ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಸಿನಿಮಾ ಮೂಲಕ ಸಂಚಲನ ಮೂಡಿಸಿದ ನಿರ್ದೇಶಕ ’ಸುನಿ’ ಕಥೆಯ ನಿರೂಪಣಾ ಶೈಲಿಯಿಂದಲೆ ಗಮನ ಸೆಳೆದವರು. ಹಾಸ್ಯ, ಪ್ರೇಮಕಥನ, ರೌಡಿಸಂ, ಕೌಟುಂಬಿಕ, ಪ್ರಯೋಗಾತ್ಮಕ ಎಲ್ಲಾ ಬಗೆಯ ಚಿತ್ರಗಳ ಟ್ರಂಪ್ ಕಾರ್ಡ್ ’ಸುನಿ’ ಎಂದರೆ ತಪ್ಪಾಗಲಾರದು.
ಅಂದಹಾಗೆ ನಿರ್ದೇಶಕ ಸುನಿ ಇಂದು ತಮ್ಮ ಫೇಸ್ಬುಕ್ ವಾಲ್’ನಲ್ಲಿ’ದ ಸ್ಟೋರಿ ಆಫ್ ರಾಯಗಢ’ ಎಂಬ ಶೀರ್ಷಿಕೆಯುಳ್ಳ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ನಾಯಕಿ, ನಾಯಕಿ, ಚಿತ್ರ ತಂಡ ಯಾವುದರ ಬಗ್ಗೆಯೂ ಮಾಹಿತಿ ಇಲ್ಲದ ಪೋಸ್ಟರ್ ಸಕ್ಕತ್ ವೈರಲ್ ಆಗಿದೆ. ಪೋಸ್ಟರ್ ಬಗ್ಗೆ exclusive ಮಾಹಿತಿ ನೀಡಿದ್ದಾರೆ.
’ದ ಸ್ಟೋರಿ ಆಫ್ ರಾಯಗಢ’ ಚಿತ್ರಕ್ಕೆ ’ಗೋಲ್ಡನ್ ಸ್ಟಾರ್ ಗಣೇಶ್’ ನಾಯಕ:
ಹೌದು ’ಚಮಕ್’ ಸಿನಿಮಾದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸುನಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ’ಚಮಕ್’ ಸಿನಿಮಾದಲ್ಲಿ ಗಣೇಶ್’ರನ್ನು ಲವರ್ ಬಾಯ್’ನಂತೆ ತೋರಿಸಿದ್ದ ’ಸುನಿ’ ಗಣೇಶ್’ಗೆ ಒಂದು ಮಟ್ಟಿನ ಬ್ರೇಕ್ ದಕ್ಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದರು. ಈಗ ಒಂದು ಪಕ್ಕ ಮಾಸ್ ಮತ್ತು ರಾ ಶೈಲಿಯ ಕಥೆ ಮಾಡಿಕೊಂಡಿದ್ದಾರೆ. ಅದೇ ’ದ ಸ್ಟೋರಿ ಆಫ್ ರಾಯಗಢ’ ಸಿನಿಮಾ ಆಗುತ್ತಿದೆ.
ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಗದ ಕಥಾಹಂದರ ಈ ಸಿನಿಮಾದಲ್ಲಿ ಇರಲಿದ್ದು ಸದ್ಯ ಓನ್ ಲೈನ್ ಅಷ್ಟೇ ರೆಡಿ ಆಗಿದೆಯಂತೆ.
ಈ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ’ಸುನಿ’ ’ಸದ್ಯ ಶರಣ್ ಅಭಿನಯದ ’ಅವಾತರ್ ಪುರುಷ’ ಸಿನಿಮಾ ಕೊನೆ ಹಂತದಲ್ಲಿದ್ದು ಬಿಡುಗಡೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದೇನೆ. ನಂತರ ನನ್ನ ಮತ್ತು ಗಣೇಶ್ ಅವರ ಕಾಂಬಿನೇಷನ್’ನಲ್ಲೇ ’ಸಕ್ಕತ್’ ಸಿನಿಮಾ ಸೆಟ್ಟೇರಲಿದೆ.
ಇವೆರಡೂ ಚಿತ್ರ ಮುಗಿದ ಮೇಲಷ್ಟೇ ’ದ ಸ್ಟೋರಿ ಆಫ್ ರಾಯಗಢ’ ಕೈಗೆತ್ತುಕೊಳ್ಳುತ್ತೇನೆ. ಕಥೆಯ ಓನ್ ಲೈನ್ ಮಾತ್ರ ರೆಡಿ ಆಗಿದೆ, ಸ್ಕ್ರಿಪ್ಟ್ ಕೆಲಸ, ನಾಯಕಿ, ತಾಂತ್ರಿಕ ವರ್ಗ ಮತ್ತು ಇತರ ಪಾತ್ರಗಳ ಅನ್ವೇಷಣೆ ಇನ್ನಷ್ಟೇ ಆಗಬೇಕಿದೆ’ ಎಂದು ಮಾಹಿತಿ ನೀಡಿದರು.
ಅಂದಹಾಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬಕ್ಕೆ ’ದ ಸ್ಟೋರಿ ಆಫ್ ರಾಯಗಢ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜುಲೈ 2 ರಂದು ಬಿಡುಗಡೆಯಾಗಲಿದೆ.
Get In Touch With Us info@kalpa.news Whatsapp: 9481252093
Discussion about this post