ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಗೆ ನಿರ್ದೇಶಕರಾಗಿ ಶಿವಮೊಗ್ಗದ ಡಾ. ಕೋಟೆ ಲೋಕೇಶ್ವರ್ ಅವರು ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗಿದ್ದಾರೆ.
Also Read: ಪರಿಹಾರ ಯಾರಿಗೆ ಬೇಕ್ರಿ, ಆರೋಗ್ಯಕ್ಕೆ ಹಾನಿಯಾದ ಕಲ್ಲುಕ್ವಾರಿ ನಿಲ್ಲಿಸಿ: ಬಸ್ತಿಕೊಪ್ಪ ಗ್ರಾಮಸ್ಥರ ಆಕ್ರೋಶ
ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತಾ ಮೋರ್ಚಾದ ಕಾರ್ಯದರ್ಶಿ, ಬಿ.ಎಚ್. ರಸ್ತೆಯ ಪ್ರಜ್ವಲ್ ಎಂಟಪ್ರೈಸಸ್’ನ ಪಾಲುದಾರರೂ ಆದ ಲೋಕೇಶ್ವರ್ ಅವರು ನಿನ್ನೆ ನಡೆದ ರಾಜ್ಯ ಸಂಸ್ಥೆಯ ಚುನಾವಣೆಯಲ್ಲಿ ಮೂರನೆಯ ಸ್ಥಾನದ ಅತಿ ಹೆಚ್ಚು ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯ ಸಂಸ್ಥೆಗೆ ಆಯ್ಕೆಯಾದ ಲೋಕೇಶ್ವರ್ ಅವರನ್ನು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ರೋಡಿಗ್ರದಗ, ಜಿಲ್ಲಾ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಎಂ.ಕೆ. ನಾಯಕ್, ಕಾರ್ಯದರ್ಶಿ ವೇದಮೂರ್ತಿ ಹಾಗೂ ಇತರರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post