ತೀರ್ಥಹಳ್ಳಿ: 2022 ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವ ಮೋದಿಯವರ ಆಶಯ ನನಸಾಗಲು ನೀವು ಮೋದಿಯನ್ನು ಬೆಂಬಲಿಸಿ ಮತದಾರರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಂಚದಕಟ್ಟೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಮೋದಿ ಅವರು ಜಾರಿಗೆ ತಂದ ಕೃಷಿ ಸನ್ಮಾನ್ ಯೋಜನೆ ಜನಪ್ರಿಯತೆ ಗೊಂಡಿದೆ. ಉಜ್ವಲ ಯೋಜನೆಯಿಂದ ಎರಡು ಕೋಟಿ ಜನರಿಗೆ ಗ್ಯಾಸ್ ಸಂಪರ್ಕವಾಗಿದೆ. ದಿನಕ್ಕೆ ಮೂವತ್ತೈದು ಕಿಲೋಮೀಟರ್ ಅಂತೆ ರಾಷ್ಟ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ನಮ್ಮ ಪಕ್ಷದ ಆಡಳಿತದಲ್ಲಿ ನಡೆಯುತ್ತಿದೆ ಎಂದರು.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಎಸ್’ಎನ್’ಎಲ್ ಇಂಟರ್’ನೆಟ್ ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ. ಗುಣಮಟ್ಟ ಹೆಚ್ಚಿಸಲು ಉತ್ತಮ ಸಂಪರ್ಕಗೊಳ್ಳಲು ಮುಂದಿನ ದಿಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಭಾಗದ ಜನರ ಬೇಡಿಕೆಯಂತೆ ಅರಸಾಳುನಲ್ಲಿ ರೈಲು ನಿಲುಗಡೆಗೆ ಪ್ರಯತ್ನ ಮಾಡಿದ್ದೇನೆ. ರೈತರಿಗೆ ಸ್ವಾಭಿಮಾನ ಬದುಕು ರೂಪಿಸಿಕೊಳ್ಳುವಂತೆ ಮೋದಿಯವರು ರೈತರಿಗೆ ಅನೇಕ ಯೋಜನೆಗಳನ್ನು ತರುವುದರ ಮೂಲಕ ಅಡಿಕೆಗೆ ಬೆಂಬಲ ಬೆಲೆ ಮಾರುಕಟ್ಟೆ ಬೆಲೆಯನ್ನು ನೀಡಿದ್ದಾರೆ. ಇದು ತೀರ್ಥಹಳ್ಳಿ ಕ್ಷೇತ್ರದ ಅಡಿಕೆ ಬೆಳೆಗಾರರಿಗೆ ಅನುಕೂಲವಾಗಿದೆ ಎಂದರು.
ಪಕ್ಕದ ಇರುವಕ್ಕಿಯಲ್ಲಿ ಸಾವಿರ ಎಕರೆ ಜಾಗದಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭಗೊಳ್ಳಲಿದ್ದು, ಇದರಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದೆ. ಇಲ್ಲಿ ಅನೇಕ ಕೃಷಿಗೆ ಸಂಬಂಧಪಟ್ಟ ಸಂಶೋಧನೆಗಳು ನಡೆಯಲಿದೆ. ಇದೊಂದು ಅಂತಾರಾಷ್ಟ್ರೀಯ ಕೃಷಿ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಲಿದೆ ಎಂದರು.
ತೀರ್ಥಹಳ್ಳಿಯಲ್ಲಿ ಅರಣ್ಯ ವಾಸಿಗಳನ್ನು, ರೈತರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ನಮ್ಮ ಪಕ್ಷದ ವತಿಯಿಂದ ಇಲ್ಲಿನ ಜನಪ್ರಿಯ ಶಾಸಕ ಆರಗ ಜ್ಞಾನೇಂದ್ರ ಅವರು ಹೋರಾಟವನ್ನು ನಡೆಸುತ್ತಾ ಬಂದಿದ್ದು, ಸುಪ್ರೀಂ ಕೋರ್ಟ್ ನೀಡಿದ್ದ ರೈತರ ಅರಣ್ಯ ಒತ್ತುವರಿ ತೆರವನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಬೇಕು ಎಂದು ನಮ್ಮ ಪಕ್ಷದ ವತಿಯಿಂದ ನೀಡಿತ್ತು. ಈ ಅರ್ಜಿಗೆ ಮಾನ್ಯತೆ ನೀಡಿದ ಸುಪ್ರೀಂಕೋರ್ಟ್ ಒತ್ತುವರಿ ತೆರವಿಗೆ ತಡೆಯಾಜ್ಞೆ ನೀಡಿರುವುದು ನಮ್ಮ ಶಾಸಕರ ಹೋರಾಟದ ಫಲ ಮತ್ತು ನಮ್ಮ ಹೋರಾಟದ ಫಲವಾಗಿದೆ. ಈ ಕ್ರಮದಿಂದಾಗಿ ರೈತರು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಬಿ.ಸ್ವಾಮಿ ರಾವ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶರಧಿ ಪೂರ್ಣೇಶ್, ಗ್ರಾಪಂ ಅಧ್ಯಕ್ಷೆ ಉಮಾ ಮಹೇಶ್, ಪ್ರಮುಖರಾದ ಬೆಹಳ್ಳಿ ಸತೀಶ್, ಪ್ರಶಾಂತ್ ಕುಕ್ಕೆ, ಎಚ್.ಆರ್. ವೆಂಕಟೇಶ್, ಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವಿವಿಧೆಡೆ ಬಿಜೆಪಿ ಪ್ರಚಾರ ಸಭೆ:
ಸೊರಬದ ಸೈದೂರಿನಲ್ಲಿ ಪೇಜ್ ಪ್ರಮುಖರ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮತ ಯಾಚಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಕುಮಾರ್ ಬಂಗಾರಪ್ಪ, ಮುಖಂಡರಾದ ಪಾಣಿ ರಾಜಪ್ಪ,ರವಿ ಕುಗ್ವೆ, ರಾಜಶೇಖರ್ ಗಾಳಿಪುರ ಉಪಸ್ಥಿತರಿದ್ದರು.
ಮೋದಿ ಮತ್ತೊಮ್ಮೆ ಸಂಕಲ್ಪದೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರರವರ ಪರವಾಗಿ ಶಾಸಕ ಎಸ್. ಕುಮಾರ್ ಬಂಗಾರಪ್ಪ ಹಾಗೂ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಅವರುಗಳು ಬೆನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಮತ ಯಾಚಿಸಿದರು.
ಭದ್ರಾವತಿಯ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ನಡೆದ ವಿಶ್ವಕರ್ಮ ಸಮಾಜದ ಪ್ರಮುಖರ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಕೆ.ಪಿ. ನಂಜುಂಡಿಯವರು ಮಾತಾಡಿದರು. ಈ ಸಂಧರ್ಭದಲ್ಲಿ ಮುಖಂಡರಾದ ಶ್ರೀನಾಥ್, ನಗರ ಅಧ್ಯಕ್ಷ ಅನಂದ್, ವೀರಶೈವ ಮುಖಂಡ ರುದ್ರೇಶ್ ಉಪಸ್ಥಿತರಿದ್ದರು.
ಸೊರಬ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಶಾಸಕ ಎಸ್. ಕುಮಾರ್ ಬಂಗಾರಪ್ಪ, ತಾಲೂಕು ಚುನಾವಣಾ ಉಸ್ತುವಾರಿ ಚೆನ್ನಬಸಪ್ಪ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷ ಅರವಿಂದ್, ಪ್ರಭಾರಿಗಳಾದ ಗಜಾನನ ರಾಯರು, ತಬಲಿ ಬಂಗಾರಪ್ಪ, ಎಂ.ಡಿ. ಉಮೇಶ್, ದ್ವಾರಳ್ಳಿ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
Discussion about this post