ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ನೈಋತ್ಯ ರೈಲ್ವೆಯ (SWR) ತುಮಕೂರು ನಿಲ್ದಾಣದ ಯಾರ್ಡ್’ನ ಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿಗೆ ಅನುಕೂಲವಾಗುವಂತೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ (Yeshvantpur) ಯಶವಂತಪುರ – ಶಿವಮೊಗ್ಗ (Shivamogga) ಹಾಗೂ ತಾಳಗುಪ್ಪ-ಮೈಸೂರು (Mysuru) ನಡುವಿನ ಎರಡು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, 2026ರ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಕೆಳಕಂಡ ರೈಲುಗಳ ನಿರ್ಗಮನ ಸಮಯವನ್ನು ಮರುನಿಗದಿಪಡಿಸಲಾಗುತ್ತದೆ.
SWR : ತಾಳಗುಪ್ಪ – ಬೆಂಗಳೂರು ಎಕ್ಸ್’ಪ್ರೆಸ್ ವಿಳಂಬ
ರೈಲು ಸಂಖ್ಯೆ 20689 – ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್: ಯಶವಂತಪುರದಿಂದ ಈ ರೈಲಿನ ನಿರ್ಗಮನವನ್ನು 75 ನಿಮಿಷಗಳ ಕಾಲ ವಿಳಂಬಗೊಳಿಸಲಾಗುತ್ತದೆ.
Also Read>> Grace and Rhythm Mark Sukthi’s Bharatanatyam Performance at Sampattu
ಇನ್ನು, ರೈಲು ಸಂಖ್ಯೆ 20652 – ತಾಳಗುಪ್ಪ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್: 2026ರ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಕೆಳಕಂಡ ರೈಲುಗಳನ್ನು ಉಲ್ಲೇಖಿಸಿರುವ ದಿನಾಂಕಗಳಂದು ನಿರ್ದಿಷ್ಟ ಅವಧಿಗೆ ಮಾರ್ಗಮಧ್ಯೆ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












