ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆನೆಗೊಂದಿ: ಪದ್ಮನಾಭ ತೀರ್ಥರ ಆರಾಧನೆಯ ಮೊದಲ ಒಂದೂವರೆ ದಿನ ಪೂರ್ವರಾಧನೆ ಮತ್ತು ಮಧ್ಯರಾಧನೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನ ಗಡ್ಡೆಯಲ್ಲಿ ಭಾನುವಾರ, ಉತ್ತರಾಧಿ ಮಠದ ಪೀಠಾಧಿಪತಿಗಳಾದ ಶ್ರೀಶ್ರೀಸತ್ಯಾತ್ಮ ತೀರ್ಥರ ನೇತೃತ್ವದಲ್ಲಿ ಪೂರ್ವಾರಾಧನೆ ನಡೆಯಿತು.
ಅಭಿಷೇಕದ್ವಾದಶಿ ತಿಥಿಯಾದ ಕಾರಣ ನವವೃಂದವನದ ಮಧ್ಯೆ ಶ್ರೀ ವ್ಯಾಸತೀರ್ಥರು ಮತ್ತು ಶ್ರೀಅಂಜನೇಯ ದೇವರ ಮಂಟಪದಲ್ಲಿ ಬೆಳಿಗ್ಗೆ 6.00 ಗಂಟೆಯಿಂದ ಪ್ರಾರಂಭವಾದ ಕಾರ್ಯಕ್ರಮಗಳು ನಿರ್ಮಾಲ್ಯ ವಿಸರ್ಜನೆ, ಶ್ರೀಸತ್ಯಾತ್ಮ ತೀರ್ಥ ಶ್ರೀಗಳು ಸೀತಾ ದೇವಿ ಸಮೇತ ಶ್ರೀ ರಾಮ ದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು. ನಂತರ ಶ್ರೀ ಪದ್ಮನಾಭ ತೀರ್ಥರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಹಸ್ತೋದಕ ಸಮರ್ಪಣೆ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಕಳೆದ ವರುಷ ಜಮೀನಿನ ಮಾಲೀಕತ್ವ ವಿವಾದದ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ರಾಯರ ಮಠ ಹಾಗೂ ಉತ್ತರಾದಿ ಮಠದವರಿಗೆ ತಲಾ ಒಂದುವರೆ ದಿನದವರೆಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.
ನ್ಯಾಯಾಲಯದ ಆದೇಶದಂತೆ ನಿನ್ನೆಯ ದಿನ ಉತ್ತರಾಧಿ ಮಠದ ಸಂಸ್ಥಾನದ ಶ್ರೀಗಳ ಸಮೇತ ಶಿಷ್ಯರು ನವವೃಂದಾವನದಲ್ಲಿ ವಾಸ್ತವ್ಯ ಹೂಡಿ ಇಂದು ಬೆಳಿಗ್ಗೆ ಉತ್ತರಾಧಿ ಮಠದ ಶ್ರೀಸತ್ಯಾತ್ಮತೀರ್ಥರು ನೇತೃತ್ವದಲ್ಲಿ ಮತ್ತು ಅವರ ಶಿಷ್ಯ ವೃಂದದಿಂದ ಪೂರ್ವಾರಾಧನೆ ಕಾರ್ಯಕ್ರಮಗಳನ್ನು ನಾನಾ ಜಿಲ್ಲೆಗಳ ಭಕ್ತರ ಸಮುಖದಲ್ಲಿ ನೆರವೇರಿಸಿದರು.
ಒಗ್ಗೂಡಿ ಪೂಜೆ ಸಲ್ಲಿಸುವ ಕಾಲ ಬರಲಿ ನ್ಯಾಯಾಲಯಗಳು ಏನೇ ತೀರ್ಪು ನೀಡಲಿ ಅಥವಾ ಬಿಡಲಿ, ಧಾರ್ಮಿಕ ಚಟುವಟಿಕೆಗಳನ್ನು ಎಲ್ಲರೂ ಸೇರಿ ಮಾಡಿದರೆ ಮಾತ್ರ ಅದಕ್ಕೊಂದು ಅರ್ಥಗರ್ಭಿತ, ಭಕ್ತರ ಆಸೆಯಂತೆ ಎರಡು ಮಠಗಳ ಶ್ರೀಗಳು ಒಟ್ಟಿಗೆ ಸೇರಿಕೊಂಡು ಪೂಜೆ ಸಲ್ಲಿಸುವ ಕಾಲ ಬೇಗ ಬರಲಿ’ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಆಶಿಸುತ್ತದೆ.
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post