ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ದೇಶದಾದ್ಯಂತ ಲಾಕ್’ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಿಗೆ ಜನರು ಮುಗಿ ಬೀಳುತ್ತಿರುವುದನ್ನು ತಪ್ಪಿಸುವ ಸಲುವಾಗಿ ದಿನದ 24 ಗಂಟೆಯೂ ಸೂಪರ್ ಮಾರ್ಕೆಟ್’ಗಳನ್ನು ಓಪನ್ ಮಾಡುವುದನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅನುಮತಿ ನೀಡಿದ್ದಾರೆ.
For the convenience of citizens grocery shops and supermarkets seeking food articles can be open 24*7 all over the state. Cooperate with police by avoiding crowding.
— DGP KARNATAKA (@DgpKarnataka) March 25, 2020
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ದಿನದ 24 ಗಂಟೆ ದಿನಸಿ ಅಂಗಡಿ ತೆರೆಯಲು ಮಾಡಲು ಅನುಮತಿ ನೀಡಲಾಗಿದ್ದು, ಜನಜಂಗುಳಿ ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ. ದಿನಸಿ, ಸೂಪರ್ ಮಾರ್ಕೆಟ್’ಗೆ ಅನುಮತಿ ನೀಡಲಾಗಿದೆ. ಗುಂಪು ಸೇರದಂತೆ ಪೊಲೀಸರ ಮನವಿ ಮಾಡಿದ್ದಾರೆ. ಅಲ್ಲದೇ ವೈದ್ಯಕೀಯ ನರೆವಿಗಾಗಿ ಪಾಸ್ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post