ಕಲ್ಪ ಮೀಡಿಯಾ ಹೌಸ್ | ಟೆಲ್ ಅವೀವ್ |
ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಪ್ಯಾಲೆಸ್ತೀನ್ ಮೇಲೆ ನಿರಂತರ ಸಮರ ಸಾರಿದ್ದ ಇಸ್ರೇಲ್ ಸೇನೆ ಯುದ್ಧ ಆರಂಭವಾದ 5 ದಿನಗಳಲ್ಲೇ ಗಾಜಾಪಟ್ಟಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರವು ದಿನೇದಿನೇ ಉಗ್ರರೂಪ ತಾಳುತ್ತಿದ್ದು, ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ಉಗ್ರರು, ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದೆ.
ಹಮಾಸ್ ಉಗ್ರರನ್ನು ನಿರ್ನಾಮ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿರುವ ಇಸ್ರೇಲ್ ಈಗ ತನ್ನ ದಾಳಿ ತೀವ್ರಗೊಳಿಸಿದೆ. ಪ್ಯಾಲೆಸ್ತೀನ್ ನೊಂದಿಗಿನ ಯುದ್ಧ ಚಾಲ್ತಿಯಲ್ಲಿರುವಂತೆ ಮತ್ತೊಂದು ಬದಿಯಲ್ಲಿ ಇಸ್ರೇಲ್ ಮೇಲೆ ಇದೀಗ ಬಹು ರಾಷ್ಟ್ರೀಯ ದಾಳಿ ನಡೆಯುತ್ತಿದ್ದು, ಲೆಬನಾನ್ ಮತ್ತು ಸಿರಿಯಾ ದೇಶಗಳೂ ಕೂಡ ಗಡಿಯಲ್ಲಿ ಇಸ್ರೇಲ್ ಸೇನೆ ಮೇಲೆ ದಾಳಿ ನಡೆಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post