No Result
View All Result
Physical Intelligence to Shape India’s Future
English Articles

Physical Intelligence to Shape India’s Future

by kalpa News
July 2, 2026
0

Kalpa Media House  | Hyderabad  | Physical Intelligence will play a transformative role in India's future development by making infrastructure...

Read moreDetails
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

Kotak Mahindra to acquire Deutsche Bank’s retail banking

July 1, 2026
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಸೂರ್ಯ ಜಗತ್ತಿನ-ಜ್ಯೋತಿಷ್ಯದ ಆತ್ಮ: ರಾಘವೇಶ್ವರ ಶ್ರೀ

kalpa News by kalpa News
September 13, 2024
in ಉತ್ತರ ಕನ್ನಡ
0
ಸೂರ್ಯ ಜಗತ್ತಿನ-ಜ್ಯೋತಿಷ್ಯದ ಆತ್ಮ: ರಾಘವೇಶ್ವರ ಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, 54ನೇ ದಿನವಾದ ಗುರುವಾರ ಮುಳ್ಳೇರಿಯಾ ಮಂಡಲದ ಸುಳ್ಯ, ಈಶ್ವರಮಂಗಲ, ನೀರ್ಚಾಲು, ಕುಂಬಳೆ, ಪಳ್ಳತ್ತಡ್ಕ ಮತ್ತು ಪೆರಡಾಲ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಕಾಲ ಸರಣಿಯ ಪ್ರವಚನ ಮಾಲಿಕೆಯಲ್ಲಿ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಆಶೀರ್ವಚನ.   

ಸೂರ್ಯ ಹೇಗೆ ಜಗತ್ತಿಗೆ ಆತ್ಮವೋ ಹಾಗೆ ಜ್ಯೋತಿಷ್ಯಕ್ಕೂ ಆತ್ಮ. ಜ್ಯೋತಿಷ್ಯದಲ್ಲಿ ಸೂರ್ಯಗ್ರಹ ಕೇಂದ್ರಬಿಂದು. ಆದ್ದರಿಂದಲೇ ಕವಡೆಶಾಸ್ತ್ರದಲ್ಲಿ ವಿಶೇಷವಾಗಿ ಸೂರ್ಯಸಂಬಂಧ ಲಕ್ಷಣಗಳನ್ನು ಕಾಣಬಹುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ #Raghaveshwara Shri ಕರೆ ನೀಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, 54ನೇ ದಿನವಾದ ಗುರುವಾರ ಮುಳ್ಳೇರಿಯಾ ಮಂಡಲದ ಸುಳ್ಯ, ಈಶ್ವರಮಂಗಲ, ನೀರ್ಚಾಲು, ಕುಂಬಳೆ, ಪಳ್ಳತ್ತಡ್ಕ ಮತ್ತು ಪೆರಡಾಲ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಕಾಲ ಸರಣಿಯ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು.
ಜ್ಯೋತಿಷ್ಯಕ್ಕೆ ಅತ್ಯಗತ್ಯವಾಗಿ ಬೇಕಾದ್ದು ದೈವಾನುಕೂಲ. ಆದ್ದರಿಂದಲೇ ಜ್ಯೋತಿಷಿಗಳನ್ನು ದೈವಜ್ಞ ಎಂದು ಕರೆಯಲಾಗುತ್ತದೆ. ಕವಡೆಶಾಸ್ತ್ರದಲ್ಲೂ ಗುರುಕವಡೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ನಮಸ್ಕರಿಸಿಯೇ ಜ್ಯೋತಿಷ್ಯ ವಿಶ್ಲೇಷಣೆಯನ್ನು ದೈವಜ್ಞ ನಡೆಸುತ್ತಾರೆ ಎಂದು ಹೇಳಿದರು.

Also read: ಬರೋಬ್ಬರಿ ಆರು ತಿಂಗಳ ಬಳಿಕ ಅರವಿಂದ್ ಕೇಜ್ರಿವಾಲ್’ಗೆ ಸುಪ್ರೀಂ ಜಾಮೀನು ಮಂಜೂರು

ಜ್ಯೋತಿಷದ ಮೂಲಕ ಎಲ್ಲರಿಗೂ ಒಂದೇ ಫಲ ಚಿಂತನೆ ನಡೆಸುವಂತಿಲ್ಲ. ಆಯಾ ಪರಿಸ್ಥಿತಿಗೆ ಅನುಗುಣವಾಗಿ ಅದು ಅನ್ವಯವಾಗುತ್ತದೆ. ಒಂದೇ ಕಾಲದಲ್ಲಿ ಹುಟ್ಟಿದ ಚಕ್ರವರ್ತಿಯ ಮಗನಿಗೂ, ಕೊಟ್ಟಿಗೆಯಲ್ಲಿ ಹುಟ್ಟುವ ಕರುವಿಗೂ ಫಲ ಒಂದೇ ಇರುವುದಿಲ್ಲ. ಹೋಲಿಕೆಗಳು ಇರಬಹುದೇ ವಿನಃ ಉಳಿದ ಅಂಶಗಳು ಪರಿಸರಕ್ಕೆ ಅನುಗುಣವಾಗಿ ಬದಲಾಗುತ್ತವೆ ಎಂದು ವಿಶ್ಲೇಷಿಸಿದರು.

ಜ್ಯೋತಿಷ್ಯಶಾಸ್ತ್ರದಲ್ಲಿ ದೈವಜ್ಞ ಲಗ್ನಸಾಧನೆ ಮಾಡುವುದು ಕವಡೆ ಶಾಸ್ತ್ರದ ಮೂಲಕ ಮಾತ್ರ. ಉಳಿದೆಲ್ಲ ವಿಧಾನದಲ್ಲಿ ಪೃಚ್ಛಕನ ಪ್ರಶ್ನೆಯ ಮೂಲಕವೇ ಲಗ್ನಸಾಧನೆ ಮಾಡಲಾಗುತ್ತದೆ. ಜಾತಕ ಎನ್ನುವುದು ಬ್ರಹ್ಮಾಂಡದಂತೆ. ದೈವಜ್ಞನಿಗೆ ಗೋಚರವಾದ ಅಂಶಗಳಿಗೆ ಅನುಗುಣವಾಗಿರುತ್ತದೆ. ಒಂದೇ ವಾಕ್ಯ ಬೇರೆಬೇರೆಯವರ ಮೇಲೆ ಬೇರೆ ಬೇರೆ ಫಲ ನೀಡಬಹುದು. ದೈವಜ್ಞನ ಚಿಂತನೆಗೂ ಇದು ಅನ್ವಯಿಸುತ್ತದೆ ಎಂದು ಬಣ್ಣಿಸಿರು.
ಜ್ಯೋತಿಷ್ಯದಲ್ಲಿ ಕವಡೆಶಾಸ್ತ್ರ ಹೊರತುಪಡಿಸಿದರೆ ಉಳಿದೆಲ್ಲ ವಿಧಾನಗಳಲ್ಲಿ ಪ್ರಶ್ನೆಕೇಳುವ ವ್ಯಕ್ತಿಯನ್ನು ಆಧರಿಸಿ ಇದೆ. ಆದರೆ ಒಂದು ಶಾಸ್ತ್ರ ಮಾತ್ರ ದೈವಜ್ಞನ ಆಯುಧ. ಇದು ಕವಡೆಶಾಸ್ತ್ರ. ದೈವಜ್ಞನ ಈ ಕವಡೆಗಳಲ್ಲಿ ನಕ್ಷತ್ರ, ರಾಶಿ, ಗ್ರಹಗಳು ಎಲ್ಲವೂ ಅಡಗಿರುತ್ತವೆ. ಸತಿದೇವಿಯ ಆಭರಣಗಳು ಸಮುದ್ರದಲ್ಲಿ ಕವಡೆಗಳಾಗಿ ರೂಪುಗೊಂಡವು ಎಂಬ ಪ್ರತೀತಿ ಇದೆ ಎಂದು ಬಣ್ಣಿಸಿದರು.

ಎಂಟು ಮಂಗಲವಸ್ತುಗಳ ಸಮ್ಮುಖದಲ್ಲಿ ಪ್ರಶ್ನಚಿಂತನ ನಡೆಯುವುದೇ ಅಷ್ಟಮಂಗಲ. ತಾಂಬೂಲ, ಅಕ್ಷತೆ, ಕ್ರಮುಕ, ಧಾರುಭಾಜನ, ಅಂಬರ, ದರ್ಪಣ, ಗ್ರಂಥ, ದೀಪಗಳೇ ಅಷ್ಟಮಂಗಲಗಳು. ಇವುಗಳ ಸಾಕ್ಷಿತ್ವದಲ್ಲಿ ಅಷ್ಟಮಂಗಲ ನಡೆಯುತ್ತದೆ. ಇದು ಶಾಸ್ತ್ರದ ಶಿಖರವಿದ್ದಂತೆ ಎಂದು ಬಣ್ಣಿಸಿದರು.

ಇಂದಿನ ಅನಾವರಣದ ಬಗ್ಗೆ ಪ್ರಸ್ತಾವಿಸಿ ವ್ಯಕ್ತವಾಗಿ ಗುರು, ಅವ್ಯಕ್ತವಾಗಿ ಮಾತೆ ಮತ್ತು ನಾಗ ಸಾನ್ನಿಧ್ಯದ ಗುರುಕಟ್ಟೆಯೊಂದರ ಅನಾವರಣ ಇಂದು ನೆರವೇರಿದೆ. ಮುಂದಿನ ದಿನಗಳಲ್ಲಿ ಶಿಲಾಮಯ ಗುರುಪಾದುಕೆಗಳ ಪ್ರತಿಷ್ಠಾಪನೆಯಾಗಲಿದೆ. ವ್ಯಕ್ತವಾಗಿ ಗುರುಸಾನ್ನಿಧ್ಯ, ಅವ್ಯಕ್ತವಾಗಿ ದೇವಿ ಮತ್ತು ನಾಗಸನ್ನಿಧಿ ಇರುವ ಪವಿತ್ರ ಸ್ಥಾನವನ್ನು ಗಜಪೃಷ್ಠಾಕೃತಿಯಲ್ಲಿ ನಿರ್ಮಿಸಲಾಗಿದೆ. ಸಮೃದ್ಧವಾಗಿ, ಮಂಗಲಕರವಾಗಿ, ಸರ್ವತ್ರ ಮಂಗಲ ಪಸರಿಸುವ ಸಾನ್ನಿಧ್ಯವಾಗಿ ಬೆಳೆಯಲಿ, ಬೆಳಗಿ ಎಂದು ಆಶಿಸಿದರು.
ಗುರುಕಟ್ಟೆಯ ಅನಾವರಣವನ್ನು ಶ್ರೀಗಳ ಮಾತೃಶ್ರೀಯವರಾದ ಶ್ರೀಮತಿ ವಿಜಯಲಕ್ಷ್ಮಿ ನೆರವೇರಿಸಿದರು.

http://kalpa.news/wp-content/uploads/2024/04/VID-20240426-WA0008.mp4

ವಿದ್ವಾನ್ ಉಮಾಕಾಂತ್ ಭಟ್ ಕೆರೆಕೈ ಮತ್ತು ಪತ್ರಕರ್ತ ನಾಗರಾಜ ಮತ್ತಿಗಾರ್ ಅವರು ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆ ಪಡೆದರು. ವಿವಿವಿ ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಎಂ, ಮುಳ್ಳೇರಿಯಾ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ದೈವಜ್ಞರಾದ ಕೇಶವ ಭಟ್ ಮಿತ್ತೂರು, ಆರ್ಕೋಡ್ಲು ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: Kannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaUttara Kannadaಗೋಕರ್ಣ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬರೋಬ್ಬರಿ ಆರು ತಿಂಗಳ ಬಳಿಕ ಅರವಿಂದ್ ಕೇಜ್ರಿವಾಲ್’ಗೆ ಸುಪ್ರೀಂ ಜಾಮೀನು ಮಂಜೂರು

Next Post

ನರ್ಸ್ ಮೇಲೆ ಗ್ಯಾಂಗ್ ರೇಪ್’ಗೆ ವೈದ್ಯ & ಸಹಚರರು ಯತ್ನ | ಸಿಟ್ಟಿಗೆದ್ದ ಆಕೆ ಮಾಡಿದ್ದೇನು?

kalpa News

kalpa News

Next Post
ನರ್ಸ್ ಮೇಲೆ ಗ್ಯಾಂಗ್ ರೇಪ್’ಗೆ ವೈದ್ಯ & ಸಹಚರರು ಯತ್ನ | ಸಿಟ್ಟಿಗೆದ್ದ ಆಕೆ ಮಾಡಿದ್ದೇನು?

ನರ್ಸ್ ಮೇಲೆ ಗ್ಯಾಂಗ್ ರೇಪ್'ಗೆ ವೈದ್ಯ & ಸಹಚರರು ಯತ್ನ | ಸಿಟ್ಟಿಗೆದ್ದ ಆಕೆ ಮಾಡಿದ್ದೇನು?

Leave a Reply Cancel reply

Your email address will not be published. Required fields are marked *

No Result
View All Result
Physical Intelligence to Shape India’s Future
English Articles

Physical Intelligence to Shape India’s Future

by kalpa News
July 2, 2026
0

Kalpa Media House  | Hyderabad  | Physical Intelligence will play a transformative role in India's future development by making infrastructure...

Read moreDetails
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

Kotak Mahindra to acquire Deutsche Bank’s retail banking

July 1, 2026
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL