ನವದೆಹಲಿ: ದೇಶದ ಮುಂದಿನ ಮುಖ್ಯಚುನಾವಣಾ ಆಯುಕ್ತರನ್ನಾಗಿ ಸುನೀಲ್ ಅರೋರಾ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವ ರಾಷ್ಟ್ರಪತಿಗಳು, ರಾವತ್ ಅವರ ಉತ್ತರಾಧಿಕಾರಿಯನ್ನಾಗಿ ಅರೋರಾ ಅವರನ್ನು ನೇಮಿಸಿದ್ದಾರೆ.
ಹಾಲಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅವರ ಅವಧಿ ಡಿ.1ಕ್ಕೆ ಕೊನೆಗೊಳ್ಳಲಿದ್ದು,ಇವರ ಉತ್ತರಾಧಿಕಾರಿಯಾಗಿ ಅರೋರಾ ನೇಮಕವಾಗಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಜಮ್ಮು ಕಾಶ್ಮೀರದಲ್ಲಿ ನಡೆಯಬೇಕಿರುವ ಚುನಾವಣೆ, ಮುಂಬರುವ ಲೋಕಸಭಾ ಚುನಾವಣೆಗೆ ಸುನೀಲ್ ಅರೋರಾ ಅವರೇ ಮುಖ್ಯ ಚುನಾವಣಾ ಆಯುಕ್ತರಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ.
Discussion about this post