ಬೆಂಗಳೂರು: ಒಂದು ಹಲವು ದಿನಗಳಿಂದ ರಾಜ್ಯದಲ್ಲಿ ಅಬ್ಬರಿಸುತ್ತಿದ್ದ ಮಳೆ ಈಗ ಕೊಂಚ ಕಡಿಮೆಯಾಗಿದೆ. ಆದರೆ, ನೆರೆಯ ಅಬ್ಬರಕ್ಕೆ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡುವ ಸಲುವಾಗಿ ಬನಶಂಕರಿ 3 ನೆಯ ಹಂತದ ಇಟ್ಟಮಡುವಿನಿಂದ ಜನತಾ ಬಜಾರ್’ವರೆಗೆ ಹನುಮಗಿರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 75 ರ ಇಳಿವಯಸ್ಸಿನ ಬಸವರಾಜ್ ಕಲ್ಮಂಗಿ ಅವರು, ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರದಿಂದ ನೆರೆಗೆ ತುತ್ತಾಗಿ ಸಂಕಷ್ಟ ಎದುರಿಸುತ್ತಿರುವವರಿಗೆ ನೆರವು ನೀಡಲು ಅಭಿಯಾನ ನಡೆಸುತ್ತಿದ್ದೇವೆ. ಅದಕ್ಕೆ ಜನರ ಬಳಿ ಜೋಳಿಗೆ ಹಿಡಿದು ಹೊರಟಿದ್ದೇವೆ ಎನ್ನುತ್ತಾರೆ ಶ್ರೀಯುತರು.
ಸಣ್ಣ ಸಣ್ಣ ಮಕ್ಕಳು ಹಾಗೂ ಮಧ್ಯ ವಯಸ್ಸಿನ ಯುವಕರಾದ ಶಿವು ಮತ್ತು ಅನಂದ್ ತಂಡದೊಂದಿಗೆ ಅಭಿಯಾನ ನಡೆಸಿ ಸಂಗ್ರಹ ಮಾಡಿ ಧವಸ-ಧಾನ್ಯಗಳನ್ನು ಹಾಗೂ ಹಣವನ್ನು ಶಂಕರಪುರಂನಲ್ಲಿರುವ ಕಾರ್ಯಲಯಕ್ಕೆ ತಲುಪಿಸಿ ಅಲ್ಲಿಂದ ಮುಂದೆ ಅದನ್ನು ನೆರೆ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ತೆ ಮಾಡಲಾಗುತ್ತದೆ ಎಂದರು.
ನೆರೆಯಿಂದಾಗಿ ಸಂಕಷ್ಟ ಎದುರಾಗಿದ್ದು, ಅತಿಯಾದ ಮಳೆಯಿಂದ ಸುಮಾರು ಆರು ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮಳೆಯ ಆರ್ಭಟ ಮುಂದುವರೆದಿದ್ದು ಮತ್ತಷ್ಟು ಗ್ರಾಮಗಳು ಜಲಾವೃತ ಭೀತಿ ಎದುರಿಸುವಂತಾಗಿದೆ. ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಜನರು ಮುಂದೆ ಬರುತ್ತಿದ್ದು ಧನಸಂಗ್ರಹ – ಹಣ ಹಾಗು ಚಾಪೆಗಳು, ಬೆಡ್ ಶೀಟ್’ಗಳು, ಕ್ವಿಂಟಲ್ ಅಕ್ಕಿ ಇನ್ನು ಇತ್ಯಾದಿ ನೀಡುತ್ತಿದ್ದು ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಅಭಿಯಾನ ನಡೆಸಿದ್ದು ಸಾರ್ಥಕವೆನಿಸಿತು ಎನ್ನುತ್ತಾರೆ ಬಸವರಾಜ್ ಕಲ್ಮಂಗಿ ಅವರು.
ಆ ಇಳಿ ವಯಸ್ಸಿನಲ್ಲಿಯೂ ಸಹ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಅಭಿಯಾನದ ನೇತೃತ್ವ ಅವರು ವಹಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರೆ ಅತಿಶಯೋಕ್ತಿ ಆಗಲಾರದು.
ಚಿತ್ರ, ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ
Discussion about this post