ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನ 45 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಪರಿಣಾಮವಾಗಿ ರಾಜ್ಯದ ಜನತೆ ಬೆಚ್ಚಿ ಬಿದ್ದಿದ್ದಾರೆ.
ನಿನ್ನೆ ಅಂದರೆ ಗುರುವಾರ ಸಂಜೆಯಿಂದ ಇಂದು ಮಧ್ಯಾಹ್ನದವರೆಗೂ ರಾಜ್ಯದಲ್ಲಿ ಒಟ್ಟು 45 ಹೊಸ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರದ 7, ಬೆಳಗಾವಿಯಲ್ಲಿ 11, ದಾವಣಗೆರೆಯಲ್ಲಿ 14, ಉತ್ತರ ಕನ್ನಡದ ಭಟ್ಕಳದಲ್ಲಿ 12 ಹಾಗೂ ಬಳ್ಳಾರಿಯಲ್ಲಿ 1 ಪ್ರಕರಣ ವರದಿಯಾಗಿದೆ.
ಪ್ರಮುಖವಾಗಿ, ಭಟ್ಕಳದಲ್ಲಿ 5 ತಿಂಗಳ ಮಗುವಿಗೆ ಪಾಸಿಟಿವ್ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 750ಕ್ಕೇರಿಕೆಯಾಗಿದ್ದು, 31 ಜನರು ಮೃತಪಟ್ಟಿದ್ದಾರೆ.
Get in Touch With Us info@kalpa.news Whatsapp: 9481252093















