ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಪರಾಧಿ ಚಿನ್ನಮ್ಮ ಶಶಿಕಲಾ ಗೆ ಕನ್ನಡ ಕಲಿಯುವ ಆಸಕ್ತಿ ಬಂದಿದೆಯಂತೆ.
ಈ ಕುರಿತಂತೆ ಮಾಹಿತಿ ತಿಳಿದುಬಂದಿದ್ದು, ಜೈಲಿನಲ್ಲಿದ್ದುಕೊಂಡೇ ಕನ್ನಡ ಸ್ನಾತಕೋತ್ತರ ಪದವಿ ಪಡೆಯುವ ಬಯಕೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಿದದ್ದು, ಈ ಬಗ್ಗೆ ವಿವಿ ಸಿಬ್ಬಂದಿ ಜೊತೆ ಜೈಲಾಧಿಕಾರಿಗಳು ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ವಿವಿ ಸಿಬ್ಬಂದಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಲಿದ್ದಾರೆ.
ಭೇಟಿ ನಂತರ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲಿದ್ದು, ಈಗಾಗಲೇ ಕನ್ನಡ ಕಾಗುಣಿತ ಕಲಿಯುತ್ತಿದ್ದಾರೆ.
ಸಹ ಕೈದಿಗಳ ಜೊತೆ ಕನ್ನಡದಲ್ಲಿ ಮಾತನಾಡುತ್ತಿರುವ ಶಶಿಕಲಾ, ನಾಲ್ಕು ವರ್ಷದ ಶಿಕ್ಷೆಯ ಅವಧಿಯ ನಡುವೆ ಪೂರ್ಣ ಪ್ರಮಾಣದ ಕನ್ನಡ ಕಲಿಯುವ ಬಯಕೆ ವ್ಯಕ್ತಪಡಿಸಿದ್ದಾರೆ.
















