ಕಲ್ಪ ಮೀಡಿಯಾ ಹೌಸ್ | ತಮಿಳುನಾಡು |
ನಟ ತ್ರಿಷಾ ಮದುವೆ ವಿಚಾರವಾಗಿ ನಟ, ವಿವಾದಿತ ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ತ್ರಿಷಾ ಈವರೆಗೂ ಮದುವೆ ಆಗದೇ ಇರುವುದಕ್ಕೆ ಸ್ಟಾರ್ ನಟರಾದ ಸಿಂಬು ಮತ್ತು ರಾಣಾ ಕಾರಣ ಎಂದು ಹೇಳಿದ್ದಾರೆ.
ಇಬ್ಬರ ಜೊತೆಯೂ ತ್ರಿಷಾ ಲವ್ ಇತ್ತು. ಒಬ್ಬರ ನಂತರ ಒಬ್ಬರು ತ್ರಿಷಾಗೆ ಮೋಸ ಮಾಡಿ ದೂರವಾದರು. ಇದರಿಂದಾಗಿ ತ್ರಿಷಾ ಮದುವೆ ಆಗದೇ ಹಾಗೆಯೇ ಉಳಿದುಕೊಂಡಿದ್ದಾರೆ ಎಂದು ಬೈಲ್ವಾನ್ ಮಾತನಾಡಿದ್ದಾರೆ.
ಬೈಲ್ವಾನ್ ಅವರ ಈ ಹೇಳಿಕೆ ತಮಿಳು ಚಿತ್ರೋದ್ಯಮದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದ್ದು, ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಬೈಲ್ವಾನ್ ರಂಗನಾಥನ್ ವಿರುದ್ಧ ಹರಿಹಾಯ್ದಿದ್ದಾರೆ.
Also read: ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ
ಮೊನ್ನೆಯಷ್ಟೇ ‘ಪೊನ್ನಿಯನ್ ಸೆಲ್ವನ್ 2’ ಪತ್ರಿಕಾಗೋಷ್ಠಿಯಲ್ಲಿ ತ್ರಿಷಾ ಮದುವೆ ವಿಚಾರ ಮಾತನಾಡಿದ್ದರು. ‘ಮದುವೆ ಎನ್ನುವುದು ಕನಸಿನ ಮಾತು, ನನ್ನ ಜೀವನ ಅಭಿಮಾನಿಗಳಿಗೆ ಮೀಸಲು’ ಎಂದಿದ್ದರು.
ನಲವತ್ತರ ಸನಿಹದ ತ್ರಿಷಾ ಈ ಹಿಂದೆ ಉದ್ಯಮಿಯೊಬ್ಬರನ್ನು ಮದುವೆ ಆಗಲಿದ್ದಾರೆ ಎಂದು ಸುದ್ದಿ ಆಗಿತ್ತು. ಎಲ್ಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಆಯಿತು ಎನ್ನುವ ಮಾಹಿತಿ ಹೊರಬಿತ್ತು. ಈ ಹಿಂದೆಯೂ ತ್ರಿಷಾ ಅವರ ಜೀವನದಲ್ಲಿ ಲವ್ ಫೆಲ್ಯೂವರ್ ಆಗಿದ್ದರಿಂದ ಮದುವೆ ವಿಚಾರವನ್ನೇ ಅವರು ಮರೆತಿದ್ದಾರೆ ಎಂದು ಹೇಳಲಾಗಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















