ನವದೆಹಲಿ: ಗಡಿಯಲ್ಲಿ ಪಾಕಿಸ್ಥಾನದ ಉಪಟಳ ಮುಂದುವರೆದಿರುವಂತೆಯೇ, ಶತ್ರುರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭಯೋತ್ಪಾದನೆ ಹಾಗೂ ಉಗ್ರವಾದ ಎಂದಿಗೂ ಒಟ್ಟಾಗಿ ಸಾಗುವುದಿಲ್ಲ ಎಂದಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ಕದನ ವಿರಾಮವನ್ನು ನಾವು ಗೌರವಿಸುತ್ತೇವೆ. ಆದರೆ, ಪಾಕ್ ನಮ್ಮನ್ನು ಕೆಣಕಿದರೆ ನಮ್ಮ ಪ್ರತಿದಾಳಿ ಆರಂಭವಾದರೆ, ಸ್ಥಗಿತಗೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕದನ ವಿರಾಮವನ್ನು ಪಾಕ್ ಗೌರವಿಸದೇ ಇದ್ದರೆ ನಾವು ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದಿದ್ದಾರೆ.
ಪ್ರಸ್ತುತ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವಂತೆ ಪಾಕ್‌ಗೆ ಭಾರತ ಹೇಳಿತ್ತು. ಆದರೆ, ಪಾಕ್ ಮಾತ್ರ 2003ರ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ, ನಿರಂತರವಾಗಿ ಅಪ್ರಚೋದಿತ ದಾಳಿ ನಡೆಸುತ್ತಲೇ ಇದ್ದು, ಇದಕ್ಕೆ ಬಿಎಸ್‌ಎಫ್‌ನ ಇಬ್ಬರು ಯೋಧರು ಭಾನುವಾರ ವೀರಸ್ವರ್ಗ ಸೇರಿದ್ದರು.
Discussion about this post