ಅನ್ನ ಮಶಿತಂ ತ್ರೇಧಾ ವಿಧೀಯತೇ
ತಸ್ಯಯಃ ಸ್ಥವಿಷ್ಠೋ ಧಾತುಸ್ತತ್ ಪುರೀಷಂ ಭವತಿ, ಯೋ ಮಧ್ಯಮಸ್ತನ್ಮಾಂಸಂ, ಯೋಣಿಷ್ಠಸ್ತನ್ಮನಃ
ಆಪಃ ಪೀತಾಸ್ತ್ಯೇಧಾ ವಿಧೀಯಂತೇ
ತಾಸಾಂ ಯಃ ಸ್ತವಿಷ್ಠೋ ಧಾತುಸ್ತನ್ಮೂತ್ರಂ ಭವತಿ
ಯೋ ಮಧ್ಯಮಸ್ತಲ್ಲೋಹಿತಂ ಯೋಣಿಷ್ಠಃ ಪ್ರಾಣಃ॥
ತೇಜೋಶಿತಂ ತ್ರೇಧಾ ವಿಧೀಯತೇ
ತಸ್ಯಯಃ ಸ್ಥವಿಷ್ಠೋ ಧಾತುಸ್ತದಸ್ಥಿ ಭವತಿ
ಯೋ ಮಧ್ಯಮಃ ಸಮಜ್ಜಾಃ ಯೋಣಿಷ್ಠಃ ಸಾ ವಾಕ್ ಅನ್ನಮಯಂ ಹಿ ಸೋಮ್ಯಮನ ಆಪೋಮಯಃ ಪ್ರಾಣಸ್ತೇಜೋಮಯಿಃ ವಾಗಿತಿ॥
ಯಾವುದೇ ಅನ್ನಾಹಾರದಲ್ಲಿ ಮೂರು ರೂಪದ ಮಿಶ್ರಣಗಳಿವೆ.
1. ಘನ, 2. ದ್ರವ, 3.ತೈಲ.
ಘನದಲ್ಲಿರುವ ಸ್ಥೂಲಾಂಶವೇ ಮಲದ ರೂಪದಲ್ಲಿ ವಿಸರ್ಜನೆಯಾಗುತ್ತದೆ. ಮಧ್ಯಮಾಂಶದಲ್ಲಿ ಮಾಂಸವಾಗುತ್ತದೆ. ಅದರ ಸೂಕ್ಷ್ಮಾಂಶವು ಮನಸ್ಸಿಗೆ ಪೋಷಣೆಯಾಗುತ್ತದೆ.
ದ್ರವದಲ್ಲೂ ಮೂರು ಅಂಶಗಳಿವೆ. ಮೊದಲನೆಯ ಅಂಶವು ಮೂತ್ರದ ರೂಪದಲ್ಲಿ ವಿಸರ್ಜನೆಯಾಗುತ್ತದೆ. ಮೂತ್ರ. ಮಧ್ಯಮಾಂಶವು ರಕ್ತದ ರೂಪದಲ್ಲಿ ಪರಿವರ್ತಿತವಾಗುತ್ತದೆ. ಇದರ ಸೂಕ್ಷ್ಮಾಂಶವು ದ್ರವ ಆಮ್ಲಜನಕ(liquid oxygen) ಆಗುತ್ತದೆ.
ಅನ್ನದೊಳಗಿನ ತೈಲಾಂಶದಲ್ಲಿ ಮೂರು ವಿಧಗಳಿವೆ. ಇದರ ಸ್ತೂಲಾಂಶವು ಅಸ್ತಿ(ಎಲುಬು) ಎಲುಬಾಗಿ ಪರಿವರ್ತನೆಯಾಗುತ್ತದೆ. ಮಧ್ಯಮಾಂಶವು ಮಜ್ಜಾ ಧಾತುವಾಗಿ ಪರಿವರ್ತನೆಯಾಗುತ್ತದೆ. ಇದರ ಸೂಕ್ಷ್ಮಾಂಶವು ವಾಣಿ(ವಾಕ್)ಯಾಗಿ ಪರಿವರ್ತಿತವಾಗುತ್ತದೆ.
ಒಟ್ಟಿನಲ್ಲಿ ನಾವು ಸೇವಿಸುವ ಆಹಾರವು ಹೊಟ್ಟೆ ತುಂಬುವುದು ಎನ್ನುವುದಕ್ಕಿಂತ ಸಂಕ್ಷೇಪದಲ್ಲಿ ಹೇಳುವುದಾದರೆ ಮನಸ್ಸು- ಅನ್ನಮಯ, ಪ್ರಾಣ-ಜಲಮಯ, ವಾಣಿಯು ತೇಜೋಮಯವಾಗಿದೆ. ವೇದ ಧರ್ಮದ ಅಶೌಚದ ಪರಿಕಲ್ಪನೆಯ ಹಿಂದೆ ಈ ಸನಾತನ ಸತ್ಯವೇ ಸಂಸ್ಪೂರ್ತಿ ತತ್ವವಾಗಿದೆ. ಕಂಡ ಕಂಡಲ್ಲಿ ತಿನ್ನುವುದರಿಂದ ಹೊಟ್ಟೆ ತುಂಬುಹುದಷ್ಟೇ ವಿನಃ ಪೋಷಣೆಗಳು ಲಭಿಸದು. ಮಲ ಮೂತ್ರಗಳು ಪ್ರಮಾಣಕ್ಕಿಂತ ಹೆಚ್ಚಾಗಿ ವಿಸರ್ಜನೆಯಾದೀತಷ್ಟೆ.
ಬ್ರಾಹ್ಮಣ ಭೋಜನ ಪ್ರಿಯಃ ಎಂದರೆ ಇಂತಹ ಪರಿಕಲ್ಪನೆಯ ಆಹಾರ ನಿಯಮ ಮತ್ತು ಸೇವನೆಯಾಗುತ್ತದೆ. ಒಮ್ಮೆ ಆಹಾರ ಸೇವಿಸಿದರೆ ಮಧ್ಯೆ ಆರು ಘಂಟೆಗಳವರೆಗೆ ಆಹಾರ ಸೇವಿಸಬಾರದು ಎಂದು ವೈದ್ಯರೂ ಹೇಳುವುದು ಈ ಕಾರಣಕ್ಕಾಗಿ.
ದುಃಖ, ಜಗಳ, ವ್ಯಥೆಯಲ್ಲಿ ಸೇವಿಸುವ ಆಹಾರವು ಸರಿಯಾದ ನಿಯಮದಲ್ಲಿ ರೂಪುಗೊಳ್ಳದೆ, ಹಂಚಿಕೆಯಲ್ಲಿ(distribution) ಏರುಪೇರಾಗಿ ರೋಗೋತ್ಪತ್ತಿಗೆ ಕಾರಣವಾದೀತು. ಬಹಳ ಪುರಾತನದಲ್ಲೇ ಆಹಾರ ಸೇವನೆಯ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಿದ್ದರು. ಅದಕ್ಕಾಗಿ ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂದರು.
ಶರೀರ ಆರೋಗ್ಯಯುತವಾಗಿದ್ದಾಗ ಯಾವ ಕಾರ್ಯವನ್ನೂ ಮಾಡಬಹುದು. ಕೇವಲ ಜ್ವರಬಾಧಾದಿಗಳೇ ಅನಾರೋಗ್ಯವಲ್ಲ. ಮಲಮೂತ್ರ ಸ್ವೇದಾದಿಗಳ ವಿಸರ್ಜನೆ ಸರಿಯಾಗಿದ್ದಾಗ ಮನಸ್ಸು ಶುದ್ಧವಾಗಿ ಪ್ರಫುಲ್ಲವಾಗಿದ್ದಾಗ ಇರುವುದೇ ಉತ್ತಮ ಆರೋಗ್ಯ. ಇದು ಕೆಟ್ಟರೂ ಅನಾರೋಗ್ಯವೇ ಎಂದು ತಿಳಿಯಬೇಕು.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post