Tuesday, July 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಶ್ರೀಪರಿಮಳಾಚಾರ್ಯ ಸೇವಾನಿರತ – ವಿದ್ವತ್ತಿನ ಮೇರು ಶೃಂಗ ‘ವಿದ್ವಾನ್ ಶ್ರೀ ರಾಜಾ ಎಸ್. ಗಿರಿಆಚಾರ್ಯ’

August 3, 2019
in Special Articles
0 0
0
Share on facebookShare on TwitterWhatsapp
Read - 2 minutes

ಆರ್ಷ ಪರಂಪರೆಯ ಸಂಪತ್ಪ್ರತೀಕವಾದ ನ್ಯಾಯ, ವ್ಯಾಕರಣ, ವೇದಾಂತ, ಜ್ಯೋತಿಷ್ಯ, ಧರ್ಮಶಾಸ್ತ್ರ, ಮೀಮಾಂಸವೆಂಬ ಷಟ್‍ಶಾಸ್ತ್ರಕೋವಿದರಾದ ಆಗಮಜ್ಞ ವಿದ್ವಾನ್ ಶ್ರೀ ರಾಜಾ ಎಸ್. ಗಿರಿಆಚಾರ್ಯ ಅವರಿಗೆ
ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಸಲ್ಲಿಸಿದ ನುಡಿನಮನ

ಮಹಾಮಹೋಪಾಧ್ಯಾಯ, ಪಂಡಿತಕೇಸರಿ, ವಿದ್ವಾನ್ ರಾಜಾ ಎಸ್. ಗಿರಿ ಆಚಾರ್ಯ ನಾಮಾಂಕಿತ ಶ್ರೀ ಸುಜ್ಞಾನೇಂದ್ರಾಚಾರ್ಯ ಗುರುವರ್ಯರು ಷಾಷ್ಠಿಕ ವಂಶದ ಬೀಗಮುದ್ರೆ ಮನೆತನದ ಯಜುಃಶಾಖೆಯ ಗೌತಮ ಗೋತ್ರೋತ್ಪನ್ನರಾಗಿ ಈ ನಾಡು ಕಂಡ ಪರಮ ಶ್ರೇಷ್ಟ ಯತಿವರೇಣ್ಯರ ವೇದವಿದ ಪರಂಪರೆಯ ಶ್ರೀ ರಾಜಾ ಎಸ್. ವೆಂಕಟರಾಘವೇಂದ್ರಾಚಾರ್ಯ – ಸದ್ಗುಣಿ ಸಾಧ್ವೀಮಣಿ ಶ್ರೀಮತಿ ರತ್ನಾಬಾಯಿ ದಂಪತಿಗಳ ಮಂಗಳ ಗರ್ಭಾಂಬುಧಿಯಲ್ಲಿ ಕರುನಾಡಿನ ಕಪಿಲಾ ತಡಿಯ ಪುಣ್ಯಕ್ಷೇತ್ರ ನಂಜನಗೂಡಿನಲ್ಲಿ ಪಾರ್ಥಿವ ನಾಮ ಸಂವತ್ಸರ ಚೈತ್ರ ಶುಕ್ಲ ನವಮಿ (ಶ್ರೀರಾಮನವಮಿ) 20.04.1945 ರಂದು ಜನಿಸಿದರು.

ಈ ನಾಡು ಕಂಡ ಪರಮ ಶ್ರೇಷ್ಟ ಯತಿಪರಂಪರೆಯ ಪೂರ್ವಾಶ್ರಮ ವಂಶ ಸಂಜಾತರಾದ ಶ್ರೀಯುತರು ತಮ್ಮ ಆರಂಭಿಕ ಶಿಕ್ಷಣವನ್ನು ನಂಜನಗೂಡಿನಲ್ಲಿಯೇ ಪಡೆದು ಮುಂದೆ ತಿರುಮಲ ತಿರುಪತಿ ದೇವಸ್ಥಾನ ಆಗಮ ವಿದ್ಯಾಸಂಸ್ಥೆಯಲ್ಲಿ ದ್ವೈತವೇದಾಂತ ವಿದ್ವತ್ ಹಾಗೂ ವ್ಯಾಸ ವಿದ್ವತ್ ಪದವಿಗೃಹೀತರಾಗಿ, ಪೂರ್ವಪುಣ್ಯಸಂಚಯದ ಫಲವೋ ಎಂಬಂತೆ ಇವರ ತೀರ್ಥರೂಪರು ಪರಮಹಂಸಾಶ್ರಮವನ್ನು ಸ್ವೀಕರಿಸಿ ಶ್ರೀ ಶ್ರೀ 108 ಶ್ರೀಸುಜಯೀಂದ್ರ ತೀರ್ಥರೆಂಬ ಅಭಿಧಾನದಿಂದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ಸಾಮ್ರಾಜ್ಯಪೀಠದ ಅಧಿರೂಢರಾಗಿದ್ದು, ಆ ಮಹನೀಯರಿಂದಲೇ ನ್ಯಾಯ, ವ್ಯಾಕರಣ, ಸಪರಿಮಳನ್ಯಾಯ ಸುಧಾಂತ ದ್ವೈತವೇದಾಂತ ಶಾಸ್ತ್ರಗಳ ಉಪದೇಶ ಪಡೆದ ಸುಕೃತ ಇವರದಾಗಿದೆ. ಮುಂದೆ ಪೂರ್ವಮೀಮಾಂಸೆ, ಜ್ಯೋತಿಷ್ಯ, ಧರ್ಮಶಾಸ್ತ್ರ, ನ್ಯಾಯಶಾಸ್ತ್ರಗಳಲ್ಲಿ ವಿದ್ವನ್ಮಣಿಗಳಾದ ಶ್ರೀ ಬಾಲಸುಬ್ರಹ್ಮಣ್ಯ ಶಾಸ್ತ್ರಿಗಳು, ಶ್ರೀ ಪಿ.ಪಿ. ಲಕ್ಷ್ಮಿನಾರಾಯಣ ಉಪಾಧ್ಯಾಯರು, ಗೋಡಾ ಸುಬ್ರಹ್ಮಣ್ಯ ಶಾಸ್ತ್ರಿಗಳು ಮತ್ತು ಶ್ರೀ ಕೃಷ್ಣಸ್ವಾಮಿ ತಾತಾಚಾರ್ಯ ಅವರುಗಳು ತಮಗೆ ದಿಕ್ಸೂಚಿಗಳಾದವರು.

ಭರತಭೂಮಿಯ ಅವಿಚ್ಛಿನ್ನ ಸಂಸ್ಕøತಿಯ ಪ್ರಯತ ಪ್ರತೀಕವಾದ ಧರ್ಮ ಗ್ರಂಥಗಳ ಸಾರಸರ್ವಸ್ವವನ್ನೂ ನಿತಾಂತ ಅಧ್ಯಯನ, ಚಿಂತನ, ಸಂಶೋಧನ, ಸಂಪಾದನ ಅಧ್ಯಾಪನಗಳ ಮೂಲಕ ಕರತಲಾಮಲಕವಾಗಿಸಿಕೊಂಡು, ದೈವದತ್ತ ಗ್ರಹಣ, ಮನನ, ಧಾರಣ ಶಕ್ತಿಯ ಭಾಂಡಾಗಾರವೇ ಆದ ಶ್ರೀಯುತರು ಭೀಮಪ್ರತಿಭೆಯಿಂದ ಷಟ್‍ಶಾಸ್ತ್ರಗಳಲ್ಲಿ ಅನನ್ಯ ಪರಿಣತಿ ಸಾಧಿಸಿ ಸಾಂಸ್ಕೃತಿಕ , ಧಾರ್ಮಿಕ ವಲಯದ ಮಹಾಮನೀಷಿಯಾಗಿದ್ದಾರೆ.

ಪ್ರಾತಃಸ್ಮರಣೀಯ ಪೂಜ್ಯ ಶ್ರೀ ಸುಜಯೀಂದ್ರ ಶ್ರೀಪಾದಂಗಳವರ ಅಭಿಲಾಷೆಯಂತೆ ಪುಣ್ಯಭೂಮಿ ಮಂತ್ರಾಲಯದ ಶ್ರೀ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನೇತಾರರಾಗಿ ಸಾವಿರಾರು ವಿದ್ಯಾಕಾಂಕ್ಷಿಗಳಿಗೆ ಶಾಸ್ತ್ರಸಂಪತ್ತಿನ ಜ್ಞಾನಧಾರೆಯನ್ನೆರೆಯುತ್ತ ಅವರ ಭವಿಷ್ಯದ ರೂವಾರಿಗಳಾಗಿ ಅನುಪಮ ಸೇವೆ ಸಲ್ಲಿಸುತ್ತಲಿದ್ದಾರೆ.

ಸಂಸ್ಕøತದಲ್ಲಿ ಶಾಬ್ದಬೋಧ, ವಿಷ್ಣು ಭಾಗವತ, ಕರ್ಮನಿರ್ಣಯ, ಪಾದೋದಕ ಪ್ರಾಶನ ಗ್ರಂಥಗಳು, ಇಪ್ಪತ್ನಾಲ್ಕು ಕನ್ನಡ ಗ್ರಂಥಗಳು, ಎಂಟು ತೆಲುಗು ಕೃತಿಗಳ ರಚನೆ ಇವರ ಭಾಷಾವೈದುಷ್ಯದ ದ್ಯೋತಕವಾಗಿ ನೂರಾರು ಗ್ರಂಥಗಳ ಸಂಪಾದಕರಾಗಿ , ಇವರ ನೇತೃತ್ವದಲ್ಲಿ ನಡೆಯುತ್ತಿರುವ ಅನೇಕ ಪ್ರಾಚೀನ ಪ್ರಯತ ಪ್ರಥಿತ ಗ್ರಂಥಗಳ ಹಸ್ತಪ್ರತಿ ಸಂಗ್ರಹಣೆ, ಸಂರಕ್ಷಣೆ, ಸಂಪಾದನೆ, ಪರಿಷ್ಕರಣೆ, ಪ್ರಕಟಣೆಗಳು ಭಾರತೀಯ ಧಾರ್ಮಿಕ ಸಾಹಿತ್ಯ ಭಂಡಾರಕ್ಕೆ ಸಂದ ಅಮೂಲ್ಯ ಕೊಡುಗೆಗಳಾಗಿವೆ. ತೆಂಕು ಭಾರತದಿಂದ ವಾರಣಾಸಿಯವರೆಗೆ ಇವರ ವಿದ್ವತ್ತಿನ ಕಾರ್ಯ ವ್ಯಾಪ್ತಿ ವಿಸ್ತಾರ. ಮಂತ್ರಾಲಯ ಶ್ರೀಮಠದ ಶ್ರೀಮತ್ಸಮೀರ ಸಮಯ ಸಂವರ್ಧಿನೀ ಸಭೆಯ ಅಧ್ವರ್ಯುವಾಗಿ ಶ್ರೀಯುತರು ನಡೆಸಿಕೊಟ್ಟ ಧಾರ್ಮಿಕ ವಿದ್ವತ್ ಸಮಾವೇಶಗಳು ಮಂತ್ರಾಲಯ ಮಹಾ ಸಂಸ್ಥಾನದ ಕೀರ್ತಿ ಕಲಶವನ್ನು ಮತ್ತಷ್ಟು ದೇದೀಪ್ಯಮಾನಗೊಳಿಸಿದೆ.

ಅನೂಚಾನ ಹೈಂದವ ಪರಂಪರೆಯ ಹಿರಿಮೆ ಗರಿಮೆಗಳೇ ಮೂರ್ತಗೊಂಡ ಇವರ ಜ್ಞಾನಸಂಪತ್ತಿನ ಸೌಲಭ್ಯವನ್ನು ಅಖಿಲ ಭಾರತ ಮಾಧ್ವ ಮಹಾ ಮಂಡಳ, ಪೂರ್ಣಪ್ರಜ್ಞ ವಿದ್ಯಾಪೀಠ, ಟಿಟಿಡಿ ದಾಸ ಸಾಹಿತ್ಯ ಯೋಜನೆ, ಆಂಧ್ರದ ದೇವಾದಾಯ ಇಲಾಖೆ, ಕರ್ನಾಟಕ, ತಮಿಳುನಾಡು ಸರ್ಕಾರಗಳ ಧಾರ್ಮಿಕ ದತ್ತಿ ಇಲಾಖೆ ಮುಂತಾದ ಅನೇಕ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳು ತಮ್ಮದಾಗಿಸಿಕೊಂಡಿರುವುದು ಇವರ ಹೆಮ್ಮೆಯ ಮಕುಟದಲ್ಲಿ ಹುದುಗಿಸಿದ ನವ ಮೌಕ್ತಿಕವಾಗಿದೆ.

ವ್ಯಾಸ-ದಾಸ ಸಾಹಿತ್ಯ ಸಮನ್ವಯ ಪೀಠದ ಸಂಸ್ಥಾಪಕ ಅಧ್ಯಕ್ಷರಾಗಿ, ದ್ವೈತರಥ ರಥಿಕರಾಗಿ ಅನೇಕ ಶಾಸ್ತ್ರಾರ್ಥ ಸದಸ್ಸುಗಳ ನಿರ್ವಾಹಕರಾಗಿ, ನಾಡಿನಾದ್ಯಂತ ಸಂಚರಿಸುತ್ತ ಧರ್ಮಪ್ರಸರಣ ಸಂರಕ್ಷಣ ಮಹಾಕ್ರತುವಿನಲ್ಲಿ ಶ್ರಮವೆಣಿಸದೆ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು, ಜನಮಾನಸದಲ್ಲಿ ಧರ್ಮಜಾಗೃತಿಯ ಬೆಳಕನ್ನು ಮೂಡಿಸುತ್ತ ಮುನ್ನಡೆಯುತ್ತಿರುವ ಇವರ ನಿಡುವಯಣದಲ್ಲಿ ಇವರನ್ನರಸಿ ಬಂದ ಪ್ರಶಸ್ತಿ, ಪುರಸ್ಕಾರ, ಗೌರವ, ಸಮ್ಮಾನ ಉಪಾಧಿಗಳು ಅಗಣಿತ. ಭಾರತ ಸರಕಾರದ ರಾಷ್ಟ್ರಪತಿ ಪ್ರಶಸ್ತಿಯೂ ಸೇರಿದಂತೆ ನಾಡಿನ ಬಹುತೇಕ ಎಲ್ಲ ಮಠಾಧೀಶರಿಂದ, ಪ್ರತಿಷ್ಟಿತ ಸಾಂಸ್ಕೃತಿಕ, ಸಾಹಿತ್ಯಕ, ಧಾರ್ಮಿಕ ಸಂಘ ಸಂಸ್ಥೆಗಳಿಂದ ಅಪರಿಮಿತ ಪ್ರಶಂಸಾಭಿನಂದನೆಗಳು ಇವರಿಗೆ ಸಂದಿರುವುದು ನಮಗೆಲ್ಲ ಹೆಮ್ಮೆಯೆನಿಸಿದೆ.

ಲೇಖನ: ಜಿ.ಪಿ ನಾಗರಾಜನ್ , ಬೆಂಗಳೂರು

Tags: Kannada ArticleMantralayaSanskritVidwan Sri Raja S. Giria Acharyaಗೌರವ ಡಾಕ್ಟರೇಟ್ ಪ್ರಶಸ್ತಿವಿದ್ವಾನ್ ಶ್ರೀ ರಾಜಾ ಎಸ್. ಗಿರಿಆಚಾರ್ಯಶ್ರೀ ರಾಘವೇಂದ್ರಸ್ವಾಮಿಶ್ರೀಪರಿಮಳಾಚಾರ್ಯಸಂಸ್ಕøತ
Previous Post

ಜಮ್ಮು ಕಾಶ್ಮೀರ ವಿಶೇಷ ಸ್ಥಾನ ರದ್ದು? 40 ಸಾವಿರ ಯೋಧರ ನಿಯೋಜನೆ, ಅಮರನಾಥ ಯಾತ್ರೆ ಮೊಟಕು ಏಕೆ?

Next Post

ಶಿವಮೊಗ್ಗ: ಅಭಿವೃದ್ಧಿ ನಿರ್ಲಕ್ಷಿಸಿ, ಜನರ ಅಹವಾಲಿಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ: ಕ್ಯಾ.ಮಣಿವಣ್ಣನ್ ಎಚ್ಚರಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ: ಅಭಿವೃದ್ಧಿ ನಿರ್ಲಕ್ಷಿಸಿ, ಜನರ ಅಹವಾಲಿಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ: ಕ್ಯಾ.ಮಣಿವಣ್ಣನ್ ಎಚ್ಚರಿಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Strings of Spring-A grand musicalevening at Brussels by Amruthavarshini collaborating with Indian Embassy

July 29, 2025

ಶಿವಮೊಗ್ಗ | ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಚಂದ್ರಗುತ್ತಿ ಬೆಟ್ಟದ ಪ್ರಾಕೃತಿಕ ಸೌಂದರ್ಯ

July 29, 2025

ನಮ್ಮ ಮೇಲೆ ಯಾರದ್ದೇ ಅಣುಬಾಂಬ್ ದಾಳಿ ಬ್ಲಾಕ್’ಮೇಲ್ ನಡೆಯಲ್ಲ: ಮೋದಿ ಗುಡುಗು

July 29, 2025

ಶಟಲ್ ಬ್ಯಾಡ್ಮಿಂಟನ್‌ | ಕ್ರೈಸ್ಟ್‌ಕಿಂಗ್  ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

July 29, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Strings of Spring-A grand musicalevening at Brussels by Amruthavarshini collaborating with Indian Embassy

July 29, 2025

ಶಿವಮೊಗ್ಗ | ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಚಂದ್ರಗುತ್ತಿ ಬೆಟ್ಟದ ಪ್ರಾಕೃತಿಕ ಸೌಂದರ್ಯ

July 29, 2025

ನಮ್ಮ ಮೇಲೆ ಯಾರದ್ದೇ ಅಣುಬಾಂಬ್ ದಾಳಿ ಬ್ಲಾಕ್’ಮೇಲ್ ನಡೆಯಲ್ಲ: ಮೋದಿ ಗುಡುಗು

July 29, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!