ನವದೆಹಲಿ: ಭಯೋತ್ಪಾದನೆಯನ್ನು ತನ್ನ ಒಡಲಿನಲ್ಲೇ ಪೋಷಿಸುತ್ತಿರುವ ಪಾಪಿ ಪಾಕಿಸ್ಥಾನ ಭಾರತದ ವಿರುದ್ದ ಹೊಸ ಕುತಂತ್ರದ ಸಂಚು ರೂಪಿಸಿದೆ ಎಂದು ವರದಿಯಾಗಿದ್ದು, ಇದಕ್ಕಾಗಿ ಎರಡು ಉಗ್ರ ಸಂಘಟನೆಯನ್ನು ಒಟ್ಟಾಗಿ ಸೇರಿಸಿದೆ ಎನ್ನಲಾಗಿದೆ.
ಈ ಕುರಿತಂತೆ ಭಾರತೀಯ ಗುಪ್ತಚರ ಇಲಾಖೆ ವರದಿ ಮಾಡಿದ್ದು, ಜೈಷ್ ಹಾಗೂ ತಾಲಿಬಾನ್ ಉಗ್ರರನ್ನು ಜಂಟಿಯಾಗಿ ಭಾರತದ ಮೇಲೆ ದಾಳಿ ನಡೆಸಲು ಪಾಕ್ ಸಿದ್ದಪಡಿಸಿದ್ದು, ಈ ಮೂಲಕ ಹೊಸ ಗೇಮ್ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಪಾಕಿಸ್ಥಾನದ ನಟೋರಿಯಸ್ ಸ್ಪೈ ಏಜೆನ್ಸಿ ಐಎಸ್’ಐ ಇಂತಹ ಕುತಂತ್ರವನ್ನು ರೂಪಿಸಿದ್ದು, ಭಾರತದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯ ವಿಧ್ವಂಸಕ ಕೃತ್ಯವನ್ನು ಸದ್ಯದಲ್ಲೇ ನಡೆಸಲು ಸಂಚು ರೂಪಿಸಿದೆ ಎಂಬ ಆಘಾತಕಾರಿ ವಿಚಾರವನ್ನು ಹೊರಹಾಕಿದೆ.
ಬಾಲಾಕೋಟ್’ನಲ್ಲಿ ಭಾರತೀಯ ವಾಯುಪಡೆ ದಾಳಿ ನಡೆಸಿ, ಸುಮಾರು 300ಕ್ಕೂ ಅಧಿಕ ಜೈಷ್ ಉಗ್ರರನ್ನು ಬಲಿ ಹಾಕಿತ್ತು. ಆದರೆ ಇದನ್ನು ಪಾಕ್ ಮುಚ್ಚಿ ಹಾಕಿದ್ದು, ನಮ್ಮ ನೆಲದಲ್ಲಿ ಯಾರೂ ಸತ್ತಿಲ್ಲ ಎಂದು ತಿಪ್ಪೆ ಸಾರಿಸಿತ್ತು. ಆದರೆ, ಈ ದಾಳಿಯ ಹಿನ್ನೆಲೆಯಲ್ಲೇ ಸೇಡು ತೀರಿಸಿಕೊಳ್ಳಲು ಪಾಕ್ ಹಾಗೂ ಉಗ್ರ ಸಂಘಟನೆಗಳು ಈ ಭಯಾನಕರ ದಾಳಿ ಸಂಚು ರೂಪಿಸಿವೆ ಎನ್ನಲಾಗಿದೆ.
Discussion about this post