮ ಪಿತೃ ಕುಲ, ಮಾತೃ ಕುಲ, ಅಳಿಯ, ಮಾವ, ಗುರು ಮತ್ತು ಆಪ್ತರು ಎಲ್ಲರಿಗಾಗಿ ಶ್ರಾದ್ಧವನ್ನು ಮಾಡಲಾಗುತ್ತದೆ. ಆದಕಾರಣ ಈ ಶ್ರಾದ್ಧವು ಬಹಳ ಮಹತ್ವಪೂರ್ಣವಾದುದ್ದಾಗಿದೆ.
ಮಹಾಲಯ ಶ್ರಾದ್ಧದಲ್ಲಿ 4 ಧರ್ಮಪಿಂಡಗಳನ್ನು ಅರ್ಪಿಸುವ ವಿಧಿಯಿರುತ್ತದೆ, ಈ ಧರ್ಮ ಪಿಂಡವು ಮಹಾಲಯ ಶ್ರಾದ್ಧದ ವಿಶೇಷ ಭಾಗವಾಗಿದೆ. ಇದರಲ್ಲಿ ಕೆಳಗೆ ಹೇಳಿರುವ ಜೀವಗಳಿಗಾಗಿ ಪಿಂಡದಾನ ಮಾಡಲಾಗುತ್ತದೆ, ಸೃಷ್ಟಿಯ ನಿರ್ಮಿತಿ ಮಾಡುವ ಬ್ರಹ್ಮನಿಂದ ಹಿಡಿದು ಯಾರು ನಮ್ಮ ತಾಯಿ-ತಂದೆಯ ಕುಲದಲ್ಲಿ ಜನ್ಮ ಪಡೆದಿದ್ದಾರೆ, ಜೊತೆಗೆ ಗುರು, ಆಪ್ತರು, ನಮ್ಮ ಈ ಜನ್ಮದಲ್ಲಿನ ಸೇವಕರು, ದಾಸ ದಾಸಿಯರು, ಮಿತ್ರರು, ಮನೆಯ ಸಾಕುಪ್ರಾಣಿಗಳು, ನೆಟ್ಟಿರುವ ವೃಕ್ಷಗಳು, ನಮ್ಮ ಮೇಲೆ ಉಪಕಾರ ಮಾಡಿರುವ ವ್ಯಕ್ತಿ, ಯಾರಿಗೆ ಪಿಂಡದಾನ ಮಾಡುವವರು ಯಾರು ಇರುವುದಿಲ್ಲವೋ ಅಥವಾ ಪರಿಚಿತ ಮತ್ತು ಅಪರಿಚಿತ ವ್ಯಕ್ತಿ.
ಇಂತಹ ಧರ್ಮ ಪಿಂಡದ ಪದ್ಧತಿಯಿಂದ, ನಮ್ಮ ಪೂರ್ವಜರು ಎಷ್ಟು ವ್ಯಾಪಕ ರೂಪದಲ್ಲಿ ಸಮಾಜ ಋಣದ ಅರಿವನ್ನು ಇಟ್ಟುಕೊಂಡಿದ್ದರು ಎಂಬುದು ಗಮನಕ್ಕೆ ಬರುತ್ತದೆ. ಸನಾತನ ಹಿಂದೂ ಧರ್ಮದ ಅಭ್ಯಾಸ ಮಾಡದಂತಹ ಹಿಂದೂ ವಿರೋಧಿಗಳಿಗೆ, ‘ವಸುದೈವ ಕುಟುಂಬಕಮ್’ ನ ಬೋಧನೆಯನ್ನು ಕಲಿಸುವ, ಮನುಷ್ಯನ ಜೊತೆ ಜೊತೆ ಎಲ್ಲಾ ಪ್ರಾಣಿ ಮಾತ್ರರನ್ನು ಉದ್ಧಾರ ಮಾಡುವ ಇಷ್ಟು ವ್ಯಾಪಕ ವಿಚಾರ ಮಾಡುವಂತಹ ಹಿಂದೂ ಧರ್ಮದ ಧಾರ್ಮಿಕ ಪದ್ಧತಿಯಲ್ಲಿ ಯಾವುದೇ ಸಾಮಾಜಿಕ ಜವಾಬ್ದಾರಿಯಿಲ್ಲ ಎಂದು ಅನಿಸುತ್ತದೆ. (ಸಾಮಾಜಿಕ ಜವಾಬ್ದಾರಿಗಳನ್ನು ಹಿಂದೂ ಧರ್ಮವು ಸ್ವೀಕರಿಸುವುದಿಲ್ಲ ಎಂದವರಿಗನಿಸುತ್ತದೆ).
ಪಿತೃಪಕ್ಷದಲ್ಲಿ ಪ್ರತಿದಿನ ಮಹಾಲಯ ಶ್ರಾದ್ಧ ಮಾಡಬೇಕು. ಆದರೆ ಪ್ರಸ್ತುತ ಕಾಲದಲ್ಲಿ ಸಾಮಾನ್ಯ ಜನರಿಗೆ ಇದು ಸಾಧ್ಯವಿಲ್ಲ, ಆದ ಕಾರಣ ಯಾವ ತಿಂಗಳ ಯಾವ ತಿಥಿಯಂದು ತಂದೆಯ/ತಾಯಿಯ ಮೃತ್ಯು ಆಗಿರುತ್ತದೆಯೋ, ಪಿತೃಪಕ್ಷದಲ್ಲಿ ಅದೇ ತಿಥಿಯಂದು ತಂದೆಯ/ತಾಯಿಯ ಮಹಾಲಯ ಶ್ರಾದ್ಧ ಮಾಡಬೇಕು.
ಉದಾ. ತಂದೆಯ ಮೃತ್ಯು ಕಾರ್ತಿಕ ಶುಕ್ಲ ಪಂಚಮಿಯಂದು ಆಗಿದ್ದರೆ, ಪಿತೃಪಕ್ಷದ ಪಂಚಮಿ ತಿಥಿಯಂದು ಮಹಾಲಯ ಶ್ರಾದ್ಧ ಮಾಡಬೇಕು. ಕೃಷ್ಣಪಕ್ಷದಲ್ಲಿ ಮೃತ್ಯು ಆಗಿದ್ದರೆ ಅದೇ ತಿಥಿಯಂದು ಮಹಾಲಯ ಶ್ರಾದ್ಧ ಮಾಡಬೇಕು. ಏನಾದರೂ ತಿಥಿಯ ಜ್ಞಾನ ಇರದಿದ್ದರೆ ಆಗ ಸರ್ವಪಿತ್ರೀ ಅಮಾವಾಸ್ಯೆಯ ದಿನ ಮಹಾಲಯ ಶ್ರಾದ್ಧ ಮಾಡಬೇಕು. ಅಪಘಾತದಲ್ಲಿ, ಅಥವಾ ಯುದ್ಧದಲ್ಲಿ ತಂದೆಯ ಮೃತ್ಯು ಆಗಿದ್ದರೆ ಆಗ ಮೃತ್ಯುವಿನ ತಿಥಿ ಯಾವುದೇ ಆಗಿದ್ದರೂ ಚತುರ್ದಶಿ ತಿಥಿಯಂದು ಮಹಾಲಯ ಶ್ರಾದ್ಧ ಮಾಡಬೇಕು.
( ಆಧಾರ : ಶ್ರಾದ್ಧದಲ್ಲಿನ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ ಮತ್ತು ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ )
ಸಂಗ್ರಹ : ವಿನೋದ ಕಾಮತ, ವಕ್ತಾರರು, ಸನಾತನ ಸಂಸ್ಥೆ, ಸಂಪರ್ಕ : 9342599299
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post