ಕಲ್ಪ ಮೀಡಿಯಾ ಹೌಸ್ | ತೆಲಂಗಾಣ |
ನೀವು ಬಿರಿಯಾನಿ ಪ್ರಿಯರಾ? ಬಿರಿಯಾನಿ ಸಿಕ್ಕರೆ ಹಿಂದೆ ಮುಂದೆ ನೋಡದೇ ತಿನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಲೇಬೇಕು.
ಹೈದರಾಬಾದ್’ನ ಹಿರಿಯ ವ್ಯಕ್ತಿಯೊಬ್ಬರು ಮಟನ್ ಬಿರಿಯಾನಿ ತಿನ್ನುವ ವೇಳೆ ಸುಮಾರು 3.5 ಸೆಂಟಿ ಮೀಟರ್ ಉದ್ದದ ಮಟನ್ ಮೂಳೆಯೊಂದು ಅವರ ಅನ್ನನಾಳದಲ್ಲಿ ಸಿಲುಕಿ ತೊಂದರೆಗೀಡಾಗಿ, ಕೊನೆಗೆ ಶಸ್ತçಚಿಕಿತ್ಸೆ ಮೂಲಕ ಅದನ್ನು ಹೊರತೆಗೆದ ಘಟನೆ ನಡೆದಿದೆ.

Also read: ವಿಚಿತ್ರ ಘಟನೆ | ಕಾರಿನಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ ಪೊಲೀಸರು
ಅನ್ನನಾಳದ ಒಂದು ಬದಿಗಂಟಿಕೊಂಡಿದ್ದ ಮೂಳೆ, ಹೃದಯಕ್ಕೂ ಸಮಸ್ಯೆ ತಂದಿಟ್ಟಿತ್ತು. ಅದೃಷ್ಟಕ್ಕೆ 66 ವರ್ಷದ ಹಿರಿಯರ ಜೀವ ನೆರೆಯ ರಾಜ್ಯ ತೆಲಂಗಾಣದ ನಲ್ಲಗುಂದ ಕಕ್ಕಿರೇನಿ ಗ್ರಾಮದ ನಿವಾಸಿ ಕೆಲದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.

ಅಲ್ಲಿ ಪರಿಶೀಲಿಸಿದಾಗ, ವೃದ್ಧರ ಅನ್ನನಾಳದಲ್ಲಿ ಮಟನ್ ಮೂಳೆ ಇರುವುದು ಗೊತ್ತಾಗಿದೆ. ಆ ಬಳಿಕ ಶಸ್ತçಚಿಕಿತ್ಸೆ ನಡೆಸಿದ್ದಾರೆ. ಇನ್ನು ಹಿರಿಯರಿಗೆ ಹಲ್ಲುಗಳು ಇಲ್ಲದ ಹಿನ್ನೆಲೆಯಲ್ಲಿ ಮೂಳೆಯು ಸರಿಯಾಗಿ ಜಗಿಯಲಾಗದೇ ಅನ್ನನಾಳ ಸೇರಿಕೊಂಡಿರಬಹುದು ಎಂದು ಊಹಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post