ಅವಾಗ ಮಾರ್ಕಂಡೇಯರಿಗೆ ಐದನೆಯ ವರುಷ ನಡೆಯುತ್ತಾ ಇತ್ತು.ಅಂಗಳದಲ್ಲಿ ಇರುವ ಕಲ್ಲುಗಳನ್ನು ಇಟ್ಟು ಕೊಂಡು ದೇವರ ಪೂಜೆ ಎಂದು ಮಾಡುತ್ತಾ ಆಟವಾಡುತ್ತಾ ಇದ್ದರು. ಆ ದಾರಿಯಲ್ಲಿ ಹೊರಟಿದ್ದ ಜ್ಞಾನಿಗಳು ಒಬ್ಬರು ನೋಡಿದರು. ಆ ಮಗುವನ್ನು ಮತ್ತು ವಯಸ್ಸು ನೋಡಿದರು. ಅವನ ಆಯುಷ್ಯ ಪ್ರಮಾಣದ ರೇಖೆಗಳು ಅವರ ಕಣ್ಣಿಗೆ ಕಂಡವು. ತಕ್ಷಣ ಆ ಬಾಲಕನ ತಂದೆಯಾದ ಮೃಕಂಡು ಮುನಿಗಳ ಆಶ್ರಮಕ್ಕೆ ಪ್ರವೇಶ ಮಾಡಿದರು. ಮೃಕಂಡು ಮುನಿಗಳ ಸತ್ಕಾರ ಸ್ವೀಕರಿಸಿ ಅವರಿಗೆ ಹೇಳುತ್ತಾರೆ. ಮೃಕಂಡು ಮುನಿಗಳೇ!! ಶೋಕ ಪಡಬೇಡಿ. ನಿಮ್ಮ ಮಗು ಅಲ್ಪಾವಧಿಯ ಆಯುಷ್ಯ ಉಳ್ಳವನು. ಆದರೆ ನಾನು ಹೇಳುವ ಮಾತು ಸುಳ್ಳು ಆಗುವದಿಲ್ಲ. ಬದುಕಿರುವವರೆಗು ಆ ಮಗುವಿನಿಂದ ಧರ್ಮ ಕಾರ್ಯ ಮಾಡಿಸಿ. ಅದೇ ಅವನಿಗೆ ರಕ್ಷಣೆ ಆಗುತ್ತದೆ ಅಂತ ಹೇಳಿ ಹೊರಟರು. ತಮ್ಮ ಮಗು ಅಲ್ಪಾಯುಷ್ಯ ಉಳ್ಳವನು ಎಂಬುದು ಮೃಕಂಡು ದಂಪತಿಗಳಿಗೆ ತಿಳಿದಿತ್ತು. ಅದೇ ಯೋಚನೆ ಯಲ್ಲಿ ಜೀವನ ಸಾಗಿತ್ತು.
ಜ್ಞಾನಿಗಳು ಬಂದು ನುಡಿದ ವಾಕ್ಯದ ಪ್ರಕಾರ ಅವನಿಗೆ ಉಪನಯನ ಮಾಡಿದರು. ನಂತರ ಒಂದು ಮಾತು ಹೇಳಿದರು. ಮಗು!! ಜ್ಞಾನಿಗಳು, ಭಗವಂತನ ಭಕ್ತರು ಯಾರೇ ಇರಲಿ, ಅವರ ಪಾದಕ್ಕೆ ಸಾಷ್ಟಾಂಗ ನಮಸ್ಕರಿಸಬೇಕು. ನಿತ್ಯ ಇದೊಂದು ಪಾಲಿಸು ಎಂದು ಉಪದೇಶ ಮಾಡಿದರು. ಬಾಲಕ ಮಾರ್ಕಂಡೇಯ ತಂದೆಯ ಮಾತಿನಂತೆ ಆಶ್ರಮಕ್ಕೆ ಬಂದ ಹರಿಭಕ್ತರಿಗೆ ಜ್ಞಾನಿಗಳು ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಳ್ಳುತ್ತಾ ಇದ್ದ. ಹಲವು ದಿನಗಳು ಕಳೆದಿದ್ದವು. ಸಪ್ತರ್ಷಿಗಳು ಅದೇ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದರು. *ಬಂದಿರುವ ಸಪ್ತರ್ಷಿಗಳ ಸಮೂಹಕ್ಕೆ ಬಾಲಕ ಮಾರ್ಕಂಡೇಯ ನಮಸ್ಕರಿಸಿದ ಅವನ *ತೇಜಸ್ಸು, ವಿನಯ, ಗುರು ಹಿರಿಯರಲ್ಲಿ ತೋರಿದ ಭಕ್ತಿಗೆ ಋಷಿಗಳು ಮನಸೋತು “ಆಯುಷ್ಮಾನ್ ಭವ” ಎಂದು ಆಶೀರ್ವಾದ ಮಾಡಿದರು. ನಂತರ ಬಾಲಕನ ಮುಖವನ್ನು ನೋಡಿದರು. ಇವನು ಅಲ್ಪಾಯು ಎಂದು ತಿಳಿಯಿತು.ಬಹಳ ಮರುಗಿದರು. ತಮ್ಮ ಮಾತು ಅಸತ್ಯವಾಗಬಾರದೆಂದು ಆ ಬಾಲಕನನ್ನು ಕರೆದುಕೊಂಡು ಬ್ರಹ್ಮ ದೇವರ ಬಳಿ ಹೋದರು. ಪುಟ್ಟ ಬಾಲಕ ಮಾರ್ಕಂಡೇಯ, ಉನ್ನತವಾದ ಆಸನದಲ್ಲಿ ಪತ್ನಿ ಸಮೇತರಾಗಿ ಆಸೀನರಾಗಿದ್ದ ಬ್ರಹ್ಮ ದೇವರ ಪಾದಗಳಿಗೆ ಶಿರ ಸಾಷ್ಟಾಂಗ ನಮಸ್ಕಾರ ಮಾಡಿದ… ಬ್ರಹ್ಮ ದೇವರು ಕೂಡ “ಚಿರಾಯುವಾಗು” ಎಂದು ಆಶೀರ್ವಾದ ಮಾಡಿದರು.
ಇವಾಗ ಸಪ್ತ ಋಷಿಗಳಿಗೆ ಸಂತಸವಾಯಿತು. ಇನ್ನೂ ಅವನನ್ನು ಬದುಕಿಸುವ ಜವಾಬ್ದಾರಿ ಬ್ರಹ್ಮ ದೇವರದ್ದು ಅಂತ.ನಮ್ಮ ಮಾತು ಹಾಗು ಬ್ರಹ್ಮ ದೇವರ ಮಾತು ಹುಸಿಯಾಗಲು ಸಾಧ್ಯವಿಲ್ಲ ಎಂದು ತಿಳಿದರು. ಬ್ರಹ್ಮ ದೇವರು ಋಷಿಗಳು ಬಂದ ಕಾರಣ ನಡೆದ ಘಟನೆ ತಿಳಿದು ಆ ಬಾಲಕನಿಗೆ ಧೀರ್ಘವಾದ ಆಯುಷ್ಯ ನೀಡಿದರು. ಶ್ರೀ ಹರಿಯ ಸೇವೆಯನ್ನು ಮಾಡುವ ಸೌಭಾಗ್ಯ ನೀಡಿದರು… ಈ ಮೇಲಿನ ಪ್ರಸಂಗ ಪದ್ಮ ಪುರಾಣದಲ್ಲಿ ಬರುತ್ತದೆ… ಇನ್ನೂ ಹೆಚ್ಚಿನ ಮಾಹಿತಿಗಾಗಿ ಬಲ್ಲವರಿಂದ ಕೇಳಬಹುದು. ಮುಂದೆ ಆ ಬಾಲಕನಿಗೆ ಅಪ ಮೃತ್ಯು ಬಂದಾಗ ಅದು ಪರಿಹಾರವಾಗಿ ಅವರು ಚಿರಂಜೀವಿಗಳಾಗುತ್ತಾರೆ..
ಹಿರಿಯರಿಗೆ ಜ್ಞಾನಿಗಳಿಗೆ, ಭಗವಂತನ ಭಕ್ತರು ಯಾರು ಇದ್ದಾರೋ ಅವರಿಗೆ ಶ್ರದ್ಧೆ, ಭಕ್ತಿ ಇಂದ ನಮಸ್ಕರಿಸಿ ಮೃಕಂಡು ಮುನಿಗಳ ಪುತ್ರ ಮಾರ್ಕಂಡೇಯ ದೀರ್ಘ ಆಯುಷ್ಯ ಉಳ್ಳವರು ಆದರು… ಇದರಂತೆ ತಂದೆ ತಾಯಿಗಳು ಸಹ ಮಕ್ಕಳಿಗೆ ಈ ರೀತಿಯಾದ ಶಿಕ್ಷಣ ನೀಡಿದರೆ ಅವರ ಮಕ್ಕಳು ಧಾರ್ಮಿಕರಾಗುತ್ತಾರೆ. ಬರುವ ಆಪತ್ತು, ವಿಪತ್ತುಗಳು, ನಿವಾರಣೆ ಆಗುತ್ತದೆ… ಹಾಗಾಗಿ ಇಂದಿನಿಂದ ಆದರು ಹಿರಿಯರಿಗೆ, ಜ್ಞಾನಿಗಳ ಮತ್ತು ಭಗವಂತನ ಭಕ್ತರು ಯಾರು ಇದ್ದಾರೆ ಅವರಿಗೆ ಭಕ್ತಿ ಶ್ರದ್ಧೆಯಿಂದ ಶಿರಸಾಷ್ಟಾಂಗ ನಮಸ್ಕಾರ ಮಾಡೋಣ.. ನಮಗೆ ಬರುವ ಆಪತ್ತು ವಿಪತ್ತು ಗಳನ್ನು ಕಳೆದುಕೊಳ್ಳುವ ಪ್ರಯತ್ನ ಮಾಡೋಣ.
||ನೀನೇ ಗತಿ ಕೃಷ್ಣ||
ಕಲಿ ಮತ್ತು ಕಲಿಯ ಪರಿವಾರದವರ ವ್ಯಾಪಾರ ವಿಧಾನ ಬಹಳ ವಿಚಿತ್ರ.ನಮಗೆ ಅದು ಅರ್ಥ ವಾಗುವದಿಲ್ಲ.ಅವರು ನೇರವಾಗಿ ನಮ್ಮ ಮೇಲೆ ಆಕ್ರಮಣ ಮಾಡುವದಿಲ್ಲ. ಎಲ್ಲೋ ಯಾವಾಗಲೂ ಒಂದು ಸಾರಿ ಇರಬಹುದು.ಇವರು ಪ್ರತ್ಯಕ್ಷವಾಗಿ ನಮ್ಮ ಮೇಲೆ ಆಕ್ರಮಣ ಮಾಡದೇ indirect ವಾಗಿ ಆಕ್ರಮಣ ಮಾಡಿ ಚೂರು ಸಾಧನೆ ಮಾಡಿಕೊಳ್ಳುವ ಅಂತ ಅಂದುಕೊಂಡ ಸಮಯದಲ್ಲಿ ಅದಕ್ಕೆ ಭಂಗವನ್ನು ವಿಘ್ನವನ್ನು ತರುತ್ತಾರೆ.ಇದು ಹೇಗೆ ಎಂದರೆ.. ನಾವು ಯಾರನ್ನು ಜಾಸ್ತಿ ಇಷ್ಟ ಮಾಡುತ್ತೇವೆಯೋ ಅವರು ಅಂದರೆ ತಂದೆ,ತಾಯಿ,ಬಂಧು ಬಳಗ,ಹೆಂಡತಿ, ಮಕ್ಕಳು, ಮಿತ್ರರು, ಹೀಗೆ ಅವರ ಮುಖಾಂತರ ನಮ್ಮ ಸಾಧನವನ್ನು ಭಂಗ ಪಡಿಸುತ್ತಾರೆ.
ಉದಾಹರಣೆಗೆ ಏಕಾದಶಿ, ಅಥವಾ ಶ್ರೀ ಕೃಷ್ಣ ಜನ್ಮ ಅಷ್ಟಮಿ ಹೀಗೆ ಇಂತಹ ದಿನಗಳು ಇದ್ದಾಗ ನಮಗೆ ಉಪವಾಸ ಮಾಡಬೇಕು ಎಂದು ಅಂದುಕೊಂಡಿರುತ್ತೇವೆ. ಆದರೆ ಮನೆಯಲ್ಲಿ. ಇವತ್ತು ಒಂದು ದಿನ ಏನಾದರು ತೆಗೆದುಕೋ.. ಫಲಹಾರ ಮಾಡು, ಅಂತ ನಿಷಿದ್ಧ ವಾದವುದನ್ನು ಅಂದು ಹೇಳುತ್ತಾರೆ. ಹಿರಿಯರ ಮಾತು ಕೇಳಬೇಕು ಅಥವಾ ಬೇಡವೆಂದು ಗೊಂದಲಕ್ಕೆ ಉಂಟು ಮಾಡಿಕೊಂಡು ಅವರು ಹೇಳಿದ ಪ್ರಕಾರ ಸಾಗುತ್ತೇವೆ.
ಅಥವಾ ಎಲ್ಲಿ ಯಾದರು ಊರಿಗೆ ಹೋಗಬೇಕು.. ಈ ದಿನ ಸಂಧ್ಯಾವಂದನೆ, ದೇವರ ಪೂಜೆ ಅಂತ ಕುಳಿತು ಸಮಯ ವ್ಯರ್ಥ ಮಾಡಿ ನಮಗೆ ತಡ ಮಾಡಬೇಡ. ಒಂದು ದಿನ ಬಿಟ್ಟರೆ ಏನು ಆಗುವುದಿಲ್ಲ ಅಥವಾ ಎಲ್ಲಿ ಯಾದರು ಹೊರಗಡೆ ಹೋದಾಗ ಇಂದು ಇಂದು ದಿನ ಹೊರಗೆ ತಿನ್ನಲು ಹೇಳುತ್ತಾರೆ.. ಹೀಗೆ ಇನ್ನೂ ಅನೇಕ ಪ್ರಸಂಗಗಳಲ್ಲಿ ಯಾವುದು ಮಾಡಬಾರದು ಅದನ್ನು ಮಾಡಲು ಹೇಳುತ್ತಾರೆ. ತಂದೆ ತಾಯಿ, ಹಿರಿಯರ ಮಾತು ಕೇಳಬೇಕು. ನಿಜ.. ಕೇಳದಿದ್ದರೆ ಪಾಪ ಬರುತ್ತದೆ ಅಂತ ಶಾಸ್ತ್ರ ಹೇಳುತ್ತದೆ. ಆದರೆ ಯಾವ ಸಂಧರ್ಭದಲ್ಲಿ ಅವರ ಮಾತನ್ನು ಪಾಲಿಸಬೇಕು ಅಂತ ಪರಮಭಾಗವತರಾದ ಶ್ರೀ ಪ್ರಹ್ಲಾದ ರಾಜರು ಹೇಳಿದ್ದು ನಮಗೆ ಸದಾ ನೆನಪಿಗೆ ಬರಬೇಕು. ಭಗವಂತನ ಮುಂದೆ ಯಾರು ದೊಡ್ಡವರಲ್ಲ. ಎಲ್ಲಾರು ಸಣ್ಣವರೇ.. ಅವರು ತಂದೆ, ತಾಯಿ,ಗುರುಗಳು ಬಂಧು, ಬಳಗ, ಸ್ನೇಹಿತ ವರ್ಗ.. ಹೀಗೆ.. ಮತ್ತು ನಿಷಿದ್ಧ ವಾದ ಕರ್ಮಗಳನ್ನು ಆಚರಣೆ ಮಾಡು ಅಂತ ಇವರು ಗಳು ಏನಾದರು ಹೇಳಿದರೆ.. ಉದಾಹರಣೆಗೆ ಏಕಾದಶಿ, ದೇವರ ಪೂಜೆ, ಸಂಧ್ಯಾವಂದನೆ ಬಿಡು ಅಂತ ಹೇಳಿದರೆ,ಸತ್ಕರ್ಮಗಳನ್ನು ಮಾಡಲು ಹೊರಟಾಗ ಬೇಡವೆಂದು ಹೇಳಿದರೆಅವರ ಮಾತನ್ನು ಖಂಡಿತವಾಗಿ ಕೇಳಬಾರದು. ಯಾವುದು ಶಾಸ್ತ್ರವಿಹಿತವೋ, ಯಾವುದನ್ನೂ ಭಗವಂತನು ವೇದ ಗ್ರಂಥಗಳಲ್ಲಿ,ಭಾಗವತಾದಿ ಪುರಾಣದಲ್ಲಿ ಹೇಳಿದ್ದಾನೆ ಅದನ್ನು ಖಂಡಿತವಾಗಿ ಆಚರಣೆ ಮಾಡಲೇಬೇಕು.
ಇದನ್ನು ಮಾಡದೇ ಹೋದರೆ ಭಗವಂತನ ವಾಣಿಗೆ ವಿರುದ್ಧ ಹೋದ ಹಾಗೇ.ಮತ್ತು ಅವರ ಒಳಗಡೆ ಕಲಿಯ ಮತ್ತು ಅವನ ಸ್ನೇಹಿತ ರ ಪ್ರವೇಶ ವಾಗಿ ನಮಗೆ ಸತ್ಕರ್ಮಗಳ ಆಚರಣೆ ಮಾಡಲು ಬೇಡವೆಂದು ಹೇಳಿಸುವರು. ಹಾಗಾಗಿ ಕಲಿಯ ಮಾತು ಕೇಳದೆ ಭಗವಂತನು ಏನು ಹೇಳಿದ್ದಾನೆ ಅದನ್ನು ಆಚರಣೆ ಮಾಡಿ, ಕಿಂಚಿತ್ತೂ ಸಾಧನೆ ಮಾಡಿಕೊಳ್ಳುವ.
Discussion about this post