ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಶಿವಮೊಗ್ಗದ ಎಂಆರ್’ಎಸ್ ವಿದ್ಯುತ್ ಪ್ರಸರಣ ಕೇಂದ್ರದಲ್ಲಿನ ಗಂಭೀರ ಸ್ವರೂಪದ ನ್ಯೂನತೆಯನ್ನು ಸರಿಪಡಿಸಲು ದೀರ್ಘಾವಧಿಯ ಕಾಲಾವಕಾಶ ಅಗತ್ಯವಿರುವುದನ್ನು ಸರಿಪಡಿಸಿ, ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ತ್ವರಿತಗತಿಯಲ್ಲಿ ವಿದ್ಯುತ್ ಸರಬರಾಜುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಎಂಆರ್’ಎಸ್ ವಿದ್ಯುತ್ ಪ್ರಸರಣ ಕೇಂದ್ರದಲ್ಲಿನ ನೂರು ಎಂವಿಎ ಪರಿವರ್ತಕದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಸರಿಪಡಿಸಲು ಸುಮಾರು 20 ದಿನಗಳ ಕಾಲಾವಕಾಶದ ಬದಲಾಗಿ ಕೂಡಲೇ ಅಗತ್ಯ ಕ್ರಮ ಕೈಗೊಂಡು ಸೀಮಿತ ಕಾಲಾವಧಿಯಲ್ಲಿ ವಿದ್ಯುತ್ ಸರಬರಾಜುಗೊಳಿಸುವಂತೆ ಸೂಚಿಸಿರುವ ಅವರು, ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೊಳಪಡುವ ವಿದ್ಯುತ್ ಗ್ರಾಹಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಹಾಗೂ ಪರಿವರ್ತಕ ದುರಸ್ತಿಗೊಳಿಸುವ ಅಲ್ಪಾವಧಿಯವರೆಗೆ ಸಹಕರಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ವಿದ್ಯುತ್ ಪ್ರಸರಣ ಕೇಂದ್ರದ ವ್ಯಾಪ್ತಿಗೊಳಪಡುವ ತೀರ್ಥಹಳ್ಳಿ ತಾಲೂಕಿನ ಪ್ರದೇಶಗಳು, ಶಿವಮೊಗ್ಗ ತಾಲೂಕಿನ ಕುಂಸಿ, ಆಯನೂರು ಭಾಗದ ಪ್ರದೇಶಗಳು, ಶಿವಮೊಗ್ಗ ನಗರದ ಭಾಗಶಃ ಪ್ರದೇಶ, ಸಾಗರ ಮತ್ತು ಹೊಸನಗರ ತಾಲೂಕಿನ ಪ್ರದೇಶಗಳ ವಿದ್ಯುತ್ ಬಳಕೆದಾರರಿಗೆ ವಿದ್ಯುತ್ ಸರಬರಾಜಿನಲ್ಲಿ ಆಗುವ ತೊಂದರೆ, ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ಅಗಬಹುದಾದ ಅಡಚಣೆಯನ್ನು ಮನಗಂಡು ಈಗಾಗಲೇ ತುರ್ತು ಕ್ರಮಕ್ಕೆ ಸೂಚಿಸಲಾಗಿದೆ ಎಂದವರು ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post