ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಅಕ್ಷಯ ತೃತೀಯದ ವಿಶೇಷ ದಿನದ ಹಿನ್ನೆಲೆಯಲ್ಲಿ ಸಿದ್ದರೂಢನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರಿಗೆ ಗಂಧ ಲೇಪನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇಂದು ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ ಅರ್ಚಕರು ರಾಯರ ಬೃಂದಾವನಕ್ಕೆ ಗಂಧ ಲೇಪನ ಮಾಡಿ ಸಾಂಪ್ರದಾಯಿಕ ಹಾಗೂ ಸರಳವಾಗಿ ಆಚರಿಸಿದರು.

ಪ್ರತೀವರ್ಷ ಅಕ್ಷಯ ತದಿಗೆಯ ದಿನ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಈ ಬಾರಿ ಲಾಕ್’ಡೌನ್’ನಿಂದಾಗಿ ಭಕ್ತಾದಿಗಳ ಅನುಪಸ್ಥಿತಿಯಲ್ಲಿ ರಾಯರ ವೃಂದಾವನಕ್ಕೆ ಗಂಧ ಲೇಪನದ ಅಲಂಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಪ್ರಮುಖರಾದ ಶೇಷಗಿರಿ ಆಚಾರ್, ಗೋಪಾಲಾಚಾರ್, ಶ್ರೀನಿವಾಸಾಚಾರ್ ಇದ್ದರು.
(ವರದಿ: ಕೆ.ಎಸ್. ಸುಧೀಂದ್ರ, ಭದ್ರಾವತಿ)
Get in Touch With Us info@kalpa.news Whatsapp: 9481252093
















