ನವದೆಹಲಿ: ಪಾಕಿಸ್ಥಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಭಾರೀ ದಾಳಿಗೆ ಜೈಷ್ ಉಗ್ರ ಸಂಘಟನೆಯ ಸುಮಾರು 300ಕ್ಕೂ ಅಧಿಕ ಉಗ್ರರು ಬಲಿಯಾದ ಬೆನ್ನಲ್ಲೇ, ಮ್ಯಾನ್ಮಾರ್ ಗಡಿಯಲ್ಲೂ ಸಹ ಸೇನೆ ಭಾರೀ ದಾಳಿ ನಡೆಸಿರುವ ಕುರಿತಾಗಿ ವರದಿಯಾಗಿದೆ.
ಇಂತಹುದ್ದೊಂದು ಬೃಹತ್ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಸದ್ದಿಲ್ಲದೇ ನಡೆಸಿದೆ ಎನ್ನಲಾಗಿದ್ದು, ಸೇನೆಯ ಅಬ್ಬರಕ್ಕೆ ಉಗ್ರರ ಸುಮಾರು 12 ಕ್ಯಾಂಪ್’ಗಳು ಪುಡಿ ಪುಡಿಯಾಗಿದ್ದು, ನೂರಾರು ಉಗ್ರರು ನಾಯಿನರಿಗಳಂತೆ ಸತ್ತಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಅಧಿಕೃತ ಮೂಲಗಳಿಂದ ಖಚಿತಗೊಳ್ಳದೇ ಇದ್ದರೂ ಇಂತಹುದ್ದೊಂದು ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಸುದ್ದಿಯಾಗಿದೆ.
ಇನ್ನು ಈ ಕುರಿತಂತೆ ಇಂಡಿಯಾ ಟುಡೆ ಸಹ ವರದಿ ಮಾಡಿದ್ದು ಇದರಂತೆ, ಭಾರತ, ಮ್ಯಾನ್ಮಾರ್ ಸೇನೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಿಜೋರಾಂ ಗಡಿ ಪ್ರದೇಶದಲ್ಲಿ ನಿರ್ಮಾಣವಾಗಿದ್ದ 12ಕ್ಕೂ ಹೆಚ್ಚು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ 3ನೆಯ ಸರ್ಜಿಕಲ್ ಸ್ಟ್ರೈಕ್ ಅನ್ನು ಭಾರತೀಯ ಸೇನೆ ಸದ್ದಿಲ್ಲದೇ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎನ್ನಲಾಗಿದೆ.
ಫೆ.17 ರಿಂದ ಮಾರ್ಚ್ 2ರ ಅವಧಿಯಲ್ಲಿ ಈ ದಾಳಿ ನಡೆಸಲಾಗಿದ್ದು, ಮ್ಯಾನ್ಮಾರ್ ನಲ್ಲಿ ತಲೆ ಎತ್ತಿದ್ದ ಅರಾಕನ್ ಆರ್ಮಿ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಅರಾಕನ್ ಆರ್ಮಿಗೆ ಕಚಿನ್ ಇಂಡಿಪೆಂಡೆನ್ಸ್ ಆರ್ಮಿ(ಕೆಐಎ) ಬೆಂಬಲ ನೀಡಿತ್ತು. ಈ ಎರಡು ಉಗ್ರ ಸಂಘಟನೆಗಳು ಮ್ಯಾನ್ಮರ್ ನಲ್ಲಿ ವಿಧ್ವಸಂಕ ಕೃತ್ಯಗಳನ್ನು ನಡೆಸುತ್ತಿದ್ದವು ಎಂದು ವರದಿಯಾಗಿದೆ.
ಭಾರತ ಯೋಜನೆಯನ್ನು ತಡೆಯಲು ಅರಾಕನ್ ಉಗ್ರರು ದೇಶದೊಳಗೆ ನುಸುಳಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಧಾರಿಸಿ ಭಾರತ ಈ ಕಾರ್ಯಾಚರಣೆಯನ್ನು ನಡೆಸಿದೆ. ಭಾರತದ ಯೋಜನೆಯನ್ನು ತಡೆಯಲು ಅರಾಕನ್ ಉಗ್ರರು ದೇಶದೊಳಗೆ ನುಸುಳಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಧಾರಿಸಿ ಭಾರತೀಯ ಸೇನೆ ಈ ಕಾರ್ಯಾಚರಣೆಯನ್ನು ನಡೆಸಿದೆ. ಚೀನಾದ ಗಡಿ ಪ್ರದೇಶದಿಂದ ಭಾರತಕ್ಕೆ ನುಸುಳಲು ಉಗ್ರರು ಸ್ಕೆಚ್ ರೂಪಿಸಿದ್ದರು. ಈ ಬಗ್ಗೆ ಭಾರತದ ಗುಪ್ತಚರ ಇಲಾಖೆಗೆ ಖಚಿತ ಲಭ್ಯವಾಗಿತ್ತು. ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕಾರ್ಯಾಚರಣೆ ರೂಪರೇಷೆ ರೂಪಿಸಿದ ಸೇನೆ ಕಾರ್ಯಾಚರಣೆಯ ಮೊದಲ ಭಾಗವಾಗಿ ಮಿಜೋರಾಂ ಗಡಿ ಪ್ರದೇಶದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದ್ದು, ಬಳಿಕ ನಾಗಾ ಉಗ್ರರ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಅರುಣಾಚಲ ಪ್ರದೇಶದಿಂದ 1 ಸಾವಿರ ಕಿಮೀ ದೂರದಲ್ಲಿದ್ದ ಉಗ್ರರ ಕೇಂದ್ರಗಳನ್ನು ನಾಶ ಪಡಿಸಲಾಗಿದೆ. 2 ವಾರದ ಕಾಲ ನಡೆದ ಈ ಆಪರೇಷನ್ ಮಾರ್ಚ್ 2 ರಂದು ಅಂತ್ಯವಾಗಿದೆ ಎನ್ನಲಾಗಿದೆ.
ಅರಾಕನ್ ಆರ್ಮಿ ಉನ್ನತ ಮಟ್ಟದ ತರಬೇತಿ ಪಡೆದ ಉಗ್ರರ ಗುಂಪಾಗಿದ್ದು, ಸುಧಾರಿತ ಸ್ಫೋಟಕಗಳನ್ನು ಬಳಸಿ ವಿಧ್ವಂಸಕ ಕೃತ್ಯ ನಡೆಸುತಿತ್ತು. ಒಂದು ಮಾಹಿತಿಯನ್ವಯ ಇದು ಪಾಕಿಸ್ಥಾನ ಉಗ್ರರಿಗಿಂತಲೂ ಸಹ ಅತ್ಯಾಧುನಿಕವಾದ ಸ್ಪೋಟಕ ಹಾಗೂ ದಾಳಿ ತಂತ್ರಗಳನ್ನು ಹೊಂದಿದೆ. ಹೀಗಾಗಿ, ಈ ಉಗ್ರ ಸಂಘಟನೆ ಮ್ಯಾನ್ಮಾರ್, ಭಾರತದ ತಲೆನೋವಿಗೆ ಕಾರಣವಾಗಿತ್ತು. ಮ್ಯಾನ್ಮಾರ್ ಸರ್ಕಾರ ನೀಡಿದ್ದ ಮಾಹಿತಿ ಆಧಾರಿಸಿ ಭಾರತ ಉಗ್ರರನ್ನು ಹೊಡೆದುರಳಿಸಿದೆ.
ಕಾರ್ಯಾಚರಣೆಯಲ್ಲಿ 12ಕ್ಕೂ ಹೆಚ್ಚು ಉಗ್ರರ ಅಡಗುತಾಣಗಳು ನಾಶವಾಗಿರುವುದು ಖಚಿತವಾಗಿದೆ. ಭಾರತ ಸೇನೆಯ ವಿಶೇಷ ದಳಗಳು, ಅಸ್ಸಾಂ ರೈಫಲ್ಸ್ ಹಾಗೂ ಮ್ಯಾನ್ಮಾರ್ ಸೇನೆಯನ್ನು ಬಳಕೆ ಮಾಡಲಾಗಿದೆ. ಕಾರ್ಯಾಚರಣೆಗೆ ಹೆಲಿಕಾಪ್ಟರ್, ಡ್ರೋನ್ ಮತ್ತು ಕಣ್ಗಾವಲು ಸಾಧನಗಳನ್ನು ಕೂಡ ಬಳಕೆ ಮಾಡಲಾಗಿದೆ.
ಮ್ಯಾನ್ಯಾರ್ ಮತ್ತು ಚೀನಾದ ಗಡಿಯನ್ನು ಹೊಂದಿರುವ ಕಚೀನ್ ರಾಜ್ಯದಲ್ಲಿ ಅರಾಕನ್ ಅರ್ಮಿ ಸಂಘಟನೆ ಹೆಚ್ಚು ಸಕ್ರಿಯವಾಗಿದೆ. ಚೀನಾ ಕೆಐಎ ಸಂಘಟನೆ ಕಳೆದ ಎರಡು ವರ್ಷಗಳಲ್ಲಿ 3000 ಅರಾಕನ್ ಉಗ್ರರಿಗೆ ತರಬೇತಿ ನೀಡಿದೆ ಎಂದು ವರದಿಯಾಗಿದೆ.
ಈಗ್ಗೆ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನಮ್ಮ ಸರ್ಕಾರ ಈಗಾಗಲೇ ಎರಡು ಸರ್ಜಿಕಲ್ ಸ್ಟೈಕನ್ನು ಯಶಸ್ವಿಯಾಗಿ ನಡೆಸಿದೆ. ಮೂರನೆಯ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿ ನಾನು ಈಗಲೇ ಏನೂ ಹೇಳುವುದಿಲ್ಲ. ಶೀಘ್ರದಲ್ಲೇ ತಿಳಿಯಲಿದೆ ಎಂದಿದ್ದರು. ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ ಕ್ಯಾಂಪ್ ಧ್ವಂಸ ಮಾಡಿರುವ ಸುದ್ದಿಯನ್ನು ಗಮನಿಸಿದರೆ, ರಾಜನಾಥ್ ಅಂದು ಹೇಳಿದ್ದು ಇದೇ ದಾಳಿ ವಿಚಾರವೇ ಎಂಬ ಪ್ರಶ್ನೆಯನ್ನೇ ಎಂಬ ವಿಚಾರವನ್ನು ಹುಟ್ಟು ಹಾಕಿದೆ.
Discussion about this post