ಕಲ್ಪ ಮೀಡಿಯಾ ಹೌಸ್ | ತಮಿಳುನಾಡು |
ಹೊಸೂರ್ ನ ಹೋಟೆಲ್ ಫಾಚೂರ್ನ್ ನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾಲಯ ದವರು ಬೆಂಗಳೂರು ಬಗಲಗುಂಟೆಯ ನಿಸರ್ಗ ವಿದ್ಯಾನಿಕೇತನದ ಅಧ್ಯಕ್ಷ ಉದಯ ರತ್ನ ಕುಮಾರ್ ರವರಿಗೆ ಶೈಕ್ಷಣಿಕ ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಯಿತು.
ಶ್ರೀಯುತರು ಕಳೆದ 3 ದಶಕದಿಂದ ಶಿಕ್ಷಣ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ನಿಸರ್ಗ ವಿದ್ಯಾ ನಿಕೇತನ ಶಾಲೆ ಸ್ಥಾಪಿಸಿ ಸಮಾಜಮುಖಿ ಸೇವಾ ತತ್ಪರಾಗಿದ್ದಾರೆ.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿದ್ದ ಗ್ಲೋಬಲ್ ವಿಷ್ಣು ಸಹಸ್ರನಾಮ ಫೆಡರೇಶನ್ ಅಧ್ಯಕ್ಷ ಡಾ ಕೆ. ವಿ ಮಣಿ (ನಿ. ಗ್ರೂಪ್ ಕ್ಯಾಪ್ಟನ್) ರವರಿಗೆ ‘ವಿಷ್ಣು ಸಹಸ್ರ ನಾಮ ಕೌಸ್ತುಭ ‘ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ವೇದಿಕೆಯಲ್ಲಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಮಾಧ್ಯಮ ಸಮನ್ವಯಕಾರ ಡಾ ಗುರುರಾಜ ಪೋಶೆಟ್ಟಿಹಳ್ಳಿ, ಡಾ ಕೃಷ್ಣಮೂರ್ತಿ ಸ್ವಾಮೀಜಿ, ನಿವೃತ್ತ ಎಸಿಪಿ ಲಯನ್ ಡಾ. ಎಸ್ ಬಿ ಛಬ್ಬಿ, ಸುಕ್ಷೇತ್ರ ಅಂಕಲಿ ಮಠದ ಬಸವರಾಜ ಸ್ವಾಮೀಜಿ, ಆಚಾರ್ಯ ಜ್ಞಾನೇಶ್ವರ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post