ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಯೋಧ್ಯೆ: ದೇಶದ ಪವಿತ್ರ ಧಾರ್ಮಿಕ ಸ್ಥಳ ಉತ್ತರ ಪ್ರದೇಶದ ರಾಮಜನ್ಮ ಭೂಮಿಯಲ್ಲಿ ನೆಲಸಮ ಮಾಡುವ ವೇಳೆ ದೇವತೆಗಳ ವಿಗ್ರಹ ಹಾಗೂ ಕಲಾಕೃತಿಗಳು ದೊರೆತಿವೆ.
ಈ ಕುರಿತಂತೆ ಮಾತನಾಡಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅಯೋಧ್ಯೆಯ ರಾಮ ಜನ್ಮಭೂಮಿ ಆವರಣದಲ್ಲಿ ಭೂ ನೆಲಸಮಗೊಳಿಸುವ ಕೆಲಸದಲ್ಲಿ ಮರಳುಗಲ್ಲು, ಕಲಾಕೃತಿಗಳು, ದೇವರು ಮತ್ತು ದೇವತೆಗಳ ವಿಗ್ರಹಗಳು ಮತ್ತು ಶಿವ್ಲಿಂಗ್ ಮೇಲೆ ಹಲವಾರು ಕೆತ್ತನೆಗಳು ದೊರೆತಿವೆ. ಕಳೆದ ಹತ್ತು ದಿನಗಳಿಂದ ಇಲ್ಲಿ ಭೂ ನೆಲಸಮ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಈ ಅವಧಿಯಲ್ಲಿ ಕಾರ್ಮಿಕರಿಂದ ಅವಶೇಷಗಳನ್ನು ತೆಗೆಯಲಾಗುತ್ತಿದೆ ಎಂದಿದ್ದಾರೆ.
ಈ ಪ್ರಕ್ರಿಯೆಯಲ್ಲಿ, ರಚನೆಯ ಭಗ್ನಾವಶೇಷ ಮತ್ತು ಮರಳುಗಲ್ಲಿನ ಕೆತ್ತನೆಗಳಲ್ಲಿ ಹಲವಾರು ಸ್ತಂಭಗಳು ದೊರೆತಿದ್ದು, ಕುಬರ್ ಟೀಲಾದಲ್ಲಿ ಶಿವ್ಲಿಂಗ್ ಕಂಡುಬಂದಿದೆ ಎಂದಿದ್ದಾರೆ.
ಚಂಪತ್ ರಾಯ್ ಅವರ ಮೇಲ್ವಿಚಾರಣೆಯಲ್ಲಿ, ಜಿಲ್ಲಾ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ರಾಮ್ ಜನ್ಮಭೂಮಿಯಲ್ಲಿ ಭೂ ನೆಲಸಮಗೊಳಿಸುವ ಕೆಲಸವನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ.
ಕಳೆದ ವರ್ಷ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿ ಅದಕ್ಕೆ ಸಂಬಂಧಪಟ್ಟಂತೆ ಟ್ರಸ್ಟ್ ನಿರ್ಮಿಸುವಂತೆ ಕೂಡ ಹೇಳಿತ್ತು. ಅದಕ್ಕೆ ಪ್ರತಿಯಾಗಿ 5 ಎಕರೆ ಭೂಮಿಯನ್ನು ಸರಿಯಾದ ಕಡೆಯಲ್ಲಿ ಸುನ್ನಿ ವಕ್ಫ್ ಬೋರ್ಡ್‌ಗೆ ನೀಡುವಂತೆ ಕೂಡ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.
Get in Touch With Us info@kalpa.news Whatsapp: 9481252093
Discussion about this post