ಕಲ್ಪ ಮೀಡಿಯಾ ಹೌಸ್ | ಕೊಲ್ಹಾಪುರ |
ಸಮಾಜ ಎಷ್ಟೇ ಮುಂದುವರೆದರೂ ಸಂಬಂಧಗಳಲ್ಲಿನ ದ್ವೇಷಗಳು ಮಾತ್ರ ಎಂದಿಗೂ ಹಾಗೆಯೇ ಇರುತ್ತದೆಯೇ ಎಂಬ ಅನುಮಾನಗಳನ್ನು ಹುಟ್ಟು ಹಾಕುವ ಘೋರ ಘಟನೆಯೊಂದು ವರದಿಯಾಗಿದೆ.
ಹೌದು… ಮಲಗಿದ್ದಾಗ ಗೊರಕೆ ಹೊಡೆಯುತ್ತಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಮಲತಾಯಿಯೊಬ್ಬಳು ತನ್ನ ಐದು ವರ್ಷದ ಮಲಮಗಳನ್ನು ತೀವ್ರವಾಗಿ ಗಾಯಗೊಳಿಸಿದ ಭಯಾನಕ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಬಾಲಕಿ ಮಲಗಿದ್ದಾಗ ಗೊರಕೆ ಹೊಡೆಯಲು ಪ್ರಾರಂಭಿಸಿದಾಗ ಮಲತಾಯಿ ಪೂಜಾ ಶುಭಂ ಮ್ಯಾಗ್ರೆ ಕೋಪಗೊಂಡಿದ್ದಾಳೆ.
ಕಬ್ಬಿಣದ ರಾಡ್ ಅನ್ನು ಬಿಸಿ ಮಾಡಿ ಮಗುವಿನ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಕೆನ್ನೆ, ತುಟಿ, ಬಾಯಿ, ಕುತ್ತಿಗೆ ಮತ್ತು ಖಾಸಗಿ ಭಾಗಗಳಿಗೆ ಗಾಯಗಳಾಗಿವೆ.

ವೈದ್ಯಕೀಯ ಚಿಕಿತ್ಸೆಯ ನಂತರ, ಶುಭಂ ಮ್ಯಾಗ್ರೆ ಪೂಜಾ ಮ್ಯಾಗ್ರೆ ವಿರುದ್ಧ ದೂರು ದಾಖಲಿಸಲು ಶಿರೋಲಿ ಎಂಐಡಿಸಿ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ಪೂಜಾ ಮ್ಯಾಗ್ರೆ ಅವರನ್ನು ಬಂಧಿಸಿ ಹಲ್ಲೆ ಆರೋಪ ಹೊರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post