ಭದ್ರಾವತಿ: ವಿಶ್ವೇಶ್ವರಾಯ ಕಬ್ಬಿಣ ಉಕ್ಕಿನ ಕಾರ್ಖಾನೆಯ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಕೆ.ಎಲ್. ಶ್ರೀನಿವಾಸ್ ರಾವ್ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಎ.ವಿ. ಕಮಲಾಕರ್ ಮುಂಬಡ್ತಿ ಹೊಂದಿರುವ ಕಾರಣ ಉಕ್ಕು ಪ್ರಾಧಿಕಾರ ಕೆ.ಎಲ್. ಶ್ರೀನಿವಾಸ್ ರಾವ್‍ರವರನ್ನು ನಿಯೋಜನೆಗೊಲಿಸಿದೆ.
ಇವರು ಒಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಮೈನಿಂಗ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಜೊತೆಗೆ ಡೈರೆಕ್ಟೊರೇಟ್ ಜನರಲ್ ಆಫ್ ಮೈನ್ಸ್ ಸೇಫ್ಟಿಯವರಿಂದ ಫಸ್ಟ್ ಕ್ಲಾಸ್ ಮೈನ್ ಮ್ಯಾನೇಜರ್ ಸರ್ಟಿಫಿಕೇಟ್ ಪಡೆದಿರುತ್ತಾರೆ. ತಮ್ಮ ವೃತ್ತಿಯನ್ನು ಸಿಂಗರಿನಿ ಕೊಲ್ಲರಿಸ್ ಕಂಪನಿಯಲ್ಲಿ ಆರಂಭಿಸಿ, 2010ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರ ನಿಯಮಿತವನ್ನು ಮಹಾಪ್ರಭಂದಕರಾಗಿ ಸೇರಿ 2018 ನವೆಂಬರ್ 21 ರಂದು ಕಚ್ಚಾಸಾಮಗ್ರಿ ವಿಭಾಗದ ಕಾರ್ಯಪಾಲಕ ನಿರ್ದೇಶಕರಾಗಿರುತ್ತಾರೆ.
ಈ ಹಿಂದೆ ಧನ್‍ಭಾದ್‍ನ ಉಕ್ಕು ಪ್ರಾಧಿಕಾರದ ಕೊಲ್ಲರಿಸ್ ವಿಭಾಗದಲ್ಲಿ ಪ್ರ್ರಭಾರಿ ಮಹಾಪ್ರಭಂದಕರಾಗಿ ಕಾರ್ಯನಿರ್ವಹಿಸಿದ್ದ ಇವರು ಯು.ಕೆ. ಆಸ್ಟ್ರೇಲಿಯಾ, ಫ್ರಾನ್ಸ್ ದೇಶಗಳಲ್ಲಿ ನಾನಾ ತರಬೇತಿಯನ್ನು ಪಡೆದಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post