ಸಾರಾಂಶ: ಅತ್ಯಾಚಾರ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ವೈದ್ಯ ಸೇರಿ ಇಬ್ಬರು ಸಹಚರರು ಸೇರಿ, ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಲು ಯತ್ನಿಸಿದ್ದು,ಇದರ ವಿರುದ್ಧ ಸಿಡಿದೆದ್ದ ಆಕೆ ಬ್ಲೇಡ್'ನಿಂದ ವೈದ್ಯನ ಮರ್ಮಾಂಗ ಕೊಯ್ದು ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ.
ಕಲ್ಪ ಮೀಡಿಯಾ ಹೌಸ್ | ವಿಶೇಷ ಸುದ್ದಿ |
ಕೋಲ್ಕತ್ತಾದ ಆರ್’ಜಿ ಕಾರ್ ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯ ಮೇಲೆ ಅತ್ಯಾಚಾರ #Rape on Trainee Doctor ಹಾಗೂ ಭೀಕರ ಹತ್ಯೆ ಪ್ರಕರಣ ಇನ್ನೂ ಹೊಡೆಯಾಡುತ್ತಿರುವ ಬೆನ್ನಲ್ಲೇ ಬಿಹಾರದ ಆಸ್ಪತ್ರೆಯೊಂದರಲ್ಲಿ ಇಂತಹುದ್ದೇ ಒಂದು ಅಸಹ್ಯಕರ ಪ್ರಕರಣ ಸಂತ್ರಸ್ತೆಯ ಸಾಹಸ ಮನಃಸ್ಥಿತಿಯಿಂದ ತಪ್ಪಿದೆ.
ಬಿಹಾರದ ಸಮಸ್ತಿಪುರ ಜಿಲ್ಲೆಯ ಮುಸ್ರಿಘರಾರಿ ಠಾಣೆ ವ್ಯಾಪ್ತಿಯ ಗಂಗಾಪುರದ ಆರ್’ಬಿಎಸ್ ಹೆಲ್ತ್ ಕೇರ್ ಸೆಂಟರ್’ನಲ್ಲಿ ಈ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Also read: ಸೂರ್ಯ ಜಗತ್ತಿನ-ಜ್ಯೋತಿಷ್ಯದ ಆತ್ಮ: ರಾಘವೇಶ್ವರ ಶ್ರೀ
ಆದರೆ ಬಿಹಾರದಲ್ಲಿ ಮದ್ಯಪಾನಕ್ಕೆ ಸರ್ಕಾರವೇ ನಿಷೇಧ ಹೇರಿದ್ದು, ಮದ್ಯ ಮಾರಾಟಕ್ಕೂ ಎಲ್ಲೂ ಅವಕಾಶವಿಲ್ಲ, ಹೀಗಿರುವಾಗ ಈ ವೈದ್ಯ ಹಾಗೂ ಸಹಚರರು ಎಲ್ಲಿಂದ ಈ ಮದ್ಯ ತಂದು ಸೇವಿಸಿದರು ಎಂಬುದು ಈಗ ತನಿಖೆಗೆ ಕಾರಣವಾಗಿದೆ.

ತನ್ನ ಮೇಲೆ ಅತ್ಯಾಚಾರವೆಸಗಲು ಬಂದ ಡಾ. ಸಂಜಯ್ ಕುಮಾರ್ ಮರ್ಮಾಂಗದ ಮೇಲೆ ನರ್ಸ್ ಬ್ಲೇಡ್’ನಿಂದ ಕತ್ತರಿಸಿದ್ದಾಳೆ. #Nurse cuts Doctors Private Part ಬಳಿಕ ಆ ಸ್ಥಳದಿಂದ ಓಡಿ ಆದ ಆಕೆ ಆಸ್ಪತ್ರೆಯ ಹೊರಗೆ ಬಂದು ಪೊಲೀಸರ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾಳೆ.
ಘಟನಾ ಸ್ಥಳದಿಂದ ಪೊಲೀಸರು ಅರ್ಧ ಬಾಟಲ್ ಮದ್ಯ ಹಾಗೂ ನರ್ಸ್ ಬಳಸಿದ ಬ್ಲೇಡ್ ರಕ್ತಸಿಕ್ತ ಬಟ್ಟೆ ಹಾಗೂ ಮೂರು ಸೆಲ್ಫೋನ್’ಗಳನ್ನು ವಶಕ್ಕೆ ಪಡೆದಿದ್ದಾರೆ. ನರ್ಸ್ ಕರೆಗೆ ತಕ್ಷಣವೇ ಸ್ಪಂದಿಸಿದ ಡಿಎಸ್’ಪಿ ಸಂಜಯ್ ಕುಮಾರ್ ಪಾಂಡೆ, ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಡಾ.ಸಂಜಯ್ ಕುಮಾರ್, ಸುನೀಲ್ ಕುಮಾರ್ ಗುಪ್ತಾ ಹಾಗೂ ಅವಧೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಸಿಸಿ ಕ್ಯಾಮೆರಾ ಆಫ್ ಮಾಡಿ ಕೃತ್ಯಕ್ಕೆ ಯತ್ನ
ಆರೋಪಿಗಳು ಆಸ್ಪತ್ರೆಯ ಬಾಗಿಲುಗಳನ್ನು ಬಂದ್ ಮಾಡಿ, ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ ನರ್ಸ್ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post