ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೈದರಾಬಾದ್: ಪಶುಗಳಿಗಿಂತಲೂ ಭೀಕರವಾಗಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ ಆರೋಪಿಗಳ ಪರವಾಗಿ ವಾದಿಸದೇ ಇರುವಂತನ ಐತಿಹಾಸಿಕ ನಿರ್ಧಾರವನ್ನು ತೆಲಂಗಾಣ ವಕೀಲರ ಸಂಘ ಕೈಗೊಂಡಿದೆ.
ಪ್ರಕರಣದ ಆರೋಪಿಗಳಾದ ಮೊಹ್ಮದ್ ಆರೀಫ್, ಜೊಲ್ಲು ಶಿವ, ಜೊಲ್ಲು ನವೀನ್ ಹಾಗೂ ಚಿಂತಕುಂಟ ಚೆನ್ನಕೇಶವಲು ಅವರುಗಳನ್ನು ಇಂದು ಮಧ್ಯಾಹ್ನದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಇದಕ್ಕೂ ಮುನ್ನ ಇಂದು ಸಭೆ ಸೇರಿದ ವಕೀಲರ ಸಂಘದ ಮುಖ್ಯಸ್ಥರು ಯಾರೂ ಸಹ ಆರೋಪಿಗಳ ಪರವಾಗಿ ವಾದ ಮಂಡಿಸದೇ ಇರಲು ನಿರ್ಧರಿಸುವ ಮೂಲಕ ದೇಶದ ಎಲ್ಲ ವಕೀಲರಿಗೆ ಮಾದರಿಯಾಗುವಂತಹ ನಿರ್ಧಾರವನ್ನು ಕೈಗೊಂಡಿದ್ದಾರೆ.
ಇದರೊಂದಿಗೆ ಶಾದ್ ನಗರದ ಬಾರ್ ಅಸೋಸಿಯೇಷನ್ ಸಹ ನಿರ್ಧಾರ ಪ್ರಕಟಿಸಿದ್ದು, ಆರೋಪಿಗಳಿಗೆ ಯಾವುದೇ ರೀತಿಯ ಕಾನೂನು ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಂಚರ್ ಆಗಿದ್ದ ಸ್ಕೂಟರ್ ಟೈರ್ ರಿಪೇರಿ ಮಾಡಿಕೊಡುತ್ತೇವೆ ಎಂದು ಬಂದ ಈ ರಾಕ್ಷಸರು ಪ್ರಿಯಾಂಕಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿ, ಮೃತದೇಹವನ್ನು ಬ್ಲಾಂಕೆಂಟ್’ನಿಂದ ಸುತ್ತಿ ಭೀಕರವಾಗಿ ಸುಟ್ಟುಹಾಕಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಭಾರೀ ಆಕ್ರೋಶ ಹಾಗೂ ಸಂಚಲನ ಮೂಡಿಸಿರುವ ಪ್ರಕರಣ ಇದಾಗಿದ್ದು, ಆರೋಪಿಗಳಿಗೆ ಅತ್ಯಂತ ಉಗ್ರ ಶಿಕ್ಷೆ ವಿಧಿಸಬೇಕು ಎಂಬ ಕೂಗು ಎಲ್ಲಡೆ ಕೇಳಿಬರುತ್ತಿದೆ.
Get in Touch With Us info@kalpa.news Whatsapp: 9481252093







Discussion about this post