ಬೆಂಗಳೂರು: ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಅಪ್ಪಳಿಸಿದ್ದು, ನೆರೆ ಸಂತ್ರಸ್ಥರ ಗೋಳು ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಮಿಡಿದಿರುವ ಕರ್ನಾಟಕದ ಮಾತೃ ಹೃದಯಿ ಸುಧಾಮೂರ್ತಿಯವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಕೋಟಿ ರೂ. ದೇಣಿಗೆ ನೀಡುವ ಮೂಲಕ ತಾವು ಮಾನವೀತೆಯ ಸಾಕಾರ ಮೂರ್ತಿ ಎಂಬುದನ್ನು ಸಾಬೀತು ಮಾಡಿದ್ದಾರೆ.
ಸರಳತೆ, ಮಾನವೀಯತೆ ಹಾಗೂ ಅಂತಃಕರಣದ ರಾಜ್ಯದ ಶ್ರೇಷ್ಠ ಮಹಿಳೆಯಾಗಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರು ಹಿಂದೆಯೂ ಸಹ ಹಲವಾರು ಬಾರಿ ಸಮಾಜಕ್ಕೆ ತಮ್ಮ ಕೊಡುಗೆ ನೀಡುವ ಮೂಲಕ ಸಾಮಾಜಿಕ ಬಾಧ್ಯತೆಯನ್ನು ಮರೆದಿದ್ದರು.
ಈಗ ಪ್ರವಾಹದಿಂದಾಗಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ಥರ ಸಹಾಯಕ್ಕೆ ಮುಂದಾಗಿರುವ ಇವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಸ್ವತಃ ಮಾತನಾಡಿರುವ ಅವರು, ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಆಸ್ತಿ ಪಾಸ್ತಿ ನಷ್ಟವಾದವರಿಗೂ ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
Discussion about this post