ಗೌರಿಬಿದನೂರು: ತಾಲ್ಲೂಕಿನ ವಿದುರಾಶ್ವತ್ಥದಲ್ಲಿರುವ ಕೆ.ಜಿ.ಬಿ.ವಿ. ಶಾಲೆಯ ವಿದ್ಯಾರ್ಥಿಗಳಾದ ಎ. ಲಾವಣ್ಯ, ಆರ್. ಮೌನಿಕ, ವಿ.ಎ. ಅಶ್ವಿನಿ ಮತ್ತು ಎಸ್. ಶ್ವೇತ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ವತಿಯಿಂದ ತಿಳಿಸಿದ್ದಾರೆ.
ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಕೃಷ್ಣಮೂರ್ತಿ, ಶಾಲಾ ಹಂತದಲ್ಲಿ ಮಕ್ಕಳು ಮಾಡಿರುವ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು. ಇದು ಅವರ ಶೈಕ್ಷಣಿಕ ಪ್ರಗತಿಯ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕಾ ಹಂತದಿಂದಲೇ ಪಠ್ಯ ವಿಷಯಗಳ ಜೊತೆಯಲ್ಲಿ ಪಠ್ಯೇತರ ವಿಷಯಗಳು ಮತ್ತು ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಇಲಾಖೆಯ ದಾಳಪ್ಪ, ಕೆ.ಜಿ.ವಿ.ಬಿ. ಶಾಲೆಯ ಶಿಕ್ಷಕರಾದ ಶ್ರೀದೇವಿ, ಉಮಾ ಹಾಜರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post