ಕಲ್ಪ ಮೀಡಿಯಾ ಹೌಸ್ | ಸುಳ್ಯ |
ಬೆಳ್ಳಾರೆಯ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು Praveen Nettaru ಹತ್ಯೆ ಪ್ರಕರಣದ ಆರೋಪಿಗಳು ಜೂನ್ 30ರ ಒಳಗಾಗಿ ಶರಣಾಗಬೇಕು ಎಂದು ಎನ್’ಐಎ ನ್ಯಾಯಾಲಯ ಖಡಕ್ ವಾರ್ನಿಂಗ್ ನೀಡಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ತೀವ್ರ ವಿಚಾರಣೆ ನಡೆಸುತ್ತಿರುವ ಎನ್’ಐಎ ನಾಪತ್ತೆಯಾಗಿರುವ ಆರೋಪಿಗಳಿಗೆ ತೀವ್ರ ಶೋಧ ನಡೆಸುತ್ತಿದೆ. ಆದರೆ, ಅವರ ಸುಳಿವು ದೊರೆಯದ ಹಿನ್ನೆಲೆಯಲ್ಲಿ ನಗರದ ಬೀದಿಗಳಲ್ಲಿ ಈ ಬಗ್ಗೆ ಧ್ವನಿವರ್ಧಕ ಬಳಸಿ ಪ್ರಕಟಣೆ ಹೊರಡಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಜೂನ್ 30 ರೊಳಗೆ ಶರಣಾಗದೇ ಇದ್ದಲ್ಲಿ ಅವರ ಮನೆಯನ್ನು ಮುಟ್ಟುಗೋಲು ಮಾಡಲಾಗುವುದೆಂದು ಸುಳ್ಯ ನಗರದಲ್ಲಿ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಿದ್ದಾರೆ.
Also read: ಜುಲೈ 5 ರಂದು ಬೆಂಗಳೂರಿನಲ್ಲಿ ಲಿಂಗಾಯತ ಶಾಸಕರು, ಸಚಿವರಿಗೆ ಸನ್ಮಾನ
ಎನ್’ಐಎ ನ್ಯಾಯಾಲಯದ ಅಧಿಕಾರಿಗಳು ಹಾಗೂ ಸುಳ್ಯ ಪೊಲೀಸ್ ಸಿಬ್ಬಂದಿಯವರು ಜಂಟಿಯಾಗಿ ಆರೋಪಿಗಳಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಲಾಗುತ್ತಿದೆ.
ಸುಳ್ಯದ ಕಲ್ಲುಮುಟ್ಲುನಲ್ಲಿ ವಾಸವಿದ್ದ ಆರೋಪಿ ಉಮ್ಮರ್ ಫಾರೂಕ್ ಅವರ ಮನೆಗೂ ಹೋಗಿ ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿ ಬಂದಿದ್ದಾರೆ. ನಿನ್ನೆ ಬೆಳ್ಳಾರೆಯಲ್ಲಿಯೂ ಧ್ವನಿವರ್ಧಕದ ಮೂಲಕ ಎನ್’ಐಎ ನ್ಯಾಯಾಲಯದ ಆದೇಶವನ್ನು ಉದ್ಘೋಷಣೆ ಮಾಡಿ ಆರೋಪಿ ಮುಸ್ತಫರವರ ಮನೆಗೂ ಹೋಗಿ ಆದೇಶ ಪ್ರತಿ ಅಂಟಿಸಿ ಬಂದಿದ್ದಾರೆ ಎಂದು ಹೇಳಲಾಗಿದೆ.
ಎನ್’ಐಎ ಅಧಿಕಾರಿಗಳು ಈ ಹಿಂದೆ ಆರೋಪಿಗಳ ಪೋಟೊಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಆರೋಪಿಗಳ ಪತ್ತೆಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ನಡೆದು 11 ತಿಂಗಳು ಕಳೆದುಹೋಗಿದ್ದು ಎನ್’ಐಎ ಅಧಿಕಾರಿಗಳ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post