ಇಡಿಯ ವಿಶ್ವದಲ್ಲೇ ಸಂಚಲನ ಮೂಡಿಸಿ, ಭಾರತೀಯ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಬಾಹುಬಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಆಕ್ಷನ್ ಕಟ್ ನಲ್ಲಿ ತೆಲುಗಿನ ಇಬ್ಬರು ಘಟಾನುಘಟಿಗಳು ಅಭಿನಯಿಸುತ್ತಿದ್ದಾರೆ.
ಜ್ಯೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜಾ ಇಬ್ಬರೂ ಒಟ್ಟಾರೆ ನಟಿಸುತ್ತಿರುವ, ರಾಜಮೌಳಿ ಅವರು ಬಾಲಿವುಡ್ ಮೋಹಕ ತಾರೆ ದಿವಂಗತ ಶ್ರೀದೇಶಿ ಪುತ್ರಿ ಜಾಹ್ನವಿ ಕಪೂರ್ ರನ್ನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ಜಾಹ್ನವಿ ಕಪೂರ್ ಇದೀಗ ಆರ್‌ಆರ್‌ಆರ್ ಚಿತ್ರದ ಮೂಲಕ ದಕ್ಷಿಣ ಭಾರತ ಚಿತ್ರದಲ್ಲಿ ನಟಿಸಲಿದ್ದಾರೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶ್ರೀರದೇವಿಯಂತೆ ಪುತ್ರಿಯೂ ಮಿಂಚು ಹರಿಸುತ್ತಾರಾ ಕಾದು ನೋಡಬೇಕಿದೆ.

















