No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Thursday, February 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಹರಿದಾಸ ಪರಂಪರೆಗೆ ಜ್ಯೋತಿ ರೂಪವಾಗಿರುವ ಶ್ರೀಪಾದರಾಜರು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 17, 2022
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
sripadararaja-is-the-jyoti-form-of-haridasa

sripadararaja-is-the-jyoti-form-of-haridasa

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಬಹಳ ಮುಖ್ಯವಾದ ಹೆಸರು ಶ್ರೀಪಾದರಾಜರು ಕನ್ನಡದಲ್ಲಿ ಹರಿದಾಸ ಸಾಹಿತ್ಯ ರಚನೆಯ ಆದ್ಯ ಪ್ರವರ್ತಕರೂ ಅವರೇ ಎಂದರೆ ತಪ್ಪಾಗಲಾರದು. ಅವರಿಗಿಂತ ಪೂರ್ವದಲ್ಲಿ ಹರಿದಾಸ ಸಾಹಿತ್ಯ ರಚನೆಯಾಗಿತ್ತೇ ಎಂಬುದರ ಬಗೆಗೆ ಚರ್ಚೆಗಳಿದ್ದು, ಅದಿನ್ನೂ ನಿಲುಗಡೆಗೆ ಬಂದಿಲ್ಲದಿರುವುದರಿಂದ ಶ್ರೀಪಾದರಾಜರೇ ದಾಸ ಸಾಹಿತ್ಯದ ಪ್ರವರ್ತಕರೆಂದು ಭಾವಿಸಲು ಅಡ್ಡಿಯಿಲ್ಲ.

ದಾಸ ಸಾಹಿತ್ಯವು ಸಾಹಿತ್ಯ ಪ್ರಕಾರದ ತವನಿಧಿಗಳಲ್ಲಿ ಒಂದಾಗಿದೆ.ಹರಿದಾಸ ಸಾಹಿತ್ಯ ಭಕ್ತಿಪಂಥ ಪರಂಪರೆಯಾಗಿ ಮೂಡಿ ಬಂದಿದ್ದು, ಶ್ರೀಪಾದರಾಜರ ಕಾಲದಲ್ಲಿ ಭಾಗವತ ಧರ್ಮದ ಪ್ರಚಾರದಿಂದಲೇ ಜನಸಾಮನ್ಯರು ಸಂಸ್ಕಾರ ಹಾಗೂ ಸಾಧ್ಯವೆಂದರಿತವರು ಶ್ರೀಪಾದರಾಜರು. ಶ್ರೀಪಾದರಾಜರು ತಮ್ಮ ಹರಿದಾಸ ಕೃತಿಗಳಲ್ಲಿ ಅತ್ಯಂತ ರಮಣೀಯವಾಗಿ ಮನಮುಟ್ಟುವ ರೀತಿಯಲ್ಲಿ ಆಧ್ಯಾತ್ಮಿಕತೆಯ ತಿರುಳನ್ನು ವ್ಯಕ್ತಪಡಿಸಿದ್ದಾರೆ. ದಾಸ ಸಾಹಿತ್ಯ ಸಂಗೀತ ಮಾಧ್ಯಮದ ಮೂಲಕ ಸಾಮಾನ್ಯ ಜನರ ಬದುಕನ್ನು ಹಸನುಗೊಳಿಸಿತು. ಲಕ್ಷಾಂತರ ಜನಕ್ಕೆ ಸಂಸ್ಕಾರ ನೀಡಿತು. ಹೃದಯಸ್ಫರ್ಶಿ ಸಾಹಿತ್ಯವಾಯಿತು. ಸೈದ್ಧಾಂತಿಕವಾಗಿ ತತ್ವನಿರೂಪಣೆಯನ್ನು ಸಮರ್ಥವಾಗಿ ಮಾಡಿತು. ಬುದ್ದಿ ಮತ್ತು ಭಾವನೆಗಳೆರಡಕ್ಕೂ ಕ್ರಿಯಾತ್ಮಕವಾಗಿ ಪ್ರಚೋದನೆ ನೀಡಿತು.
ದಾಸ ಸಾಹಿತ್ಯ ವಿಶ್ವ ಸಾಹಿತ್ಯ ಕಂಡ ವಿನೂತನ ಬಗೆಯ ಸಾಹಿತ್ಯ. ಶೈಲಿಯಲ್ಲಿ ಸಂಗೀತ ಮಾಧ್ಯಮದ ಮೂಲಕ ತತ್ವ ಪ್ರಸಾರಕ್ಕೆ ತೊಡಗಿದ್ದು ಇದೆ. ವೈಶಿಷ್ಟ್ಯ. ಸಂಗೀತದಿಂದಾಗಿ ಕರ್ಣರಮಣೀಯವಾಗಿ, ಸಾಹಿತ್ಯದಿಂದಾಗಿ ಹೃದಯಸ್ಫರ್ಶಿಯಾಗಿ ತತ್ವ ಶ್ರೀಮಂತಿಕೆಯಿಂದಾಗಿ ಬುದ್ಧಿ ವಿಕಸನಕ್ಕೆ ಕಾರಣವಾಗುವ ಅಪೂರ್ವತೆ ಇದರದು. ಆಧ್ಯಾತ್ಮವು ಜೀವನದ ಉಸಿರು ಎಂಬ ತಾತ್ವಿಕ ಮಹತ್ವನ್ನು ಪಾಮರ ಜನರಿಗೂ ತಿಳಿಸಿಕೊಟ್ಟಿದ್ದು ಇದರ ಸಾಧನೆ.
ನರಹರಿತೀರ್ಥರು ಹರಿದಾಸ ಪರಂಪರೆಯನ್ನು ಪ್ರಾರಂಭಿಸಿದ ನಂತರ ಅದನ್ನು ಒಂದು ನಿರ್ದಿಷ್ಟವಾದ ರೂಪಕ್ಕೆ ತಂದು ಭದ್ರ ಬುನಾದಿಯ್ನು ಹಾಕಿಕೊಟ್ಟು ಬೆಳೆಸಿದವರು ಶ್ರೀಪಾದರಾಜರು. ನರಹರಿ ತೀರ್ಥರು ಕಿಡಿಯಾದರೆ ಶ್ರೀಪಾದರಾಜರು ಜ್ಯೋತಿ.

ಶ್ರೀಪಾದರಾಜರು ಕನ್ನಡ ಸಾಹಿತ್ಯಕ್ಕೆ ಭಗವದ್ಭಕ್ತರಿಗೆ ದಾಸಕೂಟಸ್ಥರಿಗೆ ಮಾಡಿರುವ ಉಪಕರ ಬಹುಸ್ಮರಣೀಯವಾದುದು. ಸಂಸ್ಕೃತ ಮಂತ್ರಮಾತುಗಳಲ್ಲಿಯ ಮಂಗಳಾತ್ಮಕ ಪಾವಿತ್ರವನ್ನು ಕನ್ನಡಕ್ಕೆ ತಂದುಕೊಟ್ಟ ಕೀರ್ತಿ ಶ್ರೀಪಾದರಾಜರದು. ದಾಸಸಾಹಿತ್ಯವೆಂಬ ಹೊಸ ಕಲ್ಪನೆಯೆಂಬ ಅವರ ಬ್ರಹ್ಮಚೈತನ್ಯದಿಂದ ಪಲ್ಲವಿಸಿ ಕನ್ನಡ ಭಾಷೆ ಹಾಗೂ ಸಾಹಿತ್ಯಗಳಿಗೆ ಹೊಸ ಆಯಾಮವನ್ನು ಮೂಡಿಸಿತು. ತಮ್ಮ ಸಮರ್ಥ ವಾಗ್ವೈಖರಿಯಿಂದಾಗಿ ಕನ್ನಡದಲ್ಲಿ ಹೊಸದೊಂದು ದಾಸ್ಯಭಾವದ ಮಧುರಶೈಲಿಗೆ ಪ್ರವರ್ತಕರಾದರು ಶ್ರೀಪಾದರಾಜರು. ಅವರಿಂದ ಸ್ಫೂರ್ತಿಗೊಂಡ ಅನೇಕ ಜನ ಯತಿಗಳು, ವೈದಿಕರು, ಗೃಹಸ್ಥರು, ಕನ್ನಡದಲ್ಲಿ ಧೈರ್ಯವಾಗಿ ಕೃತಿಗಳನ್ನು ರಚಿಸತೊಡಗಿದರು. ತೊರವೆ ರಾಮಾಯಣ, ನಾರಣಪ್ಪನ ಭಾರತಗಳು ಶ್ರೀಪಾದರಾಜರ ನಂತರವೇ ಬಂದಿರುವುದು ಈ ಹಿನ್ನೆಲೆಗೆ ನಿದರ್ಶನ. ಮುದುಡಿ ಮಲಗಿದ್ದ ಭಾಗವತ ಧರ್ಮ ಮೈಚಳಿಬಿಟ್ಟ ಎದ್ದು, ಜಾಗೃತವಾಗಿ ಧೃಢವಾಗಿ ನಡೆಯಲು ಪ್ರಾರಂಭವಾಯಿತು.

ತಮ್ಮ ಕಾಲದಲ್ಲಿ ಸಂಸ್ಕೃತ ವಿದ್ಯೆಯು ಉನ್ನತ ಮಟ್ಟದಲ್ಲಿದ್ದರೂ ಅದು ಭಕ್ತಿ ಪ್ರಚೋದನೆಗೆ ಹೆಚ್ಚು ತೀವ್ರವಾಗಿ ಪ್ರಯೋಜನವಾಗುತ್ತಿಲ್ಲವೆಂಬುದನ್ನು ಮನಗಂಡ ಶ್ರೀಪಾದರಾಜರು, ದೇಶಕಾಲೋಚಿತವಾಗಿ ವಿಜಯನಗರ ಸಾಮ್ರಾಜ್ಯದಲ್ಲಿ ಸಾಮಾನ್ಯರಲ್ಲೂ ಹಿಂದೂ ಸಂಸ್ಕೃತಿ, ಸಂಪ್ರದಾಯ ಪರಂಪರೆಗಳ ಬಗ್ಗೆ ಸುಲಭವಾಗಿ ತಿಳಿಸಿ ಸಂಘಟನೆಯನ್ನು ಪ್ರಚೋದಿಸಲು ದಾಸಪಂಥವನ್ನು ಉದ್ಘಾಟಿಸಿದರು. ಸಕಲ ತತ್ವ ವಿಷಯಗಳನ್ನೂ ಸಂಗೀತ ಬದ್ಧವಾಗಿ ಕನ್ನಡದಂತಹ ಲಲಿತಭಾಷೆಯಲ್ಲಿ ಜನರಿಗೆ ಕೊಟ್ಟು ಶ್ರೀಪಾದರಾಜರು ಈ ಮಾರ್ಗದಲ್ಲಿ ತಾವೇ ಮೊದಲು ಕನ್ನಡದಲ್ಲಿ ದೇವರ ನಾಮಗಳನ್ನು ಉಗಾಭೋಗಗಳನ್ನು, ಸುಳಾದಿಗಳನ್ನು ರಚನೆಮಾಡಿ ಗಂಭೀರವಾದ ಗಂಧರ್ವ ಕಂಠದಿಂದ ದೇವರೆದುರು ಗಾನಮಾಡಿ ತೋರಿಸಿದರು. ಸಂಗೀತ ಸಾಹಿತ್ಯಗಳ ಅಮೋಘ ಮೇಳವಾದ ಈ ಮಾರ್ಗ ದಿನೇ ದಿನೇ ಹೆಚ್ಚು ಜನರನ್ನು ಆಕರ್ಷಿಸಲಾರಂಭಿಸಿತು. ಶ್ರೀಪಾದರಾಜರಿಂದ ಬಂದ ಪ್ರತಿ ಶಬ್ದವೂ ಬೀಜಾಕ್ಷರಾಭಿಮಾನಿ ದೇವತೆಗಳ ದಿವ್ಯಸುಂದರ ನರ್ತನವಾದುವು.

ನಾರದ ಭಕ್ತಿಸೂತ್ರದ ಮೂಲಭೂತ ಆಸಕ್ತಿ ರೂಪಗಳಾದ ಗುಣಮಹಾತ್ಮಾಸಕ್ತಿ , ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸ್ಮರಣಾಸಕ್ತಿ, ಸಖ್ಯಾಸಕ್ತಿ, ಕಾಂತಾಸಕ್ತಿ, ವಾತ್ಸಲ್ಯಾಸಕ್ತಿ, ಆತ್ಮನಿವೇದನಾಸಕ್ತಿ, ತನ್ಮಯಾಸಕ್ತಿ, ವಿರಹಾಸಕ್ತಿಗಳೆಂಬ ಏಕಾದಶಾ ವಿಧ ಭಕ್ತಿಯಾಸಕ್ತಿಗಳನ್ನು ಮುಂದೆಂದಿಗೂ ಹರಿದಾಸ ಸಾಹಿತ್ಯದಲ್ಲಿ ನಿರಂತರ ಪ್ರವಹಿಸುವಂತೆ ಪ್ರಭಾಸಪೂರ್ಣವಾಗಿ ತಮ್ಮ ಕಾವ್ಯಗಳಲ್ಲಿ ಬಳಕೆ ಬಗೆ ತಂದು ಶತಮಾನಗಳ ಪ್ರೇರಕ ಶಕ್ತಿಯಾದರು. ತಮಿಳುನಾಡಿನ ಆಳ್ವಾರುಗಳು ಮಧುರಭಕ್ತಿಯನ್ನು ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಅತ್ಯಂತ ದಟ್ಟವಾಗಿ, ಅನನ್ಯವಾಗಿ ತಮ್ಮ ಕೀರ್ತನೆಗಳಲ್ಲಿ ಒಡಮೂಡಿಸಿದವರೆಂದರೆ ಶ್ರೀಪಾದರಾಜರು.

ಶ್ರೀಪಾದರಾಜರು ಅಂತರಂಗದ ಆತ್ಮಶೋಧನೆಗೆ ಹೆಚ್ಚು ಗಮನವಿತ್ತು ಆಡಂಬರ ಬೂಟಾಟಿಕೆಗಳನ್ನು ಖಂಡಿಸಿದರು. ಮುಖವ ತೊಳೆದು ನಾಮ ಬಳಕೊಂಡೆನೆಲ್ಲದೆ, ಸುಖತೀರ್ಥ ಶಾಸ್ತ್ರವನೋದಿದೆನೋ, ಮುಖಶೃಂಗಾರಕ್ಕೆ ಮನಸೋತನೆಲ್ಲೆ ಭಕುತಿ ರಸದಲ್ಲಿ ಮುಳುಗಿದೆನೇನಯ್ಯ ಎಂದು ಆಚಾರ್ಯ ಶಾಸ್ತ್ರಪಾರಾಯಣದ ಅಗತ್ಯಗಳನ್ನು ಒತ್ತಿ ಹೇಳಿದರು.

ಭಕ್ತಿಬೇಕು ವಿರಕ್ತಿ ಬೇಕು ಕೃತಿಯಲ್ಲಿ ಸಂಗದ ಬಗ್ಗೆ ಪ್ರಸ್ತಾಪಿಸುತ್ತ ಸುಸಂಗ ಹಿಡಯಲೇಬೇಕು ದುಸಂಗ ಬಿಡಬೇಕು. ರಂಗ ವಿಠಲನ್ನ ಬಿಡದೇ ನೆರನಂಬಿರಬೇಕು ಎನ್ನುತ್ತಾರೆ. ಸಂಗ ಸಹವಾಸಗಳ ಬಗ್ಗೆ ಮೇಲಿಂದ ಮೇಲೆ ಪ್ರಸ್ತಾಪಿಸುವ ಶ್ರೀಪಾದರಾಜರು ವ್ಯಕ್ತಿತ್ವ ನಿರ್ಮಾಣ ವಿಕಸನಗಳಲ್ಲಿ ಸಂಗದ ಪರಿಣಾಮ ಪ್ರಮುಖ ಪಾತ್ರ ವಹಿಸುವುದನ್ನು ಸೂಚಿಸಿರುತ್ತಾರೆ.

ಉತ್ತಮರ ಸಂಗ ಎನಗಿತ್ತು ಸಲಹೋ ಕೃತಿಯಲ್ಲಿ ತಿರುತಿರುಗಿ ಪಟ್ಟಲೊ ಎನ್ನುತ್ತಾ ಮರುಜನ್ಮವಿಲ್ಲದಂತಾಗಲೂ ಉತ್ತಮರ ಸಂಗಬೇಕು. ಅದೇ ಕುಜನರ ಸಂಗ ಹೀನ ಜನರೊಳಗಾಟ ಶ್ವಾನಾದಿಗಳ ಕೂಟದಂತೆ ಎನ್ನುತ್ತಾರೆ. ಮುಕ್ತಿ ಪ್ರದಾಯಕ ಶಕ್ತಿಯನ್ನು ಉತ್ತಮರ ಸಂಗ ಹೊಂದಿದೆ ಎಂಬ ಮಾತು ಪರಿಣಾಮಕಾರಿಯಾಗಿದೆ. ದುರ್ಗಂಧದವರೊಂದಿಗಿನ ಸ್ನೇಹಕ್ಕಿಂತ ಸುಗಂಧದವರೊಂದಿಗೆ ಗುದ್ದಾಟ ಲೇಸು ಎಂಬ ಮಾತಿದೆ. ವಾಸುದೇವನೇ ನಿನ್ನ ದಾಸರ ದಾಸರ ದಾಸರ ದಾಸ್ಯವ ಕೊಡು ಸಾಕು ಎಂಬ ಸಾಲುಗಳು ಮಾರ್ಮಿಕವಾಗಿದೆ. ಶ್ರೀಶನ ದಾಸರ ದಾಸರ ದಾಸರ ದಾಸ್ಯವೇ ನಿಮ್ಮನ್ನು ಉದ್ದರಿಸಬಲ್ಲದು. ಇತರೆ ವಿಷಯಗಳಿಗೆರಗಿಸದೆ ಮನಕೆ ನಿನ್ನ ಕಥಾಮೃತವ ಕೊಡು ಸಾಕೆಂದರೆ ಎಂದು ಭಿನ್ನವಿಸಿಕೊಂಡಿದ್ದಾರೆ. ಇಂದ್ರಿಯಗಳೆಲ್ಲ ನಿನ್ನನ್ನೇ ಆರಾಧಿಸುವಂತೆ ಮಾಡು. ಅನ್ಯದುಷ್ಟಮಾರ್ಗಗಳ ಕಡೆಗೆ ಮನಚಲಿಸದಂತೆ ಮಾಡು ಎಂಬ ಪ್ರಾರ್ಥನೆ ಗಮನಾರ್ಹವಾಗಿದೆ.
ಏರುದಂಡಿಗೆ ನೂರಾಳು ಮಂದಿಯು ಮೂರು ದಿನದ ಭಾಗ್ಯ ಝಣ ಝಣವು ಎಂಬ ಕಾಳ ಬೆಳದಿಂಗಳ ಸಂಸಾರ ಎಂಬ ಕೃತಿಯಲ್ಲಿ ಸಾಲು ಬದುಕಿನಂತೆ ಬದುಕಿನಲ್ಲಿನ ಸಿರಿತನವೂ ನಶ್ವರ. ಆ ನಶ್ವರ ಭಾಗ್ಯವ ನಂಬಿ ಶಾಶ್ವತ ಜನರ ಕಳೆದುಕೊಳ್ಳದಿರಲು ಸೂಚಿಸುತ್ತಾರೆ.

ಶ್ರೀಪಾದರಾಜರು ಭಕ್ತ ಮಂದಾರರೂ, ಹರಿಪಾದಾಂಬುಜಭೃಂಗರೂ, ಸಿರಿಕೃಷ್ಣದಿವ್ಯಪಾದಜ್ಯ ಚಿಂತಾಲೋಲರು ಆಗಿದ್ದು, ಆಗ ತಾನೇ ಅರಳತೊಡಗಿದ್ದ ಹರಿದಾಸ ಪರಂಪರೆಯ ಹರಿಕಾರರೂ ಆಗಿದ್ದು, ಶರಣಕೀರ್ತಿತರಂಗರೂ, ಶರಣಜನಸುರಧೇನುಗಳೂ ಆಗಿದ್ದರೆಂದು ಶ್ರೀ ವ್ಯಾಸರಾಜರು ಕೀರ್ತಿಸಿದ್ದಾರೆ.
ಭಗವಂತನ ಕೃಪೆಯ ರಹಸ್ಯವನ್ನು ಚೆನ್ನಾಗಿ ಅರಿತ ಶ್ರೀಪಾದರಾಜರು, ಇಡಿ ಬದುಕನ್ನು ಪರಮಾತ್ಮನ ಕೃಪೆಗೆ ಅರ್ಪಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ. ಮನುಷ್ಯನ ಉನ್ನತಿ ಹಾಗೂ ಅವನತಿಗಳಿಗೆ ಭಗವಂತನೇ ಕಾರಣ ಎಂದು ನಂಬಿದ ಅವರು ಇಟ್ಟಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ ಎಂದು ಭಿನ್ನವಿಸಿದ್ದಾರೆ. ಅವನ ಕರುಣೆ ಇದ್ದಷ್ಟು ಕಾಲ ಯಾವುದಕ್ಕೂ ಕೊರತೆಯಿಲ್ಲ. ಆದರೆ ಆತನ ಮಮತೆ ತಪ್ಪಿದರೆ ಮಾತನಾಡಿಸುವವರು ಗತಿಯಿಲ್ಲ. ಒಮ್ಮೊಮ್ಮೆ ಕರುಣಾನಿಧಿಯ ಕರುಣೆಸಮೂಹ ತಪ್ಪುವುದುಂಟು ಎಂಬ ಎಚ್ಚರಿಕೆ ನೀಡಿದ್ದಾರೆ.

ಶ್ರೀಪಾದರಾಜರು ಭಗವಂತನ್ನು ಯಾವ ನಿಲುವಿನಿಂದ ಕೊಂಡಾದಿದದ್ದಾರೆಂಬುದಕ್ಕೆ ಅವರ ಕೀರ್ತನೆಗಳೇ ಸಾಕ್ಷಿಯಾಗಿದೆ. ಶ್ರೀಪಾದರಾಜರಿಗೆ ಭಗವಂತನಲ್ಲಿದ್ದ ತುಂಬು ಭಕ್ತಿ ಅವರ ಹಾಡುಗಳಲ್ಲಿ ವ್ಯಕ್ತವಾಗಿದೆ. ಶ್ರೀ ರಂಗನಾಥನಲ್ಲಿ ಅವರದು ನಿರ್ವ್ಯಾಜ್ಯ ಭಕ್ತಿ. ನವವಿಧ ಭಕ್ತಿಯು ಅವರ ಹಾಡುಗಳಲ್ಲಿ ಇದೆಯಾದರೂ ಮಧುರಭಾವದ ಭಕ್ತಿಯ ಕೈ ಮೇಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Dasa SahityaDr Gururaj PoshettihalliKannada News WebsiteKarnataka Haridasa ParampareLatest News KannadaNarahari ThirtharuSripadarajaruಕರ್ನಾಟಕ ಹರಿದಾಸ ಪರಂಪರೆದಾಸಸಾಹಿತ್ಯನರಹರಿ ತೀರ್ಥರುಶ್ರೀಪಾದರಾಜರುಹರಿದಾಸ ಸಾಹಿತ್ಯ
Share209Tweet123Send
Previous Post

ಸಿಸೇರಿಯನ್ ವೇಳೆ ಶಿಶುವಿನ ಕೆನ್ನೆಯನ್ನೇ ಕೊಯ್ದ ವೈದ್ಯರು: ಎಷ್ಟು ಹೊಲಿಗೆ ಹಾಕಲಾಗಿದೆ ಗೊತ್ತಾ?

Next Post

ಉಂಬ್ಳೆಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ 20 ಕಾಡಾನೆಗಳ ಸಂಚಾರ: ಸ್ಥಳೀಯರಲ್ಲಿ ಆತಂಕ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಉಂಬ್ಳೆಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ 20 ಕಾಡಾನೆಗಳ ಸಂಚಾರ: ಸ್ಥಳೀಯರಲ್ಲಿ ಆತಂಕ

ಉಂಬ್ಳೆಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ 20 ಕಾಡಾನೆಗಳ ಸಂಚಾರ: ಸ್ಥಳೀಯರಲ್ಲಿ ಆತಂಕ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಸಂಚಾರ ದಟ್ಟಣೆ ನಿಯಂತ್ರಿಸಲು ರೈಲ್ವೆ ಕೆಳ ಸೇತುವೆಗಳು ಸಹಕಾರಿ: ಸಚಿವ ಸೋಮಣ್ಣ

ಸಂಚಾರ ದಟ್ಟಣೆ ನಿಯಂತ್ರಿಸಲು ರೈಲ್ವೆ ಕೆಳ ಸೇತುವೆಗಳು ಸಹಕಾರಿ: ಸಚಿವ ಸೋಮಣ್ಣ

February 26, 2026
ಪತ್ರಕರ್ತರ ಹಿತ ಕಾಯಲು ಬದ್ಧ: ಕೇಂದ್ರ ಸಚಿವರ ಭರವಸೆ

ಪತ್ರಕರ್ತರ ಹಿತ ಕಾಯಲು ಬದ್ಧ: ಕೇಂದ್ರ ಸಚಿವರ ಭರವಸೆ

February 26, 2026
ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

February 26, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

February 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL